ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ರೇವತೀ, ಯೋಗ: ಧೃತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:49 ಗಂಟೆ, ರಾಹು ಕಾಲ ಬೆಳಿಗ್ಗೆ 11:02 ರಿಂದ ಮಧ್ಯಾಹ್ನ 12:35, ಯಮಘಂಡ ಕಾಲ ಮಧ್ಯಾಹ್ನ 03:42 ರಿಂದ ಸಂಜೆ 05:16ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:55 ರಿಂದ 09:28ರ ವರೆಗೆ.
ಮೇಷ ರಾಶಿ: ನಿಮ್ಮಲ್ಲಿರುವ ಆರೋಗ್ಯವೇ ನಿಮ್ಮ ದೊಡ್ಡ ಸಂಪತ್ತು. ನಿಮ್ಮ ನೋವನ್ನು ಶತ್ರುಗಳು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತಾರೆ. ಸಾಮಾಜಿಕವಾಗಿ ಮನ್ನಣೆ ಸಿಗುವ ದಿನ. ನಿಮಗೆ ಮರಣಭೀತಿ ಕಾಡುವ ಸಾಧ್ಯತೆ ಇದೆ. ಬೇಕಾದುದನ್ನು ಪಡೆಯಲು ದಾಕ್ಷಿಣ್ಯವು ನಿಮಗೆ ಅಡ್ಡ ಬರಬಹುದು. ಇದ್ದಕಿದ್ದಂತೆ ಏನನ್ನಾದರೂ ಯೋಚಿಸಿದೆ.’ ಮನಸ್ಸಿನ ತೀರ್ಮಾನಕ್ಕೆ ತಕ್ಕಂತೆ ನಿಮ್ಮ ನಡೆ ಇರಲಿದೆ.
![](https://uplustv.com/wp-content/uploads/2024/08/WhatsApp-Image-2024-08-19-at-14.40.54_6087ee73-666x1024.jpg)
ವೃಷಭ ರಾಶಿ: ಇಂದು ನೀವು ಸಾಲಗಾರರ ಕಾಟದಿಂದ ನೀವು ಮುಕ್ತರಾಗುವಿರಿ. ಅನಿರೀಕ್ಷಿತ ಧನಲಾಭವು ನಿಮ್ಮ ನಿಶ್ಚಿಂತೆಗೆ ಕಾರಣವಾಗಲಿದೆ. ನಿಮಗೆ ಸುರಕ್ಷಿತ ಸ್ಥಳದಲ್ಲಿ ಇದ್ದು ಬೇಸರವಾಗಬಹುದು. ಉದ್ಯೋಗಕ್ಕೆ ಸೇರಲು ಬೇಕಾದ ತಯಾರಿಯಲ್ಲಿ ನೀವು ಇರುವಿರಿ. ಏಕಾಂತವನ್ನು ಬಯಸಿದರೂ ಇರಲು ನಿಮಗೆ ಅಸಾಧ್ಯವಾದೀತು. ಎಲ್ಲರ ಜೊತೆ ಬೆರೆಯುವ ಅಭ್ಯಾಸ ಉತ್ತಮ.
![](https://uplustv.com/wp-content/uploads/2024/08/WhatsApp-Image-2024-08-19-at-23.43.29_ae39c904.jpg)
ಮಿಥುನ ರಾಶಿ: ನಿಮ್ಮಲ್ಲಿರುವ ದುರ್ಗುಣಗಳು ನಿಮಗೆ ಅರ್ಥವಾಗಿ ಅವುಗಳನ್ನು ಸರಿಮಾಡಿಕೊಳ್ಳುವಿರಿ. ಸಿದ್ಧ ವಸ್ತುಗಳ ವ್ಯಾಪಾರದಿಂದ ಲಾಭ. ನಿಮ್ಮ ಸಾಮರ್ಥ್ಯವನ್ನು ಅಳೆಯುವ ಸಮಯ ಇಂದು ಬರಬಹುದು. ಧಾರ್ಮಿಕ ವಿಚಾರವನ್ನು ನೀವು ತಿಳಿದವರ ಬಳಿ ಮಾತನಾಡಬಹುದು.
