Thu. Apr 17th, 2025

Menstrual Cramp: ಮುಟ್ಟಿನ ನೋವು ನಿವಾರಿಸಲು ಮಾತ್ರೆ ತೆಗೆದುಕೊಂಡ ಯುವತಿ – ಅತಿಯಾದ ಡೋಸೇಜ್ ನಿಂದ ಯುವತಿ ಸಾವು

ತಮಿಳುನಾಡು :(ಆ.30) ತಮಿಳುನಾಡಿನಲ್ಲಿ 18 ವರ್ಷದ ಯುವತಿಯೊಬ್ಬಳು ಮುಟ್ಟಿನ ಸೆಳೆತವನ್ನು ನಿವಾರಿಸಲು ಮಿತಿಮೀರಿದ ಔಷಧ ಸೇವಿಸಿ ಮೃತಪಟ್