Wed. Apr 16th, 2025

Guruwayanakere: ಉನ್ನತ ಮಟ್ಟದ ಇಲಾಖಾಧಿಕಾರಿಗಳ ಗೈರಿಗೆ 2 ನೇ ಬಾರಿಯು ರದ್ದುಗೊಂಡ ಕುವೆಟ್ಟು ಗ್ರಾಮಸಭೆ

ಗುರುವಾಯನಕೆರೆ:(ಆ.28) ಕುವೆಟ್ಟು ಗ್ರಾಮ ಪಂಚಾಯತ್ ನ 2024-25 ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಉನ್ನತ ಮಟ್ಟದ ಇಲಾಖಾಧಿಕಾರಿಗಳ ಗೈರಿನಿಂದಾಗಿ ರದ್ದುಗೊಂಡಿತು.

ಇದನ್ನೂ ಓದಿ: 🔴ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಜಯಾನಂದ ‌ಗೌಡ ಆಯ್ಕೆ

ಗ್ರಾಮಸಭೆಗೆ ಸಂಬಂಧಪಟ್ಟ ಅಧಿಕಾರಿಗಳು ಗೈರಾಗಿದ್ದಾರೆ. ಕೆಲವು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಿದ್ದೇವೆ. ಆದರೆ ಅಧಿಕಾರಿಗಳು ಬಾರದೇ ನಮ್ಮ ಸಮಸ್ಯೆ ಯಾರಲ್ಲಿ ಹೇಳುವುದು.

ಕಾಟಾಚಾರಕ್ಕೆ ಗ್ರಾಮಸಭೆ ಮಾಡುವುದು ಬೇಡಾ. ಸಾಮಾನ್ಯ ಸಭೆಯಲ್ಲಿ ಚರ್ಚೆಯಾದ ವಿಷಯವನ್ನು ಮೇಲಾಧಿಕಾರಿಗಳಿಗೆ ಪತ್ರ ಮೂಲಕ ತಿಳಿಸಿದರೂ ಅವರು ಬರುವುದಿಲ್ಲ ಎಂದರೆ ನಾವು ಗ್ರಾಮ ಸಭೆಯನ್ನು ಬಹಿಷ್ಕಾರ ಮಾಡುತ್ತೇವೆ. ಏಳೆಂಟು ತಿಂಗಳು ಕಳೆದ ನಂತರ ಗ್ರಾಮಸಭೆ ಆದರೂ ಅಧಿಕಾರಿಗಳು ಯಾಕೆ ಬರುವುದಿಲ್ಲ.

ತಾ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಬರಲಿ. ಬೆಳೆಯುತ್ತಿರುವ ಗುರುವಾಯನಕೆರೆಗೆ ಪ್ರದೇಶದ ಕುವೆಟ್ಟು ಪಂಚಾಯತ್ ಗೆ ಯಾಕೆ ಅಧಿಕಾರಿಗಳು ಬರುವುದಿಲ್ಲ.ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ರಸ್ತೆಗಳು ಗುಂಡಿಗಳಾಗಿ ಮಾರ್ಪಟ್ಟಿದೆ.

ಪಿಡಬ್ಲ್ಯೂಡಿ ಇಲಾಖೆಯವರು ಯಾರು ಬರಲಿಲ್ಲ. ಸ್ಥಳೀಯ ಕಾಲೇಜ್ ನಿಂದ ಗಲೀಜು ನೀರು ಕೆರೆಗೆ ಬರುತ್ತದೆ ಅದರ ಬಗ್ಗೆ ಡಿಡಿಪಿಐ ಯಲ್ಲಿ ವಿಚಾರವನ್ನು ಮಾತಾಡೋಕೆ ಇದೆ. ಹೈವೆ ಅಧಿಕಾರಿಗಳು ಎಲ್ಲಿ. ಅವರಿಂದ ಸಮಸ್ಯೆಗಳಾಗಿದೆ, ನಾವು ಯಾರಲ್ಲಿ ಮಾತಾಡಬೇಕು, ಅವರು ಬರಬೇಕು ಎಂದು ಗ್ರಾಮಸ್ಥರು ಪಂಚಾಯತ್‌ ಅನ್ನು ಪ್ರಶ್ನಿಸಿದರು.

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಮೆಸ್ಕಾಂ, ಕಂದಾಯ, ಪಿಡಬ್ಲ್ಯೂಡಿ ,ಪೋಲೀಸ್, ಶಿಕ್ಷಣ ಇಲಾಖೆ ಅಧಿಕಾರಿಗಳು ಬರಬೇಕು. ಇಲ್ಲದಿದ್ದರೆ ಗ್ರಾಮಸಭೆ ಬೇಡವೆಂದು ಗ್ರಾಮಸ್ಥರು ಪಟ್ಟು ಹಿಡಿದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ ಗ್ರಾಮಸಭೆಯನ್ನು ರದ್ದುಗೊಳಿಸಿ, ಸೆಪ್ಟೆಂಬರ್ 18 ಕ್ಕೆ ಗ್ರಾಮಸಭೆಗೆ ಮಾಡುವುದೆಂದು ಹೇಳಿದರು.

ಈ ಸಂದರ್ಭದಲ್ಲಿ ಮಾರ್ಗದರ್ಶಿ ಅಧಿಕಾರಿಯಾದ ಸಾಮಾಜಿಕ ವಲಯ ಅರಣ್ಯಧಿಕಾರಿ ಅಶೋಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಮ್ಮಿಯಾಜ್, ಉಪಾಧ್ಯಕ್ಷ ಗಣೇಶ್ ಕೆ, ಸದಸ್ಯರಾದ ಆನಂದಿ, ವೇದಾವತಿ, ಲಕ್ಷ್ಮೀಶ , ವನಿತಾ ಜಿ, ವಿಜಯಲಕ್ಷ್ಮಿ , ಸದಾನಂದ ಮೂಲ್ಯ, ನಿತೇಶ್, ಮಹಮ್ಮದ್ ಮುಸ್ತಾಫ, ಶಮೀಮುಲ್ಲಾ ಕೆ, ಮೈಮುನ್ನಿಸಾ, ನಿತಿನ್ ಕುಮಾರ್, ಪ್ರದೀಪ್ ಶೆಟ್ಟಿ, ಆಶಾಲತಾ, ಕೆ.ಮಂಜುನಾಥ, ರಚನಾ, ಹೇಮಂತ, ಉಷಾ, ಶಾಲಿನಿ, ಸುಮಂಗಲಾ, ಸಿಲ್ವೆಸ್ಟಾರ್ ಫೆಲಿಕ್ಸ್ ಮೋನಿಸ್, ಎಮ್. ರಿಯಾಜ್, ಅಮೀನಾ ಹಾಗೂ ಪಂಚಾಯತ್ ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *