Thu. Dec 26th, 2024

Boy raped boy: 24ರ ಯುವಕನಿಂದ 15ರ ಬಾಲಕನ ಮೇಲೆ ಅತ್ಯಾಚಾರ – ಎಂಥಾ ಕಾಲ ಬಂತಪ್ಪಾ!!

Boy raped boy:(ಆ.26) ದಿನ ಬೆಳಗಾದರೆ ಹೆಣ್ಣು ಮಗು, ಕಂದಮ್ಮ, ಬಾಲಕಿ, ಹುಡುಗಿ, ಯುವತಿ, ಹೆಂಗಸು ಕೊನೆಗೆ ವೃದ್ಧೆಯ ಮೇಲೂ ಅತ್ಯಾಚಾರ ಎನ್ನುವ ಸುದ್ದಿಯನ್ನು ಕೇಳಿದ್ದೇವೆ. ಹೆಣ್ಣು ಮಕ್ಕಳ ಸುರಕ್ಷತೆ ಏನು ಅನ್ನುವ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದೆವು.

ಇದನ್ನೂ ಓದಿ: 🔴ಕಟಪಾಡಿ: ಕಟಪಾಡಿ ರೋಟರಿಗೆ 11 ಜಿಲ್ಲಾ ಪ್ರಶಸ್ತಿ

ಇದರ ಜೊತೆಗೆ ಅಲ್ಲೊಂದು ಇಲ್ಲೊಂದು ಹುಡುಗರ ಮೇಲೆಯೂ ದೌರ್ಜನ್ಯದ ಸುದ್ದಿಗಳನ್ನು ಕೇಳುತ್ತಿದ್ದೆವು. ಇದು ಕಲಿಗಾಲ, ಕಾಲ ಕೆಟ್ಟೋಯ್ತು ದೇವ್ರೇ ಎಂದು ಮೊರೆ ಇಡುವಾಗ ಇದೀಗ ಮತ್ತೊಂದು ಕೇಳಲಾರದಂತಹ ಸುದ್ದಿ ಬೆಳಕಿಗೆ ಬಂದಿದೆ.

24ರ ಯುವಕನಿಂದ 15 ವರ್ಷದ ಬಾಲಕ ಮೇಲೆ ಅತ್ಯಾಚಾರ ಎಸಗಿದ ಘಟನೆ ಹುಬ್ಬಳ್ಳಿಯ ಕಸಬಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಸುಮ್ ಹುಲಮನಿ ಎಂಬಾತನಿಂದ ಕೃತ್ಯ ನಡೆದಿದೆ. ಪೇಂಟಿಂಗ್ ಕೆಲಸ ಮಾಡುತ್ತಿದ್ದ ಮಾಸುಮ್ ಹುಲಮನಿ, ಮೊಬೈಲ್ ಕೊಡಿಸುವುದಾಗಿ ಕರೆದುಕೊಂಡು ಹೋಗಿ ಬಾಲಕನ ಮೇಲೆ ಅತ್ಯಾಚಾರವೆಸಗಿದ್ದಾನೆ.

ಪೊಲೀಸರು ಮಾಸುಮ್ ಹುಲಮನಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹುಬ್ಬಳ್ಳಿಯ ಕಸಬಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Leave a Reply

Your email address will not be published. Required fields are marked *