Thu. Dec 26th, 2024

Daily Horoscope – ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ತೊಂದರೆಯಾಗಬಹುದು!!

Daily Horoscope - ಇಂದು ಈ ರಾಶಿಯವರಿಗೆ ಆತುರವೇ ಅಪಾಯ ತಂದೊಡ್ಡಬಹುದು

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ನವಮೀ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಧ್ರುವ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:46 ಗಂಟೆ, ರಾಹು ಕಾಲ ಮಧ್ಯಾಹ್ನ 03:40 ರಿಂದ 05:13, ಯಮಘಂಡ ಕಾಲ ಬೆಳಿಗ್ಗೆ 09:28 ರಿಂದ 11:01ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:34 ರಿಂದ 02:07ರ ವರೆಗೆ.

ಮೇಷ ರಾಶಿ: ಇಂದು ನೀವು ಎಲ್ಲ ಕಾರ್ಯವನ್ನೂ ಅಚ್ಚುಕಟ್ಟಾಗಿ ಮಾಡಲು ಬಯಸುವಿರಿ. ವಾದ ಮಾಡಿ ಗೆಲ್ಲುವುದಕ್ಕಿಂತ ವಾಸ್ತವವನ್ನು ಅರಿತು ಸುಮ್ಮನಾಗುವುದು ಉತ್ತಮ. ಕಳೆದುಕೊಂಡಿದ್ದರ ಕುರಿತು ಚಿಂತಿಸುತ್ತ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ.

ವೃಷಭ ರಾಶಿ; ಇಂದು ನೀವು ಯಾರ ಮಾತನ್ನು ಒಪ್ಪಿದರೂ ನಿಮ್ಮ ಆಲೋಚನೆಯನ್ನು ಬದಲಾಯಿಸುವುದಿಲ್ಲ. ದುಡುಕಿನ ನಿರ್ಧಾರದಿಂದ ಬೇಸರಪಡಬೇಕಾದೀತು. ಆಕಸ್ಮಿಕ‌ ಪ್ರಯಾಣವು ಬಂದಿದ್ದು, ಇದರಿಂದ ನಿಮಗೆ ಉದ್ಯೋಗದಲ್ಲಿ ತೊಂದರೆಯಾಗಬಹುದು. ಎಲ್ಲಿಗಾದರೂ ಪ್ರಯಾಣ ಮಾಡುವ ಉತ್ಸಾಹವಿರುವುದು.

ಮಿಥುನ ರಾಶಿ: ಇಂದು ತಂದೆಯು ಯಾವುದೋ ಕಾರ್ಯಕ್ಕೆ ನಿಮ್ಮಿಂದ ಧನವನ್ನು ನಿರೀಕ್ಷಿಸಬಹುದು. ಲೆಕ್ಕ ಶೋಧಕರಿಗೆ ಒತ್ತಡ ಹೆಚ್ಚು. ನಿಮ್ಮ‌ ಪ್ರಯಾಣದಲ್ಲಿ ಕೆಲವು ತೊಂದರೆಗಳು ಆಗಬಹುದು. ನಿಮ್ಮವರ ಅನಾರೋಗ್ಯವನ್ನು ಸರಿಮಾಡಿಕೊಳ್ಳಲು ಓಡಾಟ ಮಾಡಬೇಕಾದೀತು.

ಕರ್ಕಾಟಕ ರಾಶಿ; ಇಂದು ನೀವು ಉದ್ಯೋಗದ ಕಾರಣಕ್ಕೆ ಬೇರೆ ಕಡೆಗೆ ಹೋಗುವಿರಿ. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಸಂಪೂರ್ಣ ವಿಶ್ವಾಸ ಬರಬಹುದು. ನಿಮ್ಮ ನಡವಳಿಕೆಯಿಂದ ಮೇಲಧಿಕಾರಿಗಳಿಗೆ ಅಸಮಾಧಾನವಾಗಲಿದೆ.

ಸಿಂಹ ರಾಶಿ: ಇಂದು ಉದ್ಯೋಗದಲ್ಲಿ ನಿಮಗೆ ಬದಲಾವಣೆ ಬೇಕು ಎಂದು ಎನಿಸುವುದು. ದೊಡ್ಡ ಸ್ಥಾನದಲ್ಲಿದ್ದು ಸಣ್ಣ ಮನಸ್ಸು ಮಾಡುವುದು ಬೇಡ. ಅಪರಿಚಿತ ದೂರವಾಣಿಯ ಕರೆಯಿಂದ ನಿಮಗೆ ಲಾಭವಾಗುವುದು.

ಕನ್ಯಾ ರಾಶಿ: ಇಂದು ನೀವು ದಾಂಪತ್ಯದಲ್ಲಿ ಕಲಹ ಸಹಜವೆಂದು ಸುಮ್ಮನಿರಬೇಡಿ. ಗ್ರಾಹಕರ ಬೇಡಿಕೆಯನ್ನು ಈಡೇರಿಸುವಿರಿ. ನಿಮ್ಮ ಪ್ರಯತ್ನಕ್ಕೆ ಪ್ರತಿಫಲವು ಸಿಗಬೇಕೆಂದು ನೀವು ಅಂದುಕೊಳ್ಳುವುದು ಸರಿಯಾಗದು. ನಿಮ್ಮವರಲ್ಲದವರ ಮೇಲೆ ದ್ವೇಷವನ್ನು ಬೆಳೆಸಿಕೊಳ್ಳುವುದು ಬೇಡ.

ತುಲಾ ರಾಶಿ: ಇಂದು ಯಥೇಚ್ಛ ಸುತ್ತಾಟವು ನಿಮಗೆ ಆಯಾಸವನ್ನು ತಂದೀತು.‌ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಕಷ್ಟ. ನಿಮಗೆ ಭೂಮಿಯನ್ನು ಕೊಡುವುದು ಅನಿವಾರ್ಯವಾಗಿದ್ದು ಅಲ್ಪ ಮೌಲ್ಯಕ್ಕೆ ಮಾರಾಟ ಮಾಡುವಿರಿ. ಇಂದು ಗುಂಪಿನಲ್ಲಿ ಕೆಲಸ‌ಮಾಡುವುದು ನಿಮಗೆ ಕಿರಿಕಿರಿಯಾದೀತು.

ವೃಶ್ಚಿಕ ರಾಶಿ: ಇಂದು ನೀವು ಮುಂದೆ ಮಾಡಬೇಕಾದ ಕೆಲವು ಕಾರ್ಯಗಳ ನಿರ್ಧಾರವನ್ನು ಮಾಡಿ ಮುಂದುವರಿಯುವಿರಿ. ಬೇಡದ ಸಲಹೆಗಳು ನಿಮ್ಮ ಮನಸ್ಸನ್ನು ಹಾಳುಮಾಡುವುದು. ಇಂದು ನೀವು ಅಧಿಕವಾಗಿ ಮಾತನಾಡದೇ ಸುಮ್ಮನಿರುವುದು ಉತ್ತಮ. ಕಾಲಹರಣಕ್ಕೆ ನಿಮಗೆ ಇನ್ನೊಬ್ಬರ ವಿಚಾರವನ್ನು ಆಡಿಕೊಳ್ಳುವಿರಿ.

ಧನು ರಾಶಿ: ಯಾವುದಾದರೂ ಹಣಕಾಸಿನ ಒಪ್ಪಂದವನ್ನು ಮಾಡುವಾಗ ಎಚ್ಚರಿಕೆ ಇರಲಿ. ಅಮೂಲ್ಯ ವಸ್ತುಗಳು ಹಾಳಾದೀತು. ನಿಮ್ಮ ಅಪೂರ್ಣ ಕಾರ್ಯಗಳಿಗೆ ಅಂತ್ಯವನ್ನು ಕಾಣಿಸುವಿರಿ. ಇಂದು ನಿಮಗೆ ಸ್ಥಿರವಾದ ಬುದ್ಧಿಯನ್ನು ಇಟ್ಟುಕೊಳ್ಳಲು ಕಷ್ಟವಾದೀತು.‌ ಏನೇನೋ ಯೋಚನೆಗಳು ಬರಬಹುದು.

ಮಕರ ರಾಶಿ: ನಿಮ್ಮ ಹಠದ ಸ್ವಭಾವಕ್ಕೆ ಎಲ್ಲರೂ ಒಗ್ಗುತ್ತಾರೆ ಎನ್ನಲಾಗದು. ಕಾನೂನಾತ್ಮಕ ವಿಚಾರದಲ್ಲಿ ನಿಮಗೆ ಹಿನ್ನಡೆ ಸಾಧ್ಯತೆ ಇದೆ. ನಿಮಗೆ ಬೇಕಾದುದನ್ನೇ ಮಾಡಿಕೊಳ್ಳುವ ಛಾತಿಯು ಇಂದು ಇರಲಿದೆ. ನಿಮ್ಮ ಆಸ್ತಿಯ ಬಗ್ಗೆ ನಿಮಗೇ ಸಂಪೂರ್ಣವಾದ ಮಾಹಿತಿ ಕೊರತೆಯಾಗುವುದು.

ಕುಂಭ ರಾಶಿ: ಇಂದು ನೀವು ಪ್ರಾಮಾಣಿಕ ಎಂದು ತೋರಿಸಲು ಹೋಗಿ ಉದ್ಯೋಗದಲ್ಲಿ ತೊಂದರೆ ಮಾಡಿಕೊಳ್ಳುವಿರಿ. ವ್ಯಾಪಾರದ ಸಂಚು ನಿಮಗೆ ಗೊತ್ತಾಗದೇ ಹೋಗಬಹುದು. ಇಂದಿನ‌ ನಿಮ್ಮ ಆರಂಭವು ಬಹಳ ಸಂತೋಷದಿಂದ‌ ಇರಲಿದೆ. ಸ್ವಾಭಿಮಾನವನ್ನು ಬಿಟ್ಟು ಯಾವುದನ್ನೂ ಮಾಡಲಾರಿರಿ. ಕೋಪವನ್ನು ಸ್ವಲ್ಪ ಕಡಿಮೆ‌ ಮಾಡಿಕೊಳ್ಳುವುದು ಉತ್ತಮ.‌

ಮೀನ ರಾಶಿ: ಇಂದು ನೀವು ಯಾವುದೇ ಉದ್ವೇಗಕ್ಕೆ ಒಳಗಾಗದೇ ಶಾಂತವಾಗಿ ಇರಬೇಕು ಎನ್ನುವುದನ್ನು ನಿರ್ಧರಿಸುವಿರಿ. ನಿಮ್ಮ ಉತ್ಸಾಹಕ್ಕೆ ದೃಷ್ಟಿ ಬೀಳಬಹುದು. ನೀವು‌ ಇಟ್ಟ ನಂಬಿಕೆಗೆ ಮೋಸವಾಗುವ ಸಾಧ್ಯತೆ ಇದೆ. ಹಣಕಾಸಿನ ಮೌಲ್ಯವನ್ನು ನೀವು ಇಂದು ತಿಳಿದುಕೊಳ್ಳುವಿರಿ.

Leave a Reply

Your email address will not be published. Required fields are marked *