ಉಜಿರೆ (ಆ.28): ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ, ಸಮೂಹ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಮತ್ತು ಚರ್ಚ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ ಇವರ ಸಹಯೋಗದಲ್ಲಿ ,
ಇದನ್ನೂ ಓದಿ: 🛑ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್
ದೈಹಿಕ ಶಿಕ್ಷಣ ಪರಿವೀಕ್ಷಣಾ ಅಧಿಕಾರಿ ಸುಜಯಾ ಇವರ ಉಪಸ್ಥಿತಿಯಲ್ಲಿ, ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ
ಉಜಿರೆ ಶ್ರೀ ಧ. ಮಂ. ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆ ವಿದ್ಯಾರ್ಥಿಗಳು ಪ್ರಥಮ ಸ್ಥಾನದೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಲ್ಲದೆ, 8ನೇ ತರಗತಿಯ ಆಯ್ಕೆ ವಿಭಾಗದಲ್ಲಿ ನಿಹಾಲ್ ಇವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವರು. ಆಕಾಶ್ 7ನೇ ತರಗತಿ ಉತ್ತಮ ಗೋಲ್ಕೀಪರ್ ಆಗಿ ಹಾಗೂ ಕವಿನ್ 6ನೇ ತರಗತಿ ಉತ್ತಮ ಆಟಗಾರನೆನ್ನುವ ಪ್ರಶಸ್ತಿಯೊಂದಿಗೆ ಶಾಲೆಗೆ ಕೀರ್ತಿಯನ್ನು ತಂದಿರುವರು.
ಇವರಿಗೆ ದೈಹಿಕ ಶಿಕ್ಷಕರಾದ ಸುಭಾಷ್ ರವರು ಮಾರ್ಗದರ್ಶನ ನೀಡಿರುವರು.
ವಿಜೇತರನ್ನು ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾಲಕ್ಷ್ಮಿ ನಾಯಕ್ ಮತ್ತು ಶಿಕ್ಷಕವೃಂದದವರು ಅಭಿನಂದಿಸಿದ್ದಾರೆ.