ಬೆಳ್ತಂಗಡಿ:(ಆ.26) ಸಂತಾನ ಗೋಪಾಲ ಕೃಷ್ಣ ದೇವಸ್ಥಾನ ತೆಂಕಕಾರಂದೂರು ಇಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಹಾಗೂ ಸನ್ಮಾನ ಕಾರ್ಯಕ್ರಮ, ವಿವಿಧ ಆಟೋಟ ಸ್ಪರ್ಧೆ ಗಳ ಉದ್ಘಾಟನೆ ಜರುಗಿತು. ಡಾ. ಎನ್ ಎಂ. ತುಳುಪುಳೆ ಶ್ರೀ ಕ್ಲಿನಿಕ್ ಅಳದಂಗಡಿ ಇವರು ಉದ್ಘಾಟಿಸಿದರು.
ಇದನ್ನೂ ಓದಿ: 🔶Kanyadi: ಕನ್ಯಾಡಿಯ 11ನೇ ವರ್ಷದ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಈ ಸಂದರ್ಭದಲ್ಲಿ ಕೃಷಿಕರು, ಸಾಂಸ್ಕೃತಿಕ ಸಂಪನ್ನರಾದ ನಾರಾಯಣ ರೈ ತೆಂಕಕಾರಂದೂರು ಹಾಗೂ ದೇವಸ್ಥಾನದ ಗೌರವಾಧ್ಯಕ್ಷರಾದ, ಮುಜರಾಯಿ ಇಲಾಖೆಯ ಧಾರ್ಮಿಕ ದತ್ತಿ ಪರಿಷತ್ತಿಗೆ ಆಯ್ಕೆಯಾದ ಕೆ.ಎಸ್.ಯೋಗೇಶ್ ಕುಮಾರ್ ಇವರುಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಕೆ. ವಸಂತ ಸಾಲ್ಯಾನ್, ದೇವಸ್ಥಾನದ ಆಡಳಿತ ಮೊಕ್ತೇಸರಾದ ಸುಬ್ರಹ್ಮಣ್ಯ ನೂರಿತ್ತಾಯ, ದೇವಸ್ಥಾನ ಸಮಿತಿ ಯ ಅಧ್ಯಕ್ಷರಾದ ಪದ್ಮ ನಾಯ್ಕ ಉಪಸ್ಥಿತರಿದ್ದರು. ಜಾರು ಕಂಬ ಸ್ಪರ್ಧೆ, ಮಕ್ಕಳಿಗೆ ಬಾಲಕೃಷ್ಣ ಸ್ಪರ್ಧೆ, ಭಕ್ತಿ ಗೀತೆ ಸ್ಪರ್ಧೆ, ಲಕ್ಕಿ ಗೇಮ್, ಗುಂಡೆಸೆತ, ಮಡಿಕೆ ಹೊಡೆಯುವ ಸ್ಪರ್ಧೆ, ಹಗ್ಗ ಜಗ್ಗಾಟ, ವಾಲಿಬಾಲ್, ಕಬಡ್ಡಿ ಹಾಗೂ ವಿವಿಧ ಸ್ಪರ್ಧೆ ಗಳು ನಡೆಯಲಿವೆ.
ತೆಂಕಕಾರಂದೂರು ಸಂತಾನ ಶ್ರೀ ಗೋಪಾಲ ಕೃಷ್ಣ ದೇವಸ್ಥಾನ ಖಂಡಿಗ 13ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಐದು ವರ್ಷದೊಳಗಿನ ಮಕ್ಕಳಿಗೆ ಏರ್ಪಡಿಸಿದ ಬಾಲಕೃಷ್ಣ ಸ್ಪರ್ಧೆಯಲ್ಲಿ ಸುಮಾರು 32 ಪುಟಾಣಿಗಳು ಭಾಗವಹಿಸಿ ಪ್ರಥಮ ಬಹುಮಾನವನ್ನು ದ್ವಿತೀಯ ಬಹುಮಾನವನ್ನು ತೃತೀಯ ಬಹುಮಾನವನ್ನು ಪಡೆದುಕೊಂಡರು.