Fri. Apr 18th, 2025

Belthangadi: ಪೇರೋಡಿತ್ತಾಯ ಕಟ್ಟೆ ಶಾಲಾ ಹಳೆ ವಿದ್ಯಾರ್ಥಿ ಸಂಘ ದ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ರಚನೆ – ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ ನೇಸರ

ಬೆಳ್ತಂಗಡಿ:(ಆ.26) ತೆಂಕಕಾರಂದೂರು ಸ.ಉ.ಹಿ.ಪ್ರಾಥಮಿಕ ಶಾಲೆ, ಪೇರೋಡಿತ್ತಾಯಕಟ್ಟೆ ಇಲ್ಲಿನ ಹಳೆ ವಿದ್ಯಾರ್ಥಿ ಸಂಘ ದ ವಾರ್ಷಿಕ ಮಹಾ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಸ. ಉ. ಹಿ. ಪ್ರಾ. ಶಾಲೆ ಪೇರೋಡಿತ್ತಾಯಕಟ್ಟೆ ಶಾಲೆಯಲ್ಲಿ ಜರಗಿತು.

ಇದನ್ನೂ ಓದಿ: 🍺Liquor price: ಮದ್ಯ ಪ್ರಿಯರಿಗೆ ಗುಡ್‌ ನ್ಯೂಸ್

ವೇದಿಕೆಯಲ್ಲಿ ಅಧ್ಯಕ್ಷರಾದ ಸತೀಶ್ ಶೆಟ್ಟಿ ಅಲಿಮಾರ್, ವಾರ್ಷಿಕೋತ್ಸವ ಸಮಿತಿ ಗೌರವ ಅಧ್ಯಕ್ಷ ರಾದ ಸಂತೋಷ್ ಹೆಗ್ಡೆ, ಕಾರ್ಯದರ್ಶಿ ಪ್ರಮೋಧರ ಗಿಂಡಾಡಿ, ಕೋಶಾಧಿಕಾರಿ ಶರೀಫ್ ಮಂಜೊಟ್ಟಿ, ಗೌರವ ಸಲಹೆಗಾರರಾದ ವಿಷ್ಣು ಸಂಪಿಗೆತ್ತಾಯ ಉಪಸ್ಥಿತರಿದ್ದರು.

ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ ನೇಸರ, ಉಪಾಧ್ಯಕ್ಷರಾಗಿ ಸಂಶುದ್ದೀನ್ ಕಟ್ಟೆ, ಶರತ್ ಕಾಡಬಾಗಿಲು, ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭ ಶೆಟ್ಟಿ ನೂಜಿ, ಜೊತೆ ಕಾರ್ಯದರ್ಶಿಗಳಾಗಿ ವಿಠಲ ಕಟ್ಟೆ , ಕೋಶಾಧಿಕಾರಿಯಾಗಿ ಶರೀಫ್ ಮಂಜೊಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಶೇಷಾಚಲ ಭಟ್ ಭಟ್,

ಗೌತಮ್ ಗಿಂಡಾಡಿ, ಸುಲೇಮಾನ್ ಗಿಂಡಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ಜಯಂತ ಓಡದಕರಿಯ, ಜಯಪ್ರಕಾಶ್, ಸುರೇಖ ಶೆಟ್ಟಿ, ಸಿರಾಜ್ ಮಂಜೊಟ್ಟಿ, ಪ್ರಮೋದ್ , ಸಾಂಸ್ಕೃತಿಕ ಕಾರ್ಯದರ್ಶಿ ಗಳಾಗಿ ಪ್ರಮೋಧರ ಗಿಂಡಾಡಿ, ಸುಜಿತ್ ಕಾಡಬಾಗಿಲು, ಪ್ರಕಾಶ್ ಕುಕ್ಕೆಟ್ಟು ಗೌರವ ಸಲಹೆ ಗಾರರಾಗಿ ಸಂತೋಷ್ ಹೆಗ್ಡೆ,ಸತೀಶ್ ಶೆಟ್ಟಿ ಅಳಿಮಾರ್, ಅಶ್ರಫ್ ಕಟ್ಟೆ, ನಿಜಾಮ್ ಗಿಂಡಾಡಿ , ಕೆ ವಿಷ್ಣು ಸಂಪಿಗೆತ್ತಾಯ, ರಮಾನಾಥ ರೈ ,ಸಾಂತಪ್ಪ ಮೂಲ್ಯ, ಹೇಮಂತ್ ಗುಂಡೇರಿ, ಶಾಲಾ ಮುಖ್ಯೋಪಾಧ್ಯಾಯರು ಆಯ್ಕೆ ಆಗಿದ್ದಾರೆ. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಬೆನ್ನಿ ಪಾಯ್ಸ್, ಶಿಕ್ಷಕಿ ಜ್ಯೋತಿ, ಶಾಲಾ ಎಸ್. ಎಂ. ಡಿ. ಸಿ ಅಧ್ಯಕ್ಷ ಮುಸ್ತಫಾ ಮಂಜೊಟ್ಟಿ, ಹಳೆ ವಿದ್ಯಾರ್ಥಿ ಸಂಘ ದ ಸದಸ್ಯರು ಶಾಲಾ ಅಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *