ಪುತ್ತೂರು:(ಆ.24) ಪುತ್ತೂರಿನ ಹೃದಯಭಾಗದಲ್ಲಿರುವ ಫ್ಯಾನ್ಸಿ ಅಂಗಡಿಯೊಂದಕ್ಕೆ ದುಷ್ಕರ್ಮಿಯೋರ್ವ ತಡರಾತ್ರಿ ಬೆಂಕಿ ಹಚ್ಚಿ ಪರಾರಿಯಾದ ಘಟನೆ ನಡೆದಿದೆ.
ಇದನ್ನೂ ಓದಿ: 🔴ಬೆಳ್ತಂಗಡಿ: ಬಿಎಂಎಸ್ ರಿಕ್ಷಾ ಚಾಲಕರ ಸಂಘದ ಕ್ಷೇಮ ನಿಧಿ ಯೋಜನೆ ಸಹಾಯಧನ ವಿತರಣೆ
ಪುತ್ತೂರಿನ ಮೈದೇ ದೇವುಸ್ ಚರ್ಚ್ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಶಫೀಕ್ ಮಾಲಕತ್ವದ ಬ್ಲ್ಯಾಕ್ ಡೈಮಂಡ್ ಫ್ಯಾನ್ಸಿ ಅಂಗಡಿಗೆ ಬೆಂಕಿ ಹಚ್ಚಿದ್ದು, ದುಷ್ಕರ್ಮಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇನ್ನು ಈ ಘಟನೆ ಸುಮಾರು ತಡರಾತ್ರಿ 2:30ರ ಸಮಯಕ್ಕೆ ನಡೆದಿದೆ.
ಹೆಲ್ಮೆಟ್ ಧರಿಸಿ ಬಂದ ದುಷ್ಕರ್ಮಿ ಫ್ಯಾನ್ಸಿ ಅಂಗಡಿಗೆ ಬಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಇದೇ ಫ್ಯಾನ್ಸಿ ಅಂಗಡಿ ಮುಂಭಾಗ ನಿನ್ನೆ ರಾತ್ರಿ 8:30ರ ಸಮಯಕ್ಕೆ ಗಲಾಟೆಯೊಂದು ನಡೆದಿತ್ತು.
ಆಟೋ ರಿಕ್ಷಾ ಫ್ಯಾನ್ಸಿ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಿದ್ದನ್ನ ಕಾರಿನಲ್ಲಿದ್ದ ಯುವಕನೋರ್ವ ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆದಿತ್ತು. ಬ್ಲ್ಯಾಕ್ ಡೈಮಂಡ್ ಫ್ಯಾನ್ಸಿ ಮುಂಭಾಗದ ರಸ್ತೆಯಲ್ಲಿ ಆಟೋ ರಿಕ್ಷಾವನ್ನ ಪಾರ್ಕ್ ಮಾಡಲಾಗಿತ್ತು.
ಸೈಡ್ ಕೊಡುವಂತೆ ಕಾರಿನಲ್ಲಿದ್ದ ಪುನೀತ್ ಕೇಳಿಕೊಂಡಿದ್ದಾರೆ. ಈ ವೇಳೆ ಏಕಾಏಕಿ ಕಾರಿನಲ್ಲಿದ್ದ ಪುನೀತ್ ಮೇಲೆ ಆಟೋ ರಿಕ್ಷಾ ಚಾಲಕ ನೌಶದ್ ಪತ್ನಿ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ.
ಬಳಿಕ ಕಾರಿನಲ್ಲಿದ್ದ ಪುನೀತ್ ಅವರ ಇತರ ಗೆಳೆಯರ ಮೇಲೂ ಅಲ್ಲಿ ಸೇರಿದ್ದವರು ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.