Wed. Nov 20th, 2024

Puttur: ಚೂರಿ ಇರಿತ ಸುಳ್ಳು ಕಥೆ ಸೃಷ್ಟಿ – ಠಾಣೆಗೆ ಆಗಮಿಸಿದ ಬಿಜೆಪಿ ಮುಖಂಡರು – ಪೊಲೀಸ್ ವಶದಲ್ಲಿದ್ದ ವಿದ್ಯಾರ್ಥಿ ಬಿಡುಗಡೆ – ಅರಾಜಕತೆ ಸೃಷ್ಟಿಸಿದ ಕಾಂಗ್ರೇಸ್‍ SDPI ಮುಖಂಡರ ಬಂಧಿಸಬೇಕು – ಪುತ್ತಿಲ

ಪುತ್ತೂರು:(ಆ.21) ಪುತ್ತೂರಿನ ಕೊಂಬೆಟ್ಟು ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿಗೆ ಚೂರಿ ಇರಿತ ಎಂಬ ಆರೋಪದ ಬಗ್ಗೆ ಕ್ಷಣಕ್ಕೊಂದು ಹೇಳಿಕೆ ಬಗ್ಗೆ ಅನುಮಾನ ಸೃಷ್ಟಿಯಾಗಿದ್ದು, ಇದೀಗ ಪೊಲೀಸರು ತನಿಖೆ ನಡೆಸಿ ಪೊಲೀಸ್ ವಶದಲ್ಲಿದ್ದ ವಿದ್ಯಾರ್ಥಿಯದ್ದು ಯಾವೂದೇ ತಪ್ಪು ಕಂಡು ಬರದ ಕಾರಣ ಪೊಲೀಸರು ವಿದ್ಯಾರ್ಥಿಯ ಬಿಡುಗಡೆಗೊಳಿಸಿದ್ದಾರೆ.

ಇದನ್ನೂ ಓದಿ: 🔴ಬೆಳ್ತಂಗಡಿ: ನೀರಿನ ಮಟ್ಟ ಹಾಗೂ ಭೂ ಕುಸಿತದ ಲಕ್ಷಣ ಕಂಡುಬಂದರೆ ಕೂಡಲೇ ಸಂಪರ್ಕಿಸುವಂತೆ ಶಾಸಕ ಹರೀಶ್ ಪೂಂಜ ಮನವಿ

ಮೊದಲು ಚೂರಿಯಿಂದ ಇರಿತ ಎಂಬ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿತ್ತು, ನಂತರ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿಯ ವಿಡಿಯೋ ಬಿಡುಗಡೆಗೊಳಿಸಲಾಯಿತು.

ಇದೀಗ ಚೂರಿ ಎಂಬ ಆರೋಪದ ಬದಲು ಬ್ಲೇಡ್, ಗ್ಲಾಸ್ ನಿಂದ ಇರಿದಿದ್ದಾರೆ ಎಂಬ ಆರೋಪ ಬದಲಾಗುತ್ತಿರುವುದು ಮಾಧ್ಯಮ ವರದಿ ಮೂಲಕ ತಿಳಿದುಬಂತು.

ಶಿಕ್ಷಣ ಕ್ಷೇತ್ರದಲ್ಲಿ ನಡೆದ ಘಟನೆಯ ಸತ್ಯಸತ್ಯತೆಯನ್ನು ಶೀಘ್ರ ಪೊಲೀಸರು ತನಿಖೆ ನಡೆಸಿ ಹೊರತರಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿದ್ದವು.

ರಾತ್ರಿ ಠಾಣೆಗೆ ಬಿಜೆಪಿ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಅಧ್ಯಕ್ಷರಾದ ಶಿವಕುಮಾರ್ , ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ ಹಾಗೂ ಹಿಂದೂ ಸಂಘಟನೆಗಳ ಮುಖಂಡರು ಠಾಣೆಗೆ ತೆರಳಿ ಠಾಣಾಧಿಕಾರಿಯವರಲ್ಲಿ ಈ ಘಟನೆಯ ಬಗ್ಗೆ ಮಾತುಕತೆ ನಡೆಸಿದರು.

ಅರಾಜಕತೆ ಸೃಷ್ಟಿಸಿದ ಕಾಂಗ್ರೇಸ್-ಎಸ್ಡಿಪಿಐ ಮುಖಂಡರ ವಿರುದ್ದ ಕೇಸ್ ದಾಖಲಿಸಿ : ಪುತ್ತಿಲ

ಈ ಪ್ರಕರಣ ಮೇಲ್ನೋಟಕ್ಕೆ ಸುಳ್ಳು ಅಪಪ್ರಚಾರ ಎಂದು ಕಂಡು ಬಂದಿತ್ತು. ಘಟನೆ ನಡೆದ ತಕ್ಷಣ ನಾವು ಇಲಾಖೆಯನ್ನು ಸಂಪರ್ಕಿಸಿದೆವು. ಇದೊಂದು ಗಂಭೀರ ಪ್ರಕರಣವಾಗಿದೆ.

ನಂತರ ಇಲಾಖೆಯ ತನಿಖೆಯಲ್ಲಿ ಇದೊಂದು ಸಂಪೂರ್ಣ ಸುಳ್ಳು ಪ್ರಕರಣ ಎಂಬುದು ಗೊತ್ತಾಗಿದೆ.

ನಿನ್ನೆ ಕಾಂಗ್ರೇಸ್ ನ ಕೆಲವು ಸಭೆಗಳಲ್ಲಿ ಬಾಂಗ್ಲ ಮಾದರಿ ಹೋರಾಟ ನಡೆಸುವುದೆಂದು ಕಾಂಗ್ರೇಸ್ ಮುಖಂಡರು ಹೇಳಿಕೆ ನೀಡಿದ್ದರು. ಇದೀಗ ಅದೇ ಮಾದರಿಯ ಅಪಪ್ರಚಾರದ ಹೋರಾಟಕ್ಕೆ ಕೈ ಹಾಕಿದ್ದಾರೆ.

ಕೆಲ ವರ್ಷಗಳ ಹಿಂದೆ ಮಹಿಳೆಯ ಅಪಹರಣ ಎಂಬ ಕತೆ ಕಟ್ಟಿ ಸಮಾಜದಲ್ಲಿ ಅರಾಜಕತೆ ಸೃಷ್ಟಿಸಿದ ರೀತಿಯೇ ಈ ಬಾರಿ ಕಾಲೇಜಿನ ವಿದ್ಯಾರ್ಥಿನಿಯನ್ನು ಬಳಸಿಕೊಂಡು ಸುಳ್ಳು ಕತೆ ಕಟ್ಟಿದ ಎಸ್ಡಿಪಿಐ ಹಾಗೂ ಕಾಂಗ್ರೇಸ್‍ ಮುಖಂಡರ ವಿರುದ್ಧ ಕೇಸ್ ದಾಖಲಿಸಬೇಕು ಮತ್ತು ಈ ಸುಳ್ಳು ಪ್ರಕರಣದಲ್ಲಿ ಪಾಲ್ಗೊಂಡು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಿಸಲು ಪ್ರಯತ್ನಿಸಿದ ಎಲ್ಲರ ವಿರುದ್ದ ಪೊಲೀಸ್ ಇಲಾಖೆ ಕೇಸ್ ದಾಖಲಿಸಬೇಕೆಂದು ಅರುಣ್ ಪುತ್ತಿಲ ಒತ್ತಾಯಿಸಿದರು.

Leave a Reply

Your email address will not be published. Required fields are marked *