Thu. Dec 26th, 2024

Mandya: 60ರ ಅರ್ಚಕನ ಜೊತೆ 20 ವರ್ಷದ ಯುವತಿ ಚಾಟಿಂಗ್ – ಆಮೇಲೆ ಆಗಿದ್ದೇನು ಗೊತ್ತಾ?

ಮಂಡ್ಯ:(ಆ.21) 60ರ ಅರ್ಚಕನ ಜೊತೆ ಚಾಟಿಂಗ್ ಮಾಡಿದ ಯುವತಿ ಚೀಟಿಂಗ್ ಮಾಡಿರುವ ಆರೋಪ ಕೇಳಿ ಬಂದಿದೆ. ಯುವತಿ ಆನ್ ಲೈನ್‌ನಲ್ಲೇ ಅಜ್ಜನಿಗೆ ಲಕ್ಷ, ಲಕ್ಷ ಪಂಗನಾಮ ಹಾಕಿದ್ದಾರೆ ಎನ್ನಲಾಗಿದೆ. ಮಂಡ್ಯದ ಪಾಂಡವಪುರ ಮೂಲದ ಅರ್ಚಕ ಈಗ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: 🛑ಉಜಿರೆ: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಅರ್ಚಕನಿಗೆ ತೆಲಂಗಾಣದ ಮಹಿಳೆಯ ಫೋಟೋ ಬಳಸಿ ಮೋಸ ಮಾಡಲಾಗಿದೆ. ತೆಲಂಗಾಣ ಮೂಲದ ಸಿರಿ ಶ್ರೇಷಾ ಸರಿತಾ ಅನ್ನೋ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಅಕೌಂಟ್ ಓಪನ್ ಮಾಡಲಾಗಿದೆ. ಅದರಲ್ಲಿ 60 ವರ್ಷದ ಅರ್ಚಕನ ಜೊತೆ ಚಾಟಿಂಗ್ ಮಾಡಿ ಮೋಸ ಮಾಡಿದೆ ಎಂದು ದೂರು ನೀಡಲಾಗಿದೆ.

ವೃತ್ತಿಯಲ್ಲಿ ಅರ್ಚಕನಾಗಿರುವ ವಿಜಯ್ ಕುಮಾರ್‌ಗೆ ಫೇಸ್ ಬುಕ್‌ನಲ್ಲಿ ಯುವತಿ ಪರಿಚಯ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ಬಳಿಕ ಇಬ್ಬರ ನಡುವೆ ಆತ್ಮೀಯ ಸಂಭಾಷಣೆ ನಡೆದಿದೆ. ಯುವತಿಯು ಹಲವು ಕಾರಣ ಹೇಳಿ ಆಗಾಗ ಹಣ ಕೇಳುತ್ತಿದ್ದರಂತೆ. ಯುವತಿಯ ಮಾತು ನಂಬಿ ಅರ್ಚಕರು ಫೋನ್ ಪೇ, ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಈ ಸಂಬಂಧ ಮಂಡ್ಯ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *