Tue. Apr 8th, 2025

Udupi: ಲಾಂಗ್ ಜಂಪ್ ಮಾಡಿದ ಪ್ರೇತಾತ್ಮಗಳು..! – ರಸ್ತೆಯ ಹೊಂಡ ಅಳತೆಗೈದ ಯಮಧರ್ಮ-ಚಿತ್ರಗುಪ್ತ!!

ಉಡುಪಿ:(ಆ.28) ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಡುಪಿಯಲ್ಲಿ ವಿವಿಧ ವೇಷ ಭೂಷಣಗಳ ತೊಟ್ಟು ವಿನೋದಾವಳಿ ಪ್ರದರ್ಶಿಸುತ್ತಿದ್ದಾರೆ.

ಇದನ್ನೂ ಓದಿ: 🛑ಶಿವಮೊಗ್ಗ: ಸೇತುವೆಯಿಂದ ಕೆಳಗೆ ಬಿದ್ದ ಕಾರು

ವೇಷಧಾರಿಗಳು ಹಲವು ದಿನಗಳಿಂದ ಸಾರ್ವಜನಿಕರಿಗೆ ಸಂಚರಿಸಲು ಸಮಸ್ಯೆಯಾಗಿರುವ ರಸ್ತೆಗಳ ಗುಂಡಿಗಳ ದುರಸ್ತಿಗಾಗಿ ಆಗ್ರಹಿಸಿ ವಿಶಿಷ್ಟವಾಗಿ ಪ್ರತಿಭಟಿಸಿ ಜನರ ಗಮನ ಸೆಳೆದಿದ್ದಾರೆ.

ಈ ರಸ್ತೆಯಲ್ಲಿ ಸಂಚರಿಸಿದರೆ ಅಪಾಯ ಖಚಿತ.. ಯಮಧರ್ಮನೂ ಅಳತೆ ಮಾಡುವಷ್ಟು ಗುಂಡಿಗಳು ಬಿದ್ದಿವೆ..

ಇದು ಉಡುಪಿ-ಮಲ್ಪೆ ಸಂಪರ್ಕಿಸುವ ರಸ್ತೆಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಸಂದರ್ಭದಲ್ಲಿ ವೇಷಧಾರಿಗಳು ಯಮಧರ್ಮ, ಚಿತ್ರಗುಪ್ತ ಹಾಗೂ ಪ್ರೇತಾತ್ಮದ ವೇಷತೊಟ್ಟು ರಸ್ತೆಯಲ್ಲಿ ಲಾಂಗ್‌ಜಂಪ್‌ ಮಾಡುವ ಮೂಲಕ

ಅಪಾಯ ಕಟ್ಟಿಟ್ಟಬುತ್ತಿ ಎಂದು ಸಾರುವ ಅಣಕು ಪ್ರದರ್ಶಿಸಿ ವಿಶಿಷ್ಟವಾಗಿ ಪ್ರತಿಭಟಿಸಿದ ದೃಶ್ಯ ಜನರ ಗಮನಸೆಳೆಯಿತು. ಇದಕ್ಕೆ ಸಾರ್ವಜನಿಕರು ಕೂಡ ಬೆಂಬಲ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *