Sat. Apr 19th, 2025

Mysore: ಟಿ. ನರಸೀಪುರದ ಬಳಿ ಸ್ಪೋಟಕ ವಸ್ತುಗಳು ಪತ್ತೆ – ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳಿಂದ ಪರಿಶೀಲನೆ

ಮೈಸೂರು:(ಆ.23) ಮೈಸೂರು ಜಿಲ್ಲೆ ಟಿ ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದ ಗೇಟ್ ಬಳಿಯಿರುವ ಫ್ರೆಂಡ್ಸ್ ಹೋಟೆಲ್ ಬಳಿ ಸ್ಪೋಟಕ ವಸ್ತುಗಳು ಪತ್ತೆಯಾಗಿದೆ.

ಇದನ್ನೂ ಓದಿ: 🛑ಉಡುಪಿ : ಆನ್ ಲೈನ್ ಟ್ರೇಡಿಂಗ್ ಮೋಸ


ಸ್ಪೋಟಕ ವಸ್ತುಗಳನ್ನು ನೀಲಿ ಬಣ್ಣದ ಪ್ಲಾಸ್ಟಿಕ್ ಕವರ್ ನಲ್ಲಿ ಅಪರಿಚಿತರು ಇಟ್ಟು ಹೋಗಿದ್ದಾರೆ. ಹೋಟೆಲ್ ನ ಸಿಬ್ಬಂದಿಗಳು ಅದನ್ನು ತೆಗೆದು ನೋಡಿದಾಗ ಗಾಬರಿಗೊಂಡು ಪಕ್ಕದಲ್ಲಿರುವ ಮರಕ್ಕೆ ನೇತು ಹಾಕಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಬಾಂಬ್ ಪತ್ತೆ ತಜ್ಞರು ಸ್ಪೋಟಕ ವಸ್ತುಗಳನ್ನು ಪರಿಶೀಲನೆ ಮಾಡಿದ್ದಾರೆ.

ಟ್ಯೂಬ್ ಆಕಾರದಲ್ಲಿರುವ 9 ಸ್ಪೋಟಕ ವಸ್ತುಗಳು ಮತ್ತು ಒಂದು ನಾಡ ಬಾಂಬ್ ಆಕಾರದ ವಸ್ತು ಪತ್ತೆ. ಸ್ಪೋಟಕ ವಸ್ತುಗಳನ್ನು ಕಲ್ಲು ಗಣಿಗಾರಿಕೆಗೆ ಬಳಸಲು ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ‌. ನಾಡ ಬಾಂಬ್ ಕಾಡು ಪ್ರಾಣಿಗಳ ಬೇಟೆಗೆ ಬಳಸಬಹುದಾದ ಸ್ಪೋಟಕ ವಸ್ತುಗಳು ಎಂದು ಸಹ ಹೇಳಲಾಗುತ್ತಿದೆ.

ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದವರು ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *