ಉಡುಪಿ:(ಆ.27) ಉಡುಪಿ ಜಿಲ್ಲೆಯಲ್ಲಿ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದ ಕೇಸ್ ಗೆ ಸಂಬಂಧಿಸಿ ಕಾರ್ಕಳ ಠಾಣೆ ಪೊಲೀಸರು ಮೂರನೇ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಅಭಯ್ ಎಂದು ಗುರುತಿಸಲಾಗಿದೆ. ಅತ್ಯಾಚಾರಿ ಅಲ್ತಾಫ್ ಗೆ ಡ್ರಗ್ಸ್ ಪೂರೈಕೆ ಮಾಡಿದ ಹಿನ್ನಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ; 🔴ಇನ್ನಂಜೆ: ಇನ್ನಂಜೆ ಯುವಕ ಮಂಡಲ ವತಿಯಿಂದ ಮೊಸರು ಕುಡಿಕೆ ಕ್ರೀಡಾಕೂಟ-2024




ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಡ್ರಗ್ಸ್ ಬೆರೆಸಿದ ಮದ್ಯ ಕುಡಿಸಿ ಯುವತಿ ಮೇಲೆ ಅತ್ಯಾಚಾರ ಎಸಗಲಾಗಿದ್ದ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಇದೀಗ 3ನೇ ಆರೋಪಿ ಅಭಯ್‌ನನ್ನು ಪೊಲೀಸರು ಬಂಧಿಸಿದ್ದು ಹೊಸ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಅಭಯ್, ಪ್ರಮುಖ ಆರೋಪಿ ಅಲ್ತಾಫ್ ಜೊತೆ ಆತ್ಮೀಯವಾಗಿದ್ದ. ಅತ್ಯಾಚಾರ ನಡೆದ ದಿನ ಅಲ್ತಾಫ್ ಗೆ ಡ್ರಗ್ಸ್ ಒದಗಿಸಿದ್ದ. ಸದ್ಯ ಈಗ ಅಭಯ್ ಬಂಧನ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.


ಇನ್ನು ಅಭಯ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಡ್ರಗ್ ನೀಡಿದ್ದ ಆರೋಪಿ ಬಿಜೆಪಿಯ ನಾಯಕರೊಂದಿಗೆ ಗುರುತಿಸಿಕೊಂಡಿದ್ದಾಗಿಯೂ ಚರ್ಚೆಯಾಗುತ್ತಿದೆ. ಇದು ಬಿಜೆಪಿಗೆ ಮುಖಭಂಗ ಉಂಟುಮಾಡಿದೆ. ಅತ್ಯಾಚಾರ ಎಸಗಿದ ಇತರ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
