ಬೆಂಗಳೂರು:(ಆ.28) ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನದಲ್ಲಿರುವ ನಟ ದರ್ಶನ್ ಗೆ ಜೈಲಿನಲ್ಲಿ ಸಿಗುತ್ತಿರುವ ರಾಜಾತಿಥ್ಯ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಇತರ ಆರೋಪಿಗಳ ಜೊತೆ ದರ್ಶನ್‌ಗೆ ಅನ್ನ ಆಹಾರ ಮಾತ್ರವಲ್ಲದೆ, ಇತರ ಸೌಲಭ್ಯಗಳು ಸಿಗುತ್ತಾ ಇರೋದು ರಾಜ್ಯಾದ್ಯಂತ ಚರ್ಚೆಗೆ ಗುರಿಯಾಗಿದೆ.
ಸದ್ಯ ದರ್ಶನ್ ಅವರ ಫೋಟೋ ನೋಡಿ ಸಾಮಾನ್ಯವಾಗಿ ಕ್ರೈಂ ಮಾಡಿದ ಅಪರಾಧಿಗಳು ಜೈಲಿಗೆ ಹೋಗೋದು ಮನಃ ಪರಿವರ್ತನೆಗಾ ಅಥವಾ ಬಿಂದಾಸ್ ಆಗಿ ಕಾಲ ಕಳೆಯೋದಕ್ಕಾ ಅನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡುವಂತೆ ಮಾಡಿದೆ. ಈ ಫೋಟೋ ಬೆನ್ನಲ್ಲೇ ಪರಪ್ಪನ ಅಗ್ರಹಾರದ ಏಳು ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿತ್ತು.
ಜೈಲಿನಲ್ಲಿರುವ ದರ್ಶನ್ ಫೋಟೋ ಬಗ್ಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಪ್ರತಿಕ್ರಿಯಿಸಿದ್ದಾರೆ. ದರ್ಶನ್ ಅವರ ಬೆನ್ನಿಗೆ ನಿಂತು ಮಾತನಾಡಿರುವ ಸುಮಲತಾ ಅವರು ಜೈಲಿನಲ್ಲಿ ಹೀಗೆ ನಡೆಯುತ್ತಿರುವುದು ಇದೇನು ಮೊದಲಲ್ಲ. ನಾವು ಈ ರೀತಿಯ ಪ್ರಕರಣ ಇದೇ ಫಸ್ಟ್ ಅನ್ನೋದನ್ನ ನೋಡಬೇಕು. ಈ ಬಗ್ಗೆ ನಾನು ಮಾತನಾಡಿದ್ರೆ ಕಾಂಟ್ರವರ್ಸಿ ಆಗಬಹುದು ಎಂದಿದ್ದಾರೆ.
ದರ್ಶನ್ ಅವರು ನನಗೆ ಆಪ್ತರು. ಬಹಳ ಹತ್ತಿರದವರು ಎಂದ ಸುಮಲತಾ ಅಂಬರೀಶ್, ಜೈಲಲ್ಲಿ ಹಣ ಕೊಟ್ಟರೆ ಏನು ಸೌಲಭ್ಯ ಬೇಕಾದರೂ ಸಿಗುತ್ತದೆ. ಈ ಆರೋಪವನ್ನ ಐಪಿಎಸ್ ಅಧಿಕಾರಿ ಡಿ.ರೂಪಾ ಅವರೇ ಈ ಹಿಂದೆನೂ ತಿಳಿಸಿಕೊಟ್ಟಿದ್ದಾರೆ. ಇದು ಪರಪ್ಪನ ಅಗ್ರಹಾರದಲ್ಲಿ ಅಷ್ಟೇ ಆಗಿಲ್ಲ. ಪ್ರಪಂಚದಾದ್ಯಂತ ಜೈಲುಗಳಲ್ಲಿ ಇಂತಹ ಭ್ರಷ್ಟಾಚಾರ ನಡೀತಿದೆ. ಅಮೆರಿಕಾದ ಜೈಲಲ್ಲೂ ಡ್ರಗ್ಸ್, ಸಿಗರೇಟ್ ಎಲ್ಲಾ ಸಿಗುತ್ತೆ. ಇದು ಸರಿ ಅಂತಾ ನಾನು ಹೇಳಲ್ಲ. ಇದು ಸಿಸ್ಟಂನಲ್ಲಿ ಇರೋ ಸಮಸ್ಯೆ ಎಂದು ಸುಮಲತಾ ಅಂಬರೀಶ್ ತಿಳಿಸಿದ್ದಾರೆ.
ಅಷ್ಟಲ್ಲದೆ ಮಾಧ್ಯಮದವರು ಕೇಳಿದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸುಮಲತಾ.. ‘ಜೈಲಿನಲ್ಲಿ ಯಾರಪ್ಪಾ ಇರುತ್ತಾರೆ? ಜೊತೆಯಲ್ಲಿ ಓಡಾಡಲು, ಮಾತಾಡಲು ಜೈಲಲ್ಲಿ ಇನ್ಯಾರು ಸಿಕ್ತಾರೆ? ಅಲ್ಲಿ ಇರುವುದೇ ಕ್ರಿಮಿನಲ್ಸ್?’ ಹೇಳಿದ್ದಾರೆ.