ಬಾಂಗ್ಲಾದೇಶ:(ಆ.19) ಬಾಂಗ್ಲಾದೇಶದಲ್ಲಿ ಮೀಸಲಾತಿ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ದೇವಸ್ಥಾನಗಳನ್ನು ಧ್ವಂಸಗೊಳಿಸಿ ಹಿಂದೂಗಳ ಮನೆಯೊಳಗೆ ನುಗ್ಗಿ ದೌರ್ಜನ್ಯ ನಡೆಸಲಾಗುತ್ತಿದೆ. ಕೆಲವು ಭಾಗದಲ್ಲಿ ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ ಎಂದು ವರದಿಯಾಗುತ್ತಿದೆ. ಇದರ ನಡುವೆ 2001ರಲ್ಲಿ ನಡೆದ ಭಯಾನಕ ಅತ್ಯಾಚಾರ ಪ್ರಕರಣವೊಂದು ನೆನಪಿಗೆ ಬಂದು ಕಣ್ಣಲ್ಲಿ ನೀರು ತರಿಸುತ್ತದೆ. ಒಮ್ಮೆಲೆ ಮನಸ್ಸನ್ನು ಹಿಂಡಿಬಿಡುತ್ತದೆ.
ಇದನ್ನೂ ಓದಿ: 🛑ನವದೆಹಲಿ: ಸ್ನೇಹಿತನ ಜೊತೆ ಮಾತನಾಡುತ್ತಿದ್ದಾಗ ತಲೆ ಮೇಲೆ ಬಿದ್ದ ಎಸಿ ಬಾಕ್ಸ್ – ಯುವಕ ಸಾವು
ಬಾಂಗ್ಲಾ ದೇಶದ ಪೂರ್ಣಿಮ ಎಂಬ ಹೆಣ್ಣುಮಗಳಿಗೆ 8ನೇ ಅಕ್ಟೋಬರ್ ಅಂದರೆ ಇಂದಿಗೂ ಕರಾಳ ದಿನ. ಆ ದಿನ ಎದುರಾದರೆ ಆಕೆ ಗಡ ಗಡ ನಡುಗುತ್ತಾಳೆ. ಅದು, 2001ರ ಸಮಯ. ಪೂರ್ಣಿಮಾ ತಂದೆ ಅನಿಲ್ ಚಂದ್ರ ಹಾಗೂ ತಾಯಿ ಜೊತೆಯಲ್ಲಿ ವಾಸವಾಗಿದ್ದರು. ಪೂರ್ಣಿಮಾ ವಾಸವಾಗಿದ್ದ ಮನೆಯ ಪಕ್ಕದಲ್ಲಿದ್ದ 30 ಜನರು ಆಕೆಯ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ನಡೆಸಿದ್ದರು.
ಖಲೀದಾ ಜಿಯಾ ಪಾರ್ಟಿಯ ಸುಮಾರು 25-30 ಜನರು ಪೂರ್ಣಿಮಾ ಮನೆಗೆ ನುಗಿದ್ದರು. ಮೊದಲು ಪೂರ್ಣಿಮಾ ತಾಯಿ ಜೊತೆ ಅನುಚಿತವಾಗಿ ವರ್ತಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಮನೆಯಲ್ಲಿದ್ದ ಪೂರ್ಣಿಮಾ ಮೇಲೆ ಪೋಷಕರ ಮುಂದೆಯೇ ಅತ್ಯಾಚಾರ ನಡೆಸಲಾಗಿತ್ತು. ಅತ್ಯಾಚಾರದಿಂದಾಗಿ ಪೂರ್ಣಿಮಾ ಪದೇ ಪದೇ ಪ್ರಜ್ಞೆ ಕಳೆದುಕೊಳ್ಳುತ್ತಿದ್ದರು. ಕಾಮುಕರು ಎಷ್ಟು ಕ್ರೂರಿಗಳಾಗಿದ್ರು ಅಂದ್ರೆ ಪೂರ್ಣಿಮಾ ಪ್ರಜ್ಞೆ ಕಳೆದುಕೊಂಡರೆ ಮುಖಕ್ಕೆ ನೀರು ಎರಚಿ ಅತ್ಯಾಚಾರ ಎಸಗುತ್ತಿದ್ದರು.
ಆ ಭಯಾನಕ ಘಟನೆ ವೇಳೆ 12 ವರ್ಷದ ಪೂರ್ಣಿಮಾ ಸ್ಥಿತಿ ತುಂಬಾ ಗಂಭೀರವಾಗಿತ್ತು. ಪೂರ್ಣಿಮಾ ನೋವಿನಿಂದ ಜೋರಾಗಿ ಅಳುತ್ತಿದ್ದಳು. 30 ಕಾಮುಕ ಪಿಶಾಚಿಗಳು ಒಮ್ಮೆಲೇ ಆಕೆಯನ್ನು ಮುತ್ತುತ್ತಿದ್ದವು. ಮನಬಂದಂತೆ ಬಳಸಿಕೊಳ್ಳುತ್ತಿದ್ದವು. ಮಗಳ ಮೇಲಿನ ಈ ಭೀಕರ ಅತ್ಯಾಚಾರ ಕಂಡ ತಾಯಿ ಹೆದರಿ ದಯವಿಟ್ಟು, ಪ್ಲೀಸ್ ಆಕೆ ಮೇಲೆ ಒಬ್ಬೊಬ್ಬರೇ ಬಂದು ಅತ್ಯಾಚಾರ ಎಸಗಿ. ಎಲ್ಲರೂ ಒಟ್ಟಿಗೆ ಅತ್ಯಾಚಾರ ನಡೆಸಿದರೆ ನನ್ನ ಮಗಳು ಜೀವಂತವಾಗಿ ಉಳಿಯಲ್ಲ. ಇಲ್ಲವಾದ್ರೆ ನನ್ನ ಮಗಳು ಸತ್ತು ಹೋಗ್ತಾಳೆ. ಈಗಾಗಲೇ ಆಕೆ ರಕ್ತದ ಮಡುವಿನಲ್ಲಿದ್ದಾಳೆ ಎಂದು ದುಷ್ಕರ್ಮಿಗಳ ಮುಂದೆ ಬೇಡಿಕೊಂಡಿದ್ದರು.
ಪೂರ್ಣಿಮಾ ಇಂದಿಗೂ ಜೀವಂತವಾಗಿದ್ದು, ನೊಂದ ಮಹಿಳೆಯರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಹೋರಾಟ ನಡೆಸುತ್ತಿದ್ದಾರೆ. ನನ್ನ ಮೇಲೆ ಅತ್ಯಾಚಾರ ನಡೆಸಿದವರೆಲ್ಲರನ್ನೂ ಇಂದಿಗೂ ಗುರುತಿಸುತ್ತೇನೆ. ಕಾರಣ ಅವರೆಲ್ಲರೂ ನನ್ನ ನೆರೆಹೊರೆಯವರು ಆಗಿದ್ದವರು ಎಂದು ಪೂರ್ಣಿಮಾ ಹೇಳುತ್ತಾರೆ.