ಬೆಂಗಳೂರು:(ಆ.28) ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎ1 ಆರೋಪಿ ಪವಿತ್ರ ಗೌಡ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್. 9ರವರೆಗೆ ಕೋರ್ಟ್ ವಿಸ್ತರಿಸಿ ಆದೇಶಿಸಿದೆ.


ಇಂದು ಪ್ರಕರಣ ಸಂಬಂಧ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾಗೌಡ ಅವರ ನ್ಯಾಯಾಂಗ ಬಂಧನ ಕುರಿತಂತೆ ಅರ್ಜಿಯನ್ನು ವಿಚಾರಣೆ ನಡೆಸಿತು.

ಜಾಮೀನು ಅರ್ಜಿಯ ವಿಚಾರಣೆಯ ನಡುವೆಯೂ ಕೋರ್ಟ್ ಸೆಪ್ಟೆಂಬರ್.9 ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶಿಸಿದೆ.
ನಿನ್ನೆ ಕೋರ್ಟ್ ನಲ್ಲಿ ಪವಿತ್ರ ಗೌಡ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು.

ಈ ವೇಳೆ ಮಹಿಳೆ ಹಾಗೂ ಅನಾರೋಗ್ಯದ ಕಾರಣದಿಂದಾಗಿ ಸಿಆರ್ ಪಿಸಿ ಸೆಕ್ಷನ್ ನಡಿ 437ನಂತೆ ಆರೋಪಿ ಪವಿತ್ರಾಗೌಡಗೆ ಜಾಮೀನು ನೀಡುವಂತೆ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದಿಸಿದ್ದರು.


ಈ ಕುರಿತಾದಂತಹ ವಿಚಾರಣೆ ಇಂದಿಗೆ ಮುಂದೂಡಲಾಗಿತ್ತು. ಆ ವಿಚಾರಣೆ ಬಾಕಿ ಬೆನ್ನಲ್ಲೇ, ಕೋರ್ಟ್ ಸೆಪ್ಟೆಂಬರ್.9ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶಿಸಿದೆ.

