Wed. Nov 20th, 2024

Uppinangadi: ಅವಾಚ್ಯವಾಗಿ ಬೈದು ಹಲ್ಲೆ ಆರೋಪ – ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲು

ಉಪ್ಪಿನಂಗಡಿ :(ಆ.29) ವ್ಯಕ್ತಿಯೋರ್ವ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಣಿಯೂರು ನಿವಾಸಿ ಸಿದ್ದಿಕ್ ನೀಡಿರುವ ದೂರಿನ ಮೇರೆಗೆ ಶರತ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 🔶ಕೊಯ್ಯೂರು : ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷರಿಗೆ ಕೊಯ್ಯೂರಿನ ಶ್ರೀ ಕೃಷ್ಣ ಭಜನಾ ಮಂಡಳಿಯಲ್ಲಿ ಅಭಿನಂದನೆ

ಆ.27 ರಂದು ರಾತ್ರಿ ಸಿದ್ದಿಕ್ ಗೂಡ್ಸ್ ವಾಹನವನ್ನು ಕಲ್ಲೇರಿಯಿಂದ ಮನೆಗೆ ಚಲಾಯಿಸಿಕೊಂಡು ಹೋಗುತ್ತಾ, ಬೆಳ್ತಂಗಡಿ ತಾಲೂಕು, ಕಣಿಯೂರು ಗ್ರಾಮದ, ಪದ್ಮುಂಜ ಎಂಬಲ್ಲಿ ತಲುಪಿದಾಗ, ಶರತ್ ನಿಂತುಕೊಂಡು ಫೋನ್ ನಲ್ಲಿ ಮಾತನಾಡುತ್ತಿದ್ದು,

ಆ ವೇಳೆ ಎದುರಿನಿಂದ ಬೇರೆ ವಾಹನ ಬಂದುದರಿಂದ ಸಿದ್ದಿಕ್ ವಾಹನವನ್ನು ಶರತ್ ಸಮೀಪದಿಂದ ಚಲಾಯಿಸಿದ್ದು, ಈ ವೇಳೆ ಶರತ್
ಅವ್ಯಾಚವಾಗಿ ಬೈದಿದ್ದು, ಬಳಿಕ ಸಿದ್ದಿಕ್ ವಾಹನ ಚಲಾಯಿಸುತ್ತಾ ಮುಂದೆ ಹೋದಾಗ,

ಅವರ ಹಿಂದಿನಿಂದ ಮೋಟಾರು ಬೈಕಿನಲ್ಲಿ ಹಿಂಬಾಲಿಸಿ ಬಂದ ಶರತ್ ಸಿದ್ದಿಕ್ ರನ್ನು ತಡೆದು ಅವ್ಯಾಚವಾಗಿ ಬೈದು ಹಲ್ಲೆ ನಡೆಸಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 100/2024 ಕಲಂ: 126(2), 115(2), 352,351(2) BNS 2023 ರಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *