ಉಜಿರೆ:(ಆ.18) ಎಸ್.ಡಿ.ಎಂ.ಕಾಲೇಜು (ಸ್ವಾಯತ್ತ) ಉಜಿರೆ , ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸುವರ್ಣ ಸಂಭ್ರಮಾಚರಣೆ , ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್(ರಿ.) ಉಜಿರೆ ಇದರ ನೇತೃತ್ವದಲ್ಲಿ, ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳು(ರಿ.) ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ , ಪತ್ರಕರ್ತರ ಸಂಘ, ಬೆಳ್ತಂಗಡಿ ,
ಇದನ್ನೂ ಓದಿ: 🛑ಡೆಹ್ರಾಡೂನ್: ಕೋಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿ ಕೊಲೆ, ಅತ್ಯಾಚಾರ ಪ್ರಕರಣದ ಬೆನ್ನಲ್ಲೇ
ಎಸ್.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಉಜಿರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿ.ಸಿ.ಟ್ರಸ್ಟ್ ಬೆಳ್ತಂಗಡಿ ಇದರ ಸಹಯೋಗದಿಂದ ಬೃಹತ್ ರಕ್ತದಾನ ಶಿಬಿರವು ಆ.18 ರಂದು ಕೃಷ್ಣಾನುಗ್ರಹ ಸಭಾ ಭವನ ಉಜಿರೆಯಲ್ಲಿ ನಡೆಯಿತು.
ಸಿರಿ ಸಂಸ್ಥೆಯ ನಿರ್ದೇಶಕ ಮುಖ್ಯಸ್ಥ ಕೆ.ಜನಾರ್ದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,”ಮಾನವನು ಹಲವಾರು ದಾನಗಳನ್ನು ಮಾಡಬಹುದು. ಆದರೆ ಬಹಳ ರಕ್ತದಾನ ಇದರಲ್ಲಿ ಶ್ರೇಷ್ಠವಾದುದು. 51 ಬಾರಿ ರಕ್ತದಾನ ಮಾಡಿದ ತೃಪ್ತಿ ನನಗಿದೆ.ಇಂದು ಇಲ್ಲಿ ರಕ್ತದಾನ ಮಾಡಲು ಬಂದಿರುವ ಎಲ್ಲರೂ ಪುಣ್ಯದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೀರಿ” ಎಂದು ಅವರು ಹೇಳಿದರು.
ಶ್ರೀ. ಧ. ಮಂ ಕಾಲೇಜು (ಸ್ವಾಯತ್ತ) ಉಜಿರೆಯ ಪ್ರಾಂಶುಪಾಲ ಡಾ.ಬಿ.ಎ ಕುಮಾರ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. “ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಮಾನವನ ರಕ್ತವನ್ನು ಯಾರು ಕೂಡ ಹೊಸದಾಗಿ ಉತ್ಪತ್ತಿ ಮಾಡಲು ಸಾಧ್ಯವಾಗಿಲ್ಲ. ಎಷ್ಟೋ ಜನರು ಈಗಲೂ ಆಸ್ಪತ್ರೆಗಳಲ್ಲಿ ರಕ್ತಕ್ಕಾಗಿ ಕಾಯುತ್ತಿರುತ್ತಾರೆ.ಇನ್ನೊಬ್ಬರ ಜೀವ ಉಳಿಸುವ ಕಾಯಕದಲ್ಲಿ ನೀವಿದ್ದೀರಿ. ಆದ್ದರಿಂದ ಆತ್ಮವಿಶ್ವಾಸ ಮತ್ತು ಧೈರ್ಯದಿಂದ ರಕ್ತದಾನ ಮಾಡಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ರೋಟರಿ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷ ರೊ. ಪೂರನ್ ವರ್ಮ,ಎಸ್.ಡಿ.ಎಂ.ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಜನಾರ್ದನ ಎಂ. , ಎಸ್.ಕೆ.ಡಿ.ಆರ್.ಡಿ. ಪಿ. , ಬಿ.ಸಿ. ಟ್ರಸ್ಟ್ ಬೆಳ್ತಂಗಡಿಯ ಯೋಜನಾಧಿಕಾರಿ ಸುರೇಂದ್ರ , ರೋಟರಿ ಬೆಳ್ತಂಗಡಿಯ ಕಾರ್ಯದರ್ಶಿ ಸಂದೇಶ್, ಎನ್.ಎಸ್.ಎಸ್.ಘಟಕದ ಯೋಜನಾಧಿಕಾರಿಗಳಾದ ಡಾ.ಮಹೇಶ್ ಕುಮಾರ್ ಶೆಟ್ಟಿ ಹೆಚ್, ಪ್ರೊ.ದೀಪಾ ಆರ್. ಪಿ. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ರೀತಿಯಲ್ಲಿ ಸಹಕರಿಸಿದ ಮಹನೀಯರಾದ ಅಕ್ಷರ ಪ್ರಿಂಟರ್ಸ್ ಮಾಲಕ ಅನಿಲ್ ಕುಮಾರ್ ಶಿಬಾಜೆ, ಯು ಪ್ಲಸ್ ಚಾನೆಲ್ ಮುಖ್ಯಸ್ಥ ದಿನೇಶ್ ಕೋಟ್ಯಾನ್, ಪ್ರಮುಖರಾದ ರಾಘವೇಂದ್ರ ನಿಡಿಗಲ್ , ರಶ್ನಿ ಸ್ಟುಡಿಯೋ ಮಾಲಕ ರಾಮಕೃಷ್ಣ ರೈ, ಯಶೋಧರ ನಾಯ್ಕ ಇವರನ್ನು ಸನ್ಮಾನಿಸಲಾಯಿತು.
ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಸುರಕ್ಷಾ ಮೆಡಿಕಲ್ ನ ಶ್ರೀಧರ್ ಕೆ.ವಿ ವಂದಿಸಿದರು. ತಿಮ್ಮಯ್ಯ ನಾಯ್ಕ ಮತ್ತು ಸಮೀಕ್ಷಾ ಶಿರ್ಲಾಲು ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ.ಮಹೇಶ್ ಕುಮಾರ್ ಶೆಟ್ಟಿ ಹೆಚ್, ದೀಪಾ ಆರ್.ಪಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಹಕರಿಸಿದರು.
ಉದ್ಘಾಟನಾ ಸಮಾರಂಭದ ನಂತರ ನಡೆದ ಶಿಬಿರದಲ್ಲಿ ಸುಮಾರು 225 ಯುನಿಟ್ ಗಳಷ್ಟು ರಕ್ತವನ್ನು ಸಂಗ್ರಹಿಸಲಾಯಿತು.