Sat. Dec 14th, 2024

Viral video : ವಧುವನ್ನ ರಾಕೆಟ್‌ ನಲ್ಲಿ ಹಾರಿಸ್ಕೊಂಡು ಹೋದ ವರ

ಮದುವೆಗೆ ಸಂಬಂಧಿಸಿದ ಸಾಕಷ್ಟು ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುತ್ತವೆ. ಇದೀಗ ವಧುವಿನ ಬೀಳ್ಕೊಡುವಿಕೆಯ ವೀಡಿಯೋವೊಂದು ವೈರಲ್ ಆಗಿದ್ದು, ಈ ವೀಡಿಯೋ ಕಂಡು ನಕ್ಕು ನಕ್ಕು ಸುಸ್ತಾಗುವುದಂತೂ ಖಂಡಿತಾ.

ಇದನ್ನೂ ಓದಿ: 🚳ಸುಬ್ರಹ್ಮಣ್ಯ: ಪಾರ್ಕಿಂಗ್ ನಿಯಮ ಉಲ್ಲಂಘಿಸಿದರೆ ದಂಡ ಅಸ್ತ್ರ ಜಾರಿ

ಸಾಮಾನ್ಯವಾಗಿ ವಧುವನ್ನು ತನ್ನ ತವರಿನಿಂದ ಬೀಳ್ಕೊಡುವಾಗ ಎಲ್ಲರೂ ಭಾವುಕರಾಗುವುದು ಸಹಜ. ಆದರೆ ಈ ವೀಡಿಯೋ ನೋಡಿದ್ರೆ ನಗು ಬರುವುದಂತೂ ಖಂಡಿತಾ.


ವೈರಲ್ ಆಗಿರುವ ವೀಡಿಯೋದಲ್ಲಿ ವಧು- ವರರಿಬ್ಬರು ಕಾಗದದಲ್ಲಿ ಮಾಡಿರುವ ರಾಕೆಟ್‌ನಲ್ಲಿ ಕುಳಿತಿರುವುದನ್ನು ಕಾಣಬಹುದು. ಮತ್ತೊಬ್ಬ ವ್ಯಕ್ತಿ ಬಂದು ರಾಕೆಟ್ ಹಿಂಭಾಗಕ್ಕೆ ಬೆಂಕಿ ಹಚ್ಚಿದ್ದಾರೆ. ಬಳಿಕ ಮೂಲಕ ವಧು ವರರು ಹಾರಿ ಹೋಗುವಂತೆ ಎಡಿಟಿಂಗ್ ಮಾಡಲಾಗಿದೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.


ಟ್ವಿಟರ್ ಖಾತೆಯಲ್ಲಿ ವೀಡಿಯೋ ಹಂಚಿಕೊಳ್ಳಲಾಗಿದ್ದು, ವೀಡಿಯೋ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ. ಆಗಸ್ಟ್ 24ರಂದು ಹಂಚಿಕೊಂಡಿರುವ ವೀಡಿಯೋ ಕೇವಲ 4 ದಿನಗಳಲ್ಲಿ 9ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಸಾಕಷ್ಟು ನೆಟ್ಟಿಗರು “ಏನ್ ಎಡಿಟಿಂಗ್ ಗುರು ಇದು” ಎಂದು ಕಾಮೆಂಟ್‌ನಲ್ಲಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು