Wed. Nov 20th, 2024

Daily Horoscope – ಇಂದು ಈ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ವಿಘ್ನ

Daily Horoscope - ಇಂದು ಈ ರಾಶಿಯವರಿಗೆ ಆತುರವೇ ಅಪಾಯ ತಂದೊಡ್ಡಬಹುದು

ಮೇಷ ರಾಶಿ :ಇಂದು ಅವಿವಾಹಿತರಿಗೆ ವಿವಾಹ ನಿಶ್ಚಯದ ಸಾಧ್ಯತೆ ಇದೆ. ಬಹಳ ದಿನಗಳ ಅನಂತರ ನಿಮ್ಮ ಮನೆಯಲ್ಲಿ ಸಂತೋಷದ ಸಂದರ್ಭವು ಇರುವುದು. ನಿತ್ಯ ಬಳಸುವ ವಸ್ತುವಿನಿಂದ ನಿಮಗೆ ಲಾಭವಿದೆ. ಅತಿಥಿಗಳ ಆಗಮನವು ಅನಿರೀಕ್ಷಿತವಾಗುವುದು.

ವೃಷಭ ರಾಶಿ :ನಿಮ್ಮ ಅಂತಶ್ಶಕ್ತಿಯೇ ನಿಮ್ಮ ನಿಜವಾದ ಬಲವಾದುದರಿಂದ ಯಾವ ಸಮಸ್ಯೆಗಳಿಗೂ ನಿರಾತಂಕವಾಗಿ ಇರುವಿರಿ. ಎಲ್ಲದರಲ್ಲೂ ಹಿನ್ನಡೆಯಾಗುವ ನಿಮಗೆ ಆತ್ಮವಿಶ್ವಾಸ ತುಂಬಲು ಜನರ ಅವಶ್ಯಕತೆ ಇದೆ. ಕಷ್ಟದ ಕೆಲಸವನ್ನು ನೀವು ಅನಾಯಾಸವಾಗಿ ಮಾಡಿ ಮುಗಿಸುವಿರಿ. ಇಂದಿನ‌ ನಿಮ್ಮ ಕೆಲಸವು ಪೂರ್ಣವಾಗಬಹುದು.

ಮಿಥುನ ರಾಶಿ :ವಿದ್ಯಾಭ್ಯಾಸದ ಬಗ್ಗೆ ನಿಮ್ಮ ಗಮನವು ಬದಲಾಗುವುದು. ನಿಮ್ಮ ಬಗ್ಗೆ ಹೇಳಿದರೂ ಕಷ್ಟ ಹೇಳದಿದ್ದರೂ ಕಷ್ಟವೆನ್ನುವಂತೆ ಆಗುವುದು. ನೀವು ಅದನ್ನು ಕಲಿಯಲು ಇಚ್ಛಿಸುವಿರಿ. ಕಲಿಕೆ ನಿಮ್ಮದೇ ಆದ ವಿಧಾನವನ್ನು ಬಳಸಿಕೊಳ್ಳಲಿದ್ದೀರಿ. ಪ್ರೇಮದ ಸೆಳೆತಕ್ಕೆ ಸಿಲುಕುವಿರಿ. ಪ್ರೇಮಿಗಳು ಇಂದು ಒಂದಾಗುವ ಸಾಧ್ಯತೆ ಇದೆ. ಮನೆಯಲ್ಲಿ ಪ್ರಸ್ತಾಪ‌ ಮಾಡಿ ನಿಮ್ಮ ಮಾರ್ಗವನ್ನು ಸರಿ ಮಾಡಿಕೊಳ್ಳಿ.

ಕರ್ಕಾಟಕ ರಾಶಿ :ಏನೇ ಮಾಡಿದರೂ ಚಾಂಚಲ್ಯವನ್ನು ನಿಯಂತ್ರಿಸಲಾಗದೇ ಕಷ್ಟವಾಗುವುದು. ಯಾವುದನ್ನು ಮಾಡಲೇ ಬಾರದು ಎಂದು ಮತ್ತೆ ಅಂದುಕೊಂಡಿದ್ದರೋ ಅದೇ ಆಗುವುದು. ಇಂದು ನೀವು ಮಾಡಿದ ಕೆಲಸಕ್ಕೆ ಪಶ್ಚಾತ್ತಾಪ ಪಡಬಹುದು. ಬೇಸರದ ಸಂಗತಿಗಳು ಇಂದು ನಡೆಯುವ ಸಾಧ್ಯತೆ ಇದೆ.

