ಬೆಳ್ತಂಗಡಿ:(ಆ.20) ಜೆಸಿಐ ಭಾರತದ ಅಮೃತ ಮಹೋತ್ಸವ ವರ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಡ್ವಕೇಟ್ ಸಿ ಆರ್ ರಿಕೇಶ್ ಶರ್ಮಾರವರು ತಮ್ಮ ವಲಯ 15ರ ಅಧಿಕೃತ ಭೇಟಿಯನ್ನು ಆಗಸ್ಟ್ 21 ಮತ್ತು 22ರಂದು ಹಮ್ಮಿಕೊಂಡಿದ್ದಾರೆ.
ಇದನ್ನೂ ಓದಿ: 🔵ಉಜಿರೆ ಎಸ್.ಡಿ.ಎಂ ಮಲ್ಟಿ -ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ
ಆಗಸ್ಟ್ 21ನೇ ಬುಧವಾರ 11 ಘಂಟೆಗೆ ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಬಳಂಜ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿರುವ ಶಾಶ್ವತ ಯೋಜನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ ಎಂದು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾದ ರಂಜಿತ್ ಎಚ್ ಡಿ ಬಳಂಜ ರವರು ತಿಳಿಸಿದ್ದಾರೆ.
ವಲಯ 15ರ ಅಧ್ಯಕ್ಷರಾದ ಅಡ್ವಕೇಟ್ ಗಿರೀಶ್ ಎಸ್ ಪಿ, ಉಪಾಧ್ಯಕ್ಷರಾದ ಶಂಕರ್ ರಾವ್ ಹಾಗೂ ವಲಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.