ಮೇಷ ರಾಶಿ: ಯಾರಾದರೂ ನಿಮ್ಮ ದೌರ್ಬಲ್ಯವನ್ನು ಅರಿತು ನಿಮ್ಮನ್ನು ಪೀಡಿಸಬಹುದು. ವ್ಯಾಪಾರವು ಇಂದು ಅಲ್ಪಪ್ರಮಾಣದ ಲಾಭವನ್ನು ಕೊಡಬಹುದು. ಅಶಿಸ್ತಿನಿಂದ ನೀವು ಇರಲಿದ್ದೀರಿ. ಯೋಜನೆಯನ್ನು ಸಿದ್ಧಪಡಿಸಲು ನೀವು ಅಧಿಕ ಶ್ರಮವನ್ನು ವಹಿಸಬೇಕಾದೀತು.
ವೃಷಭ ರಾಶಿ: ನಿಮ್ಮ ಕೈಮೀರಿದ ಸಂಗತಿಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಿಲ್ಲ. ನಿಮ್ಮ ವಸ್ತುಗಳು ಕಾಣಿಸದೇ ಹೋದೀತು. ನೀವು ಇಂದು ಇದ್ದುದರಲ್ಲಿ ತೃಪ್ತಿಪಡಬೇಕಾದೀತು. ಎದುರು ಮಾತನಾಡುವುದು ನಿಮಗೆ ಇಂದು ಸರಿಕಾಣದು. ವ್ಯರ್ಥವಾದ ಕಾಲಹರಣದ ಬದಲು ಏನಾದರೂ ಯೋಗ್ಯವಾದುದನ್ನು ಮಾಡಬಹುದು.
ಮಿಥುನ ರಾಶಿ: ಉನ್ನತ ವಿದ್ಯಾಭ್ಯಾಸಕ್ಕೆ ಎದುರಾಗುವ ಸಾಧಕ ಬಾಧಕಗಳ ಮಾಹಿತಿ ಇರಲಿ. ಕೋಪವು ಒಂದು ಮಿತಿಯಲ್ಲಿ ಇದ್ದರೆ ಚೆಂದ. ಕಾಲವು ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬಹುದು. ಹೊಸ ಸುದ್ದಿಯ ನಿರೀಕ್ಷೆಯಲ್ಲಿ ನೀವು ಇರುವಿರಿ. ಎಲ್ಲರ ನಡುವೆ ಇದ್ದರೂ ಒಂಟಿತನವು ನಿಮ್ಮನ್ನು ಕಾಡಬಹುದು.
ಕರ್ಕಾಟಕ ರಾಶಿ: ಇಂದು ನೀವು ಅತಿಯಾದ ಆತುರದಲ್ಲಿ ಇರುವಿರಿ. ನಿಮ್ಮ ಹಿಂದೆ ಕಹಿಯಾದ ಮಾತುಗಳನ್ನು ಯಾರಾದರೂ ಆಡುವುದು ಕೇಳಿಬರಬಹುದು. ಅನಾಮಧೇಯ ಕರೆಗಳು ನಿಮ್ಮನ್ನು ಹೂಡಿಕೆಗೆ ಪ್ರೇರಿಸಬಹುದು.
ಸಿಂಹ ರಾಶಿ: ಇಂದು ಅತಿಯಾದ ಉತ್ಸಾಹದಿಂದ ನಿಮ್ಮ ಮೇಲೆ ನಿಮಗೆ ನಿಯಂತ್ರಣ ಸಿಗದಾದೀತು. ಇಂದಿನ ಕೆಲವು ಸಂದರ್ಭಗಳು ನಿಮಗೆ ಪಾಠವಾಗಬಹುದು. ತಾಳ್ಮೆಯನ್ನು ಕಳೆದುಕೊಳ್ಳಲು ಅನೇಕ ಸಂಗತಿಗಳು ಇರಲಿವೆ. ದುರಾಲೋಚನೆಯನ್ನು ಬಿಟ್ಟುಬಿಡುವುದು ಒಳ್ಳೆಯದು. ನಿಮ್ಮ ಅಹಂಕಾರವು ನಿಮಗೆ ಸೋಲನ್ನು ತಂದುಕೊಡುವುದು.
ಕನ್ಯಾ ರಾಶಿ: ಇಂದು ನಿಮ್ಮ ಜೊತೆ ಕಲಹಕ್ಕಾಗಿಯೇ ಪರಿಚಿತರು ಮಾತನಾಡಬಹುದು. ನಿಮ್ಮ ನಿರೀಕ್ಷೆಯು ಇಂದು ಸಫಲವಾದೀತು. ಕಛೇರಿಯ ಉಸ್ತುವಾರಿಗಳಾಗಿ ಎಲ್ಲವನ್ನೂ ಗಮನಿಸಿ ವರದಿ ನೀಡಲು ಹೇಳಬಹುದು. ನಿಮ್ಮ ಕಷ್ಟಗಳನ್ನು ನೀವು ಗಟ್ಟಿ ಮನಸ್ಸಿನಿಂದ ಎದುರಿಸುವಿರಿ.
