Thu. Dec 26th, 2024

Puttur : ಮನೆಯಲ್ಲಿ ವೇಶ್ಯಾವಾಟಿಕೆ ಆರೋಪ- ಪೊಲೀಸ್ ದಾಳಿ..!


ಪುತ್ತೂರು: (ಆ.29)ಬನ್ನೂರು ಕರ್ಮಲದಲ್ಲಿರುವ ಪೊಲೀಸ್ ವಸತಿ ಗೃಹದ ಬಳಿಯೇ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸರು ಬಂದು ಪರಿಶೀಲನೆ ನಡೆಸಿ ಮನೆಯಲ್ಲಿದ್ದ ಇಬ್ಬರು ಮಹಿಳೆಯರನ್ನು ಕರೆದೊಯ್ದ ಘಟನೆ ಆ.29 ರ ಸಂಜೆ ನಡೆದಿದೆ.


ಬನ್ನೂರು ಕರ್ಮಲ ಪೊಲೀಸ್ ವಸತಿಗೃಹ ರಸ್ತೆಯ ಬಲಮುರಿ ವಿದ್ಯಾಗಣಪತಿ ದೇವಸ್ಥಾನದ ಬಳಿ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಸಾರ್ವಜನಿಕ‌ ದೂರಿನ ಹಿನ್ನಲೆಯಲ್ಲಿ ಪೊಲೀಸರು ಆಗಮಿಸಿದರು.‌

ಮನೆಯಲ್ಲಿ ಪೊಲೀಸರು ಪರಿಶೀಲನೆ ವೇಳೆ ಓರ್ವ ಮೈಸೂರು ಮೂಲದ ಯುವತಿ ಮತ್ತು ಮಹಿಳೆ ಇದ್ದು ಅವರನ್ನು ಪೊಲೀಸರು ಆಟೋ ರಿಕ್ಷಾವೊಂದರಲ್ಲಿ ಠಾಣೆಗೆ ಕರೆದೊಯ್ದರು. ಮೈಸೂರು ಮೂಲದ ಯುವತಿ ತನ್ನ ಸ್ನೇಹಿತೆ ಮನೆಗೆ ಬಂದಿರುವುದಾಗಿ ತಿಳಿಸಿರುವುದಾಗಿ ತಿಳಿದು ಬಂದಿದೆ.ಕಂಪೌಂಡ್ ಹಾರಿದ್ದರು !


ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಪೊಲೀಸರು ಬರುವಾಗ ತಡವಾಗಿದ್ದಲ್ಲದೆ ಪೊಲೀಸರು ಬರುವ ಮಾಹಿತಿ ಅರಿತು ಮನೆಯಲ್ಲಿದ್ದ ಯುವಕರು ಕಂಪೌಂಡ್ ಹಾರಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.ಇವಾಗ ಪುತ್ತೂರಿನ ಮಹಿಳಾ ಠಾಣೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *