Fri. Dec 27th, 2024

Ujire‌ : ಉಜಿರೆ SDM ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಶಾಲೆಯಲ್ಲಿ “ಸಂಸ್ಕೃತೋತ್ಸವ”

ಉಜಿರೆ :(ಆ.19) “ಸಂಸ್ಕೃತ ಭಾಷೆ ಎಲ್ಲ ಭಾಷೆಗಳ ಜನನಿ. ಭಾರತದ ಪ್ರತಿಷ್ಠೆ ಎರಡು. ಮೊದಲನೆಯದು ಸಂಸ್ಕೃತಿ, ಎರಡನೆಯದು ಸಂಸ್ಕೃತ.” ಎಂದು ಸಂಸ್ಕೃತ ವಿದ್ವಾಂಸರು ಹಾಗೂ ಜೋತಿಷ್ಯರು ಆಗಿರುವ ಡಾ.ಯತೀಶ್ ಪೊದುವಾಳ್ ಇವರು ಹೇಳಿದರು.

ಇದನ್ನೂ ಓದಿ: 🎬ಮಂಗಳೂರು: “ಕಲ್ಜಿಗ” ಚಿತ್ರದ ಟ್ರೇಲರ್ ಬಿಡುಗಡೆ

ಇವರು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ,(ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ‘ಆತ್ಮಾನಂ ಸಂಸ್ಕೃತಂ ಮನ್ಯೆ’ ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಲಾಗಿದ್ದ ‘ಸಂಸ್ಕೃತೋತ್ಸವ’ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಸ್ಕೃತ ಜಯ ಘೋಷಗಳೊಂದಿಗೆ ಮೆರವಣಿಗೆ, ಸಂಸ್ಕೃತ ವಸ್ತು ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಶಾಲಾ ಶೈಕ್ಷಣಿಕ ಸಂಯೋಜಕಿ ಶಿಕ್ಷಕಿ ಸುಮಾ ಶ್ರೀನಾಥ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ವಿದ್ಯಾರ್ಥಿನಿಯರಾದ ಇನಿಕ ಮತ್ತು ಹರ್ಷಿಣಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಆಶುತೋಷ್ ಹಾಗೂ ದೀಪ್ತಿ ಜೈನ್ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕಿ ಶಿಕ್ಷಕಿ ಸುಜನ ವಲ್ತಾಜೆ ವಂದಿಸಿದರು.

Leave a Reply

Your email address will not be published. Required fields are marked *