ತುಲಾ ರಾಶಿ: ಇಂದು ಬಂಧುಗಳ ಚುಚ್ಚು ಮಾತು ನಿಮಗೆ ಹಿಡಿಸದು. ಒಬ್ಬರೇ ಆಲೋಚನೆಯಲ್ಲಿ ಮಗ್ನರಾಗಿ ಪರಿಹಾರವನ್ನು ಕಂಡುಕೊಳ್ಳುವುದು ಕಷ್ಟವಾದೀತು. ಅಲ್ಪ ವ್ಯತ್ಯಾಸದಿಂದ ಹೆಚ್ಚಿನ ಬಾಧೆಯನ್ನು ಪಡಬೇಕಾದೀತು. ವಿದ್ಯಾರ್ಥಿಗಳು ಪರೀಕ್ಷೆಯ ಭಯದಲ್ಲಿ ಓದಿದ್ದನ್ನು ಮರೆತುಕೊಳ್ಳುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ: ಇಂದು ನಿಮ್ಮ ಭವಿಷ್ಯ ಹಾಗೂ ಮಕ್ಕಳ ಬಗ್ಗೆ ಯೋಚನೆ ಅಧಿಕವಾಗುವುದು. ಇದ್ದಕ್ಕಿದ್ದಂತೆ ನೀವು ಪ್ರಚಾರವನ್ನು ಗಿಟ್ಟಿಸಿಕೊಳ್ಳುವಿರಿ. ನಿಮ್ಮ ಯೋಚನೆಗಳು ನಿಮಗೆ ಪ್ರಸಿದ್ಧಿಯನ್ನು ತಂದುಕೊಟ್ಟಾವು. ಸ್ವತಂತ್ರದ ಕಾರ್ಯದಿಂದ ನಿಮಗೆ ಶ್ರೇಯಸ್ಸು ಸಿಗುವುದು. ಪ್ರತಿಷ್ಠಿತ ಸಂಸ್ಥೆಯನ್ನು ನೀವು ಇಂದು ಸೇರಿಕೊಳ್ಳಬಹುದು.
ಧನು ರಾಶಿ: ಇಂದು ದಂಪತಿಗಳ ನಡುವೆ ಕಲಹವೆದ್ದು ಇಬ್ಬರ ತಪ್ಪುಗಳನ್ನು ಪರಸ್ಪರ ಹೇಳಿ ವಾದ ಮಾಡುವಿರಿ. ಉನ್ನತ ಶಿಕ್ಷಣದಲ್ಲಿ ಕೆಲವು ಕಟ್ಟುಪಾಡುಗಳಿಗೆ ತಯಾರಿರಬೇಕಾದೀತು. ನಿಮ್ಮ ಉದ್ಯಮಕ್ಷೇತ್ರವನ್ನು ವಿಸ್ತರಿಸಲು ಇಷ್ಟಪಡುವಿರಿ. ಸಂಗಾತಿಗೆ ಬೇಕಾದ ವಸ್ತುಗಳನ್ನು ತಂದುಕೊಡುವಿರಿ. ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಕಳೆಯುವ ಸಾಧ್ಯತೆ ಇದೆ.
ಮಕರ ರಾಶಿ: ನೀವು ಇಂದು ಸೌಂದರ್ಯಕ್ಕೆ ಪ್ರಾಮುಖ್ಯ ಕೊಟ್ಟು ಕಾರ್ಯವನ್ನು ವಿಳಂಬ ಮಾಡುವಿರಿ. ಮಕ್ಕಳಿಂದ ನಿಮಗೆ ಅಪಮಾನದಂತೆ ಆಗಬಹುದು. ನಿಮಗೆ ಸಿಗುವುದಿಲ್ಲ ಎಂದುಕೊಂಡ ಸ್ಥಾನವು ನಿಮಗೆ ಸಿಗಬಹುದು. ಅದೃಷ್ಟ ನಿಮ್ಮ ಕಡೆಗಿದ್ದು ಅದನ್ನು ಸರಿಯಾಗಿ ಬಳಸಿಕೊಳ್ಳಿ.
ಕುಂಭ ರಾಶಿ: ನೀವು ಯಾರಿಗಾದರೂ ಸಾಲ ಕೊಡುವ ಮೊದಲು ಆಲೋಚನೆ ಇರಲಿ.ಅನೇಕ ದಿನಗಳಿಂದ ಮಾಡುತ್ತಿದ್ದ ಕೆಲಸವನ್ನು ಇಂದು ಬಹಳ ವೇಗವಾಗಿ ಮುಗಿಸಿ ನಿರಾಳವಾಗುವಿರಿ. ಮಕ್ಕಳು ನಿಮ್ಮನ್ನು ಬಿಡಲು ಬಹಳ ಕಷ್ಟಪಡುವರು. ಸಂಗಾತಿಯನ್ನು ನೀವು ಬಹಳ ದಿನಗಳ ಅನಂತರ ಪ್ರಶ್ನಿಸುವಿರಿ.
ಮೀನ ರಾಶಿ: ಇಂದಿನ ಎಂಥ ಸ್ಥಿತಿಯಲ್ಲಿಯೂ ಮನಸ್ಸು ತಾಳ್ಮೆಯನ್ನು ಬಿಡದಿರಲಿ. ವೃತ್ತಿಗಾಗಿ ನೀವು ಹೆಚ್ಚು ಹುಡುಕಾಟ ಮಾಡಬೇಕಾಗುವುದು. ನಿಮ್ಮವರನ್ನು ನೀವು ಬಿಟ್ಟುಕೊಡುವಿರಿ. ಅವರು ಸ್ವತಂತ್ರವಾದಷ್ಟೂ ನೀವು ನೆಮ್ಮದಿಯನ್ನು ಪಡೆಯುವಿರಿ. ವ್ಯಾಪಾರವು ಸ್ವಲ್ಪಮಟ್ಟಿಗೆ ಸುಧಾರಿಸುವುದು. ಭೂಮಿಯ ವ್ಯವಹಾರವೂ ನಿಮಗೆ ನಷ್ಟವನ್ನು ಕೊಡಬಹುದು.