Rahul Gandhi:(ಆ.28) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ 50ದಾಟಿದರೂ ಅವರು ಯುವ ನಾಯಕರಾಗೇ ಉಳಿದಿದ್ದಾರೆ. ಅಲ್ಲದೆ ಮದುವೆ ಆಗದೆಯೂ ಒಂಟಿಯಾಗೇ ಇದ್ದಾರೆ.
ಇದನ್ನೂ ಓದಿ: 🛑🚀Viral video : ವಧುವನ್ನ ರಾಕೆಟ್ ನಲ್ಲಿ ಹಾರಿಸ್ಕೊಂಡು ಹೋದ ವರ
ಅವರ ಮದುವೆ ಕುರಿತು ಆಗಾಗ ಚರ್ಚೆಗಳು, ಪ್ರಶ್ನೆಗಳು ಏಳುವುದುಂಟು. ಅಂತೆಯೇ ಇದೀಗ ಪ್ರಶ್ನೆಯೊಂದು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅದೂ ಕೂಡ ಒಬ್ಬಳು ವಿದ್ಯಾರ್ಥಿನಿ ಈ ಪ್ರಶ್ನೆಯನ್ನು ಎತ್ತಿದ್ದಾಳೆ.
ಕಾಶ್ಮೀರದ ಶ್ರೀನಗರದಲ್ಲಿ ವಿದ್ಯಾರ್ಥಿನಿಯರ ಜತೆ ರಾಹುಲ್ ಸಂವಾದ ನಡೆಸಿದ್ದು, ಈ ವೇಳೆ ದಾಂಪತ್ಯ ಜೀವನದ ಬಗ್ಗೆ ನಿಮ್ಮ ಅಭಿಪ್ರಾಯ ಏನು? ನೀವು ಯಾವಾಗ ಮದುವೆ ಆಗ್ತೀರಾ ಎಂದು ಯುವತಿಯೊಬ್ಬಳು ರಾಹುಲ್ ಗೆ ನೇರವಾಗಿ ಪ್ರಶ್ನೆ ಕೇಳಿದ್ದಾಳೆ. ಈ ಪ್ರಶ್ನೆಗೆ ಸದ್ಯ ರಾಹುಲ್ ಕೊಟ್ಟ ಉತ್ತರ ಇದೀಗ ವೈರಲ್ ಆಗಿದೆ.
ಹುಡುಗಿ ಪ್ರಶ್ನೆಯನ್ನು ಹರಿಬಿಡುತ್ತಿದ್ದಂತೆ ರಾಹುಲ್ ‘ಕಳೆದ 20-30 ವರ್ಷಗಳಿಂದ ನನ್ನ ಮೇಲೆ ಮದುವೆಯಾಗಲು ಒತ್ತಡ ಹೇರಲಾಗುತ್ತಿದೆ. ನಾನು ಆ ಬಗ್ಗೆ ಯೋಚಿಸುತ್ತಿಲ್ಲವಾದರೂ, ಮದುವೆಯಾದರೆ…’ ಎಂದು ಮಾತನ್ನು ಅರ್ಧಕ್ಕೇ ತುಂಡರಿಸಿದರು. ಅಲ್ಲದೆ ನಿಮ್ಮ ಮದುವೆಗೆ ನಮಗೂ ಆಹ್ವಾನಿಸಿ’ ಎಂಬ ಹುಡುಗಿಯರ ಮನವಿಗೆ ರಾಹುಲ್ ನಗುತ್ತ, ‘ಖಂಡಿತ’ ಎಂದರು. ಈ ವಿಡಿಯೋವನ್ನು ಅವರು ತಮ್ಮ ಯೂಟ್ಯೂಬ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.