![](https://uplustv.com/wp-content/uploads/2024/08/siri-1-1024x757.jpg)
ಕರ್ಕಾಟಕ ರಾಶಿ: ಇಂದು ಹೆಚ್ವಿನ ಸಮಯವನ್ನು ಆಟ, ಓಟಗಳಲ್ಲಿ ಕಳೆಯುವಿರಿ. ಯಾವುದೇ ಆಮಿಷಕ್ಕೂ ಸುಲಭವಾಗಿ ಒಪ್ಪಲಾರಿರಿ. ಆರ್ಥಿಕತೆಯು ಸ್ವಲ್ಪ ಸುಧಾರಿಸಿದಂತೆ ಕಂಡರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹೊಂದಿಸಬೇಕಾಗಬಹುದು.
ಸಿಂಹ ರಾಶಿ: ನೀವು ಅಪವಾದಗಳನ್ನು ಕೇಳುವ ಸ್ಥಿತಿ ಬರಬಹುದು. ಜಾಗರೂಕರಾಗಿ ಇರಿ. ಅಮೂಲ್ಯ ವಸ್ತುಗಳನ್ನು ಸಂಗ್ರಹಿಸುವಿರಿ. ಮನೆಯ ಕೆಲಸ ಹಾಗೂ ಕಛೇರಿಯ ಕೆಲಸಗಳನ್ನು ಸರಿದೂಗಿಸಿಕೊಂಡು ಹೋಗುವುದು ಕಷ್ಟವಾದೀತು. ಅನಾಯಾಸವಾಗಿ ಲಾಭವನ್ನು ಪಡೆಯುವ ಜಾಡ್ಯವು ಬರಬಹುದು.
![](https://uplustv.com/wp-content/uploads/2024/08/057b1d26-13c1-450b-9ca4-33b6e7226863-1-810x1024.jpg)
ಕನ್ಯಾ ರಾಶಿ: ಇಂದು ನಿಮ್ಮ ಸಹಾಯಕರೇ ನಿಮಗೆ ತೊಂದರೆ ಕೊಟ್ಟಾರು. ಸಜ್ಜನರ ಸೇವೆಯ ಅವಕಾಶ ನಿಮಗೆ ಸಿಗಲಿದೆ. ಕಛೇರಿಯಲ್ಲಿ ಕಲಹವನ್ನು ಮಾಡಿಕೊಳ್ಳಲಿದ್ದೀರಿ. ನಿಮಗೆ ಹೊಸ ಉದ್ಯಮವನ್ನು ಆರಂಭಿಸುವ ಆಲೋಚನೆ ಇದ್ದರೂ ಸಂಪೂರ್ಣ ಧೈರ್ಯವು ನಿಮಗೆ ಸಾಕಾಗದೇ ಹೋದೀತು.
ತುಲಾ ರಾಶಿ: ಅಮೂಲ್ಯವಾದ ವಸ್ತುವನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ. ವಾಹನದ ವಿಚಾರಕ್ಕೆ ಸಂಗಾತಿಯ ಜೊತೆ ಕಲಹವಾಗಬಹುದು. ಉದ್ಯೋಗಕ್ಕೆ ಸಂಬಂಧಿಸಿದಂತೆ ನಿಮ್ಮಲ್ಲಿ ಅನಿಶ್ಚಿತತೆ ಇರಲಿದೆ. ಸಂಶೋಧನೆಯಲ್ಲಿ ತೊಡಗಿದ್ದರೆ ಸ್ವಲ್ಪ ಹಿನ್ನಡೆಯೂ ಹಣದ ಕೊರತೆಯೂ ಆಗಬಹುದು.
![](https://uplustv.com/wp-content/uploads/2024/08/WhatsApp-Image-2024-07-12-at-16.54.12_23b03a5a-1.jpg)
ವೃಶ್ಚಿಕ ರಾಶಿ: ಇಂದು ನಿಮ್ಮ ಜೊತೆಗಾರರ ನಿಧಾನಗತಿಯ ಕೆಲಸವು ನಿಮ್ಮ ಮನಃಸ್ಥಿತಿಗೆ ಹೊಂದದಿರಬಹುದು. ಉದ್ಯೋಗದಲ್ಲಿ ಸ್ಥಳಾಂತರವು ನಿಮಗೆ ಕಷ್ಟವಾದೀತು. ಆದರೆ ಅನಿವಾರ್ಯವೂ ಆಗಲಿದೆ. ವಿವಾಹಜೀವನಕ್ಕೆ ಕಾಲಿಟ್ಟ ನಿಮಗೆ ಕೆಲವು ಅಸ್ಪಷ್ಟವಾದ ನಡತೆಯಿಂದ ದಿಗ್ಭ್ರಾಂತರಾಗುವ ಸಾಧ್ಯತೆ ಇದೆ.
ಧನು ರಾಶಿ: ಇಂದು ನೀವು ಹಾಕಿಕೊಂಡ ಯೋಜನೆಗೆ ಕುಟುಂಬದ ಸಹಾಯವು ಲಭ್ಯವಾಗಲಿದೆ. ದೈವಾನುಗ್ರಹಕ್ಕೆ ಕಠಿಣವಾದ ಕಾರ್ಯವನ್ನೂ ಮಾಡುವಿರಿ. ನಿಮ್ಮ ಆರೋಗ್ಯವನ್ನು ವಿಚಾರಿಸಲು ಬಂಧುಗಳು ಬರಬಹುದು. ಧಾರ್ಮಿಕ ಕಾರ್ಯದಲ್ಲಿ ನೀವು ಭಾಗಿಯಾಗಲಿದ್ದೀರಿ. ಪುಣ್ಯಸ್ಥಳಗಳಿಗೆ ನೀವು ಹೋಗುವ ಅವಕಾಶ ಸಿಗಲಿದೆ.
![](https://uplustv.com/wp-content/uploads/2024/08/51b5a0cd-f9b6-499f-a45b-f15e5ee2ea78-2-1024x1024.jpg)
ಮಕರ ರಾಶಿ: ಇಂದು ನಿಮ್ಮ ಆಲೋಚನಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಉದ್ಯೋಗಕ್ಕೆ ವಿದಾಯ ಹೇಳುವ ಸಂದರ್ಭವು ಬರಬಹುದು. ನಿಮ್ಮ ನೆಚ್ಚಿನವರ ಭೇಟಿಯಾಗುವ ಸಂದರ್ಭ ಬಂದರೂ ಕಾರಣಾಂತರಗಳಿಂದ ತಪ್ಪಿಹೋಗಬಹುದು. ನಿಮಗೆ ಸಹಕರಿಸಿದವರನ್ನು ಕೃತಜ್ಞತೆಯಿಂದ ಸ್ಮರಿಸಿ.
![](https://uplustv.com/wp-content/uploads/2024/08/ಮುಳಿಯ.jpg)
ಕುಂಭ ರಾಶಿ: ಇಂದು ನಿಮ್ಮ ಕಾರ್ಯಗಳು ನಿಧಾನಗತಿಯಲ್ಲಿ ಇರಲಿದೆ. ಕುಟುಂಬದವರಿಗೆ ಸಮಯ ಕೊಡುವುದು ಕಷ್ಟವಾದೀತು. ಆರ್ಥಿಕವಾಗಿ ನೀವು ಸುಧಾರಣೆ ಕಾಣಬೇಕು ಎಂದಿದ್ದರೂ ನೀವು ಆಲಸ್ಯದಿಂದ ಹೊರಬರಬೇಕಾದೀತು. ಉತ್ಸಾಹದ ಕೊರತೆ ಅತಿಯಾಗಿ ತೋರುವುದು.
![](https://uplustv.com/wp-content/uploads/2024/08/WhatsApp-Image-2024-08-01-at-18.47.32_fec512cd-1-1024x777.jpg)
ಮೀನ ರಾಶಿ: ಇಂದು ನಿಮ್ಮ ಸ್ವಂತ ಉದ್ಯಮದಲ್ಲಿ ನಿಮಗೆ ಲಾಭವಿದೆ. ಹೂಡಿಕೆಯ ಹಣವೇ ನಿಮಗೆ ಧೈರ್ಯವನ್ನು ಕೊಡುತ್ತದೆ. ನಿಮ್ಮ ಅತಿಯಾದ ಉತ್ಸಾಹವು ಯಾರಾದರೂ ನೋಡಿ ಆಡಿಕೊಳ್ಳಬಹುದು. ನಿಮ್ಮ ಕಾರ್ಯಕೌಶಲವು ಸಹೋದ್ಯೋಗಿಗಳಿಗೆ ತಿಳಿಯಬಹುದು. ಮಿತ್ರರಿಗೋಸ್ಕರ ಸ್ವಲ್ಪವನ್ನು ತ್ಯಾಗಮಾಡುವಿರಿ.