Tue. Apr 8th, 2025

Puttur: ಬಿಜೆಪಿ ಕಚೇರಿಯಲ್ಲಿ ರಹಸ್ಯ ಸಭೆ

ಪುತ್ತೂರು :(ಆ.29) ಬಿಜೆಪಿ ಕಚೇರಿಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಗುರುವಾರ(ಇಂದು) ರಹಸ್ಯ ಸಭೆ ನಡೆದಿದ್ದು, ಕುತೂಹಲ ಮೂಡಿಸಿದೆ.

ಇದನ್ನೂ ಓದಿ: 💥ಬೆಳಾಲು: ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಭಟ್ ಮರ್ಡರ್‌ ಕೇಸ್‌


ಬಿಜೆಪಿ ಪಾಳಯದಲ್ಲಿ ಇತ್ತೀಚಿಗೆ ಆದ ಬೆಳವಣಿಗೆಗಳ ಬೆನ್ನಲ್ಲೇ ಸಂಸದ ಚೌಟ ಅವರು ದಿಢೀ‌ರ್ ಪಕ್ಷದ ಕಚೇರಿಗೆ ಆಗಮಿಸಿದ್ದರು. ಈ ಬಗ್ಗೆ ಬಿಜೆಪಿಯ ಮಾಧ್ಯಮ ಗ್ರೂಪ್ ನಲ್ಲಿ ಪತ್ರಕರ್ತರಿಗೆ ಆಹ್ವಾನ ನೀಡಲಾಗಿತ್ತು. ಹೀಗಾಗಿ ಪತ್ರಕರ್ತರು ಆಗಮಿಸಿದ್ದರು.

ಸಭೆ ಆರಂಭಗೊಂಡ ಬೆನ್ನಲ್ಲೇ ಸಂಸದ ಬ್ರಿಜೇಶ್ ಚೌಟ ಅವರು ಪತ್ರಕರ್ತರಲ್ಲಿ ಪಕ್ಷದ ಕುರಿತು ಪರ್ಸನಲ್ ವಿಚಾರ ಚರ್ಚಿಸಲಿದೆ ಎಂದರು. ಪತ್ರಕರ್ತರು ಹೊರ ಹೋದ ಬಳಿಕ ಸಂಸದ ಚೌಟ ಭಾಷಣ ಆರಂಭಿಸಿದರು.

ಸಭೆಯಲ್ಲಿ ಬಿಜೆಪಿ ಮುಖಂಡರು ಉಪಸ್ಥಿತರಿದ್ದು, ರಹಸ್ಯ ಸಭೆ ಕುತೂಹಲ ಮೂಡಿಸಿದೆ.


ಗ್ರಾಮಾಂತರ ಮಂಡಲ ಮತ್ತು ನಗರ ಮಂಡಲದ ನೂತನ ಸಮಿತಿಯ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆದಿತ್ತು.

Leave a Reply

Your email address will not be published. Required fields are marked *