ಧಾರವಾಡ:(ಆ.25) ಕಾರ್ಕಳದಲ್ಲಿ ಯುವತಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದಾರೆ.
ಇದನ್ನೂ ಓದಿ: 🛑Karkala: ನಾಳೆ(ಆ.26) ನ್ಯಾಯಕ್ಕಾಗಿ ಹಿಂದೂ ಹಿತರಕ್ಷಣಾ ಸಮಿತಿಯಿಂದ ಬೃಹತ್ ಮೆರವಣಿಗೆ- ಶ್ರೀರಾಮ ಸೇನೆ
ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಾರ್ಕಳದಲ್ಲಿ ನಡೆದಿದ್ದು ಸಾಮೂಹಿಕ ಅತ್ಯಾಚಾರ, ಅಲ್ತಾಫ್ ಎನ್ನುವವನು ಅತ್ಯಂತ ಕ್ರೌರ್ಯವಾಗಿ ಯುವತಿಯನ್ನು ಕರೆದುಕೊಂಡು ಹೋಗಿ ತನ್ನ ಸಹಚರರನ್ನೂ ಕರೆದುಕೊಂಡು ಹೋಗಿ ಯುವತಿಗೆ ಮತ್ತು ಬರುವ ಔಷಧಿ ಕೊಟ್ಟು ಎಲ್ಲರೂ ಸೇರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಮಾಹಿತಿ ಇದೆ ಅವನ ಜೊತೆ ಯಾರೆಲ್ಲ ಗೆಳೆಯರು ಇದ್ದರು ಇದು ಬಹಿರಂಗ ಆಗಲಿ ಎಂದಿದ್ದಾರೆ.
ಹಿಂದೂ ಯುವತಿಯನ್ನು ಆತ ಇನ್ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡಿದ್ದ ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಇದನ್ನೇ ನಾವು ಕಳೆದ 25 ವರ್ಷಗಳಿಂದ ಹೇಳುತ್ತ ಬಂದಿದ್ದೇವೆ. ಯೋಚನೆ ಮಾಡಿ ಪ್ರೀತಿ ಮಾಡಿ ಎಂದು ಹೇಳುತ್ತಿದ್ದೇವೆ. ನಿಮ್ಮ ಕಣ್ಣು ಇನ್ನೂ ತೆರೆದಿಲ್ಲ ಎಂದರೆ ಏನು ಹೇಳಬೇಕು? ಎಂದಿದ್ದಾರೆ.
ಅಲ್ತಾಫ್ ಎನ್ನುವ ಈ ವ್ಯಕ್ತಿ ಯುವತಿ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಕೂಲೆ ಮಾಡಲೆಂದೇ ಪರಿಚಯ ಮಾಡಿಕೊಂಡಿದ್ದ. ನೇಹಾ ಘಟನೆಯಲ್ಲಿ 23 ಬಾರಿ ಚಾಕು ಹಾಕಲಾಗಿತ್ತು. ಇದೊಂದು ಲವ್ ಜಿಹಾದ್, ಹಿಂದೂ ಹೆಣ್ಣು ಮಕ್ಕಳನ್ನು ಪ್ರೀತಿ ಮಾಡಿ ಮತಾಂತರ ಮಾಡುವ ಹುನ್ನಾರ ನಡೆದಿದೆ ಇಂತಹ ಪ್ರಕರಣ ಕೋರ್ಟ್ಗೆ ಹೋಗಿವೆ. ಇದು ಇಸ್ಲಾಮಿಕ್ ಕೃತ್ಯ, ಇಷ್ಟಾದರೂ ಕೂಡ ಹಿಂದೂ ಹುಡುಗಿಯರಿಗೆ ಬುದ್ದಿ ಬಂದಿಲ್ಲ ಎಂದರೆ ಹೇಗೆ? ಇನ್ನಾದರೂ ನೋಡಿ ಕಲಿಯಿರಿ.
ಇಂತಹ ಪ್ರಕರಣಗಳನ್ನು ತಡೆಯಬೇಕು. ರಾಜ್ಯದಲ್ಲಿ ಒಂದೇ ವಾರದಲ್ಲಿ 18 ಪ್ರಕರಣಗಳು ಆಗಿವೆ. ಇದು ಭಯಾನಕ, ಪೊಲೀಸ್ ಇಲಾಖೆ ಇದನ್ನು ಮುಚ್ಚಿ ಹಾಕುವ ಕೆಲಸ ಮಾಡಬಾರದು. ಆ ಯುವತಿಗೆ ನ್ಯಾಯ ಸಿಗಬೇಕು. ಯಾವ ವಕೀಲರು ಕೂಡ ಆ ಆರೋಪಿಗಳ ಪರ ವಕಾಲತ್ತು ಮಾಡಬಾರದು ಎಂದು ಮುತಾಲಿಕ್ ಆಗ್ರಹಿಸಿದ್ದಾರೆ.