Fri. Apr 18th, 2025

Ayodhya: ಮೋದಿ ಹಾಗೂ ಯೋಗಿ ಹೊಗಳಿದ ಮುಸ್ಲಿಂ ಮಹಿಳೆ- ಪತ್ನಿಗೆ ಬಿಸಿ ಅಡುಗೆ ಪದಾರ್ಥ ಎಸೆದು ತಲಾಖ್‌ ನೀಡಿದ ಪತಿ

ಅಯೋಧ್ಯೆ:(ಆ.24) ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದಕ್ಕೆ ಮುಸ್ಲಿಂ ಮಹಿಳೆಯೊಬ್ಬರು ಪತಿಯಿಂದ ಭೀಕರ ಶಿಕ್ಷೆಗೆ ಗುರಿಯಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯದ ಮಾಹಿತಿ ಪ್ರಕಾರ, ಪತಿ ಮೊದಲು ತನ್ನ ಪತ್ನಿಗೆ ಬೆಂಕಿ ಹಚ್ಚಿ ಕೊಲ್ಲಲು ನೋಡಿದ್ದಾನೆ. ನಂತರ ಆಕೆಗೆ ತ್ರಿವಳಿ ತಲಾಖ್ ನೀಡಿ ವಿಚ್ಛೇದನ ನೀಡಿದ್ದಾನೆ.

ಇದನ್ನೂ ಓದಿ: 🛑ಅಮೆರಿಕಾದಲ್ಲಿ ವೇಶ್ಯಾವಾಟಿಕೆ ದಂಧೆ

ಬಹ್ರೈಚ್ ಮೂಲದ ಮಹಿಳೆ ಅಯೋಧ್ಯೆಯ ಅರ್ಷದ್ ಎಂಬಾತನನ್ನು ಮದುವೆಯಾಗಿದ್ದಳು. ಅವರ ಮದುವೆಯ ನಂತರ, ಆ ಮಹಿಳೆ ಅಯೋಧ್ಯೆಗೆ ಆಗಮಿಸಿದಾಗ ಆಕೆ ಉತ್ತರ ಪ್ರದೇಶದ ಪರಿಸರದಿಂದ ಪ್ರಭಾವಿತರಾದರು. ಆಕೆ ಆಗಾಗ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳುತ್ತಿದ್ದರು. ಇದರಿಂದ ಕುಪಿತಗೊಂಡ ಪತಿ ಆಕೆಯನ್ನು ಸುಟ್ಟು ಹಾಕಿದ್ದಲ್ಲದೆ ವಿಚ್ಛೇದನವನ್ನೂ ನೀಡಿದ್ದಾನೆ.

ದೆಹಲಿ ದರ್ವಾಜಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆ ಈಗ ಅಯೋಧ್ಯೆ ಮತ್ತು ಬಹ್ರೈಚ್ ಜಿಲ್ಲೆಗಳ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತಿದ್ದರೂ ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಬಗ್ಗೆ ಅರ್ಷದ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪವೂ ಇದೆ.

Leave a Reply

Your email address will not be published. Required fields are marked *