Tue. Apr 8th, 2025

Kolkata doctor rape-murder case: ನಾನು ಹೋಗುವ ಮುನ್ನವೇ ಆಕೆ ಸತ್ತಿದ್ದಳು! ಯೂಟರ್ನ್ ಹೊಡೆದ ಸಂಜಯ್‌ ರಾಯ್

Kolkata doctor rape-murder case:(ಆ.26) ಕೋಲ್ಕತ್ತಾದ ಆರ್​ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಮಹಿಳಾ ಸ್ನಾತಕೋತ್ತರ ತರಬೇತಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸಂಜಯ್ ರಾಯ್‌ ಎಂಬ ಆರೋಪಿ ತನ್ನ ಬ್ಲೂಟೂತ್‌ ಅನ್ನು ಕೃತ್ಯ ಎಸಗಿದ ಸ್ಥಳದಲ್ಲೇ ಬಿಟ್ಟು ಹೋಗಿದ್ದರಿಂದ ಆತ ಪೋಲೀಸರ ಬಲೆಗೆ ಸಿಕ್ಕಿಕೊಂಡಿದ್ದನು.

ಇದನ್ನೂ ಓದಿ:🔴Rakshit Shivaram: ಕಾರ್ಕಳ ವಿಧಾನಸಭಾ ಕ್ಷೇತ್ರದ ಪಕ್ಷದ ಉಸ್ತುವಾರಿಯಾಗಿ ರಕ್ಷಿತ್ ಶಿವರಾಂ ನೇಮಕ

ಈ ಅತ್ಯಾಚಾರ, ಕೊಲೆ ಮಾಡಿದ್ದು ನಾನೇ ಎಂದು ಈಗಾಗಲೇ ಒಪ್ಪಿಕೊಂಡಿರುವ ಸಂಜಯ್ ರಾಯ್ ಇದೀಗ ಯೂಟರ್ನ್​ ಹೊಡೆದಿದ್ದು, ಪಾಲಿಗ್ರಾಫ್ ಪರೀಕ್ಷೆ ನಡೆಸಿದಾಗ ತಾನು ಯಾವುದೇ ಕೊಲೆ, ಅತ್ಯಾಚಾರ ಮಾಡಿಲ್ಲ ನಾನು ನಿರಪರಾಧಿ ಎಂದು ಹೇಳಿದ್ದಾನೆ.

ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆಗೆ ಸಂಬಂಧಿಸಿದಂತೆ ಆರೋಪಿ ಸಂಜಯ್​ ರಾಯ್​ಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲಾಯಿತು.

ಆ ಸಂದರ್ಭದಲ್ಲಿ ತಾನು ಯಾವುದೇ ಕೊಲೆ, ಅತ್ಯಾಚಾರ ಮಾಡಿಲ್ಲ, ನಾನು ನಿರಪರಾಧಿ ಎಂದು ಹೇಳಿದ್ದಾನೆ. ನಾನು ಸೆಮಿನಾರ್ ಹಾಲ್​ಗೆ ಹೋಗುವ ಮುನ್ನವೇ ಆಕೆ ಸಾವನ್ನಪ್ಪಿದ್ದಳು ಎಂದು ಹೇಳಿಕೆ ಕೊಟ್ಟಿದ್ದಾನೆ.

Leave a Reply

Your email address will not be published. Required fields are marked *