ಸಿಂಹ ರಾಶಿ :ಇಂದು ಅನಿರೀಕ್ಷಿತ ಬಂಧುಗಳ ಆಗಮನದಿಂದ ಯೋಜಿತವಾದ ಕಾರ್ಯಗಳನ್ನು ಬದಲಿಸುವುದು ಬೇಡ. ನಿಮ್ಮ ಇಚ್ಛಾಶಕ್ತಿಯು ನಿಮ್ಮ ಇಂದಿನ ಮೇಲಧಿಕಾರಿಗಳಿಗೆ ಖುಷಿಯಾಗುವಂತೆ ನಡೆದುಕೊಳ್ಳುವಿರಿ. ಸುಲಭದ ವಿಚಾರವನ್ನು ಬಹಳ ಸಂಕೀರ್ಣ ಮಾಡಿಕೊಳ್ಳಲಿದ್ದೀರಿ. ನಿಮ್ಮ ಬಗ್ಗೆ ಇರುವ ಭಾವನೆಗಳು ಬದಲಾಗಬಹುದು. ಸಂಗಾತಿಯ ವಿಚಾರದಲ್ಲಿ ನೀವು ತಟಸ್ಥರಾಗುವಿರಿ.

ಕನ್ಯಾ ರಾಶಿ :ನೀವು ಇಂದು ಯಾವುದಾದರೂ ಸತ್ಕಾರ್ಯದಲ್ಲಿ ಜೋಡಿಸಿಕೊಳ್ಳುವಿರಿ. ಹೂಡಿಕೆಯು ನಿಮ್ಮ ಆರ್ಥಿಕತೆಯನ್ನು ಹೆಚ್ಚಿಸುವುದು. ಏಕಾಂಗಿಯಾಗಿ ನೀವು ಎಲ್ಲಿಗಾದರೂ ಹೋಗುವಿರಿ. ನಿಮ್ಮ ವಸ್ತುವನ್ನು ಸ್ನೇಹಿತರಿಗೆ ಕೊಟ್ಟಿದ್ದು ಅದನ್ನು ಪಡೆಯಲು ನೀವು ಕಷ್ಟ ಪಡುವಿರಿ. ಕಾನೂನಿಗೆ ಮೊರೆ ಹೋಗಿ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವಿರಿ.

ತುಲಾ ರಾಶಿ :ನಿಮ್ಮ ಪ್ರಯತ್ನವು ಹೇಗೇ ಇದ್ದರೂ ದೈವದ ಯೋಜನೆ ಬೇರೆಯೇ ಇರುತ್ತದೆ. ನಿಮ್ಮ ಸಮಯವನ್ನು ಸ್ನೇಹಿತರು ವ್ಯರ್ಥಮಾಡಿಯಾರು. ವೃತ್ತಿಯಲ್ಲಿ ಯಾರಾದರೂ ಕೋಪವನ್ನು ತರಿಸಬಹುದು. ಬಾಲ್ಯ ಸ್ನೇಹಿತ ಏಳ್ಗೆಯನ್ನು ಕೇಳಿ ನಿಮಗೆ ಅಸೂಯೆ ಉಂಟಾಗಬಹುದು. ವಾಹನ‌ ಖರೀದಿಯನ್ನು ನೀವು ಮುಂದೂಡುವಿರಿ.

ವೃಶ್ಚಿಕ ರಾಶಿ :ನಿಮ್ಮ ಅಂತರಂಗದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಯೋಚಿಸುವಿರಿ. ಇನ್ನೊಬ್ಬರ ಏಳ್ಗೆಯನ್ನು ಕಂಡು ಮನಸ್ಸಿನಲ್ಲಿ ಸಂಕಟಪಡುವಿರಿ. ಹಿರಿಯರಿಗೆ ಎದುರಾಡುವುದನ್ನು ಕಡಿಮೆ ಮಾಡಿ. ಮಾತಿನಿಂದ ನೀವು ಅನೇಕ ಉತ್ತಮವಾದ ವಿಷಯವನ್ನು ಕಳೆದುಕೊಳ್ಳುವಿರಿ. ಕೋಪವನ್ನು ಆದಷ್ಟು ನಿಯಂತ್ರಣಕ್ಕೆ ತಂದುಕೊಳ್ಳಿ.

ಧನು ರಾಶಿ :ಅಲ್ಪ ಲಾಭಕ್ಕಾಗಿ ದೇಹವನ್ನು ದಂಡಿಸಬೇಕಾದೀತು. ಉದ್ವೇಗದ ಮಾತುಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ಅಧಿಕವಾದ ಸಂಪತ್ತನ್ನು ಗಳಿಸಬೇಕು ಎನ್ನುವ ಹಂಬಲವಿದ್ದರೂ ಅದನ್ನು ಪಡೆಯಲು ದಾರಿ ಸುಲಭವಿಲ್ಲ ಎಂದು ಅನ್ನಿಸಬಹುದು. ವರ್ತಮಾನದ ಬಾಳಿಗಿಂತ ಭವಿಷ್ಯವು ನಿಮಗೆ ಬಹಳ ರೋಚಕತೆಯದ್ದಾಗಿ ಕಾಣಬಹುದು.

ಮಕರ ರಾಶಿ :ನಾಯಕರಾಗಿರುವವರಿಗೆ ಪ್ರಶಂಸೆ ಗೌರವಗಳು ಸಿಗಲಿವೆ. ಮನೆಯವರ ಜೊತೆ ಭವಿಷ್ಯದ ಚಿಂತನೆಯನ್ನು ಮಾಡಬಹುದು. ಕೆಲವು ಕಾಲದ ಚಿಂತನೆಯು ಇಂದು ನಿಮ್ಮಿಂದ ದೂರವಾಗಬಹುದು. ರಾಜಕೀಯವಾಗಿ ನೀವು ಹೊಸ‌ದಾರಿಯನ್ನು ಪ್ರಸಿದ್ಧರಾಗಲು ಆಯ್ಕೆ ಮಾಡಿಕೊಳ್ಳಬಹುದು.

ಕುಂಭ ರಾಶಿ :ಇಂದು ನಿಮ್ಮ ಯಾವುದಾದರೂ ಕಾರ್ಯಕ್ಕೆ ಸ್ನೇಹಿತರ ಬೆಂಬಲದಿಂದ ಸಾಧ್ಯವಾಗಿಸುವಿರಿ. ಬಹಳ ದಿನಗಳಿಂದ ನಿರೀಕ್ಷಿಸಿದ್ದ ಸ್ಥಳಕ್ಕೆ ಹೋಗುವಿರಿ. ಹಣವನ್ನು ನೀವು ಎಂದಿನಂತೆ ಖರ್ಚು ಮಾಡಬಾರದು. ನಿಮ್ಮ ಬೆಂಬಲಕ್ಕೆ ನಿಲ್ಲುವವರು ಯಾರು ಎಂಬ ಕುತೂಹಲವಿದ್ದರೂ ಸಣ್ಣ ಸುಳಿವು ಸಿಗಲಿದೆ.

ಮೀನ ರಾಶಿ :ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿ ರಿಂದಲೇ ನೋಡುವುದು ಕಷ್ಟ. ಮಾನವೀಯತೆಯನ್ನು ಕಿಂಚಿತ್ತಾದರೂ ಇರಿಸಿಕೊಳ್ಳಬಹುದು. ಸಂಗಾತಿಯ ಅನಿರೀಕ್ಷಿತ ಮಾತುಗಳು ನಿಮಗೆ ಆಶ್ಚರ್ಯಕರ ಎನಿಸಬಹುದು. ಆಯಾಸದಿಂದ‌‌ ಇಂದು ಸುಖವಾದ ನಿದ್ರೆಯನ್ನು ಮಾಡುವಿರಿ. ಕೆಲವರ ವ್ಯಕ್ತಿತ್ವವು ನಿಮಗೆ ಇಷ್ಟವಾದೀತು.

Leave a Reply

Your email address will not be published. Required fields are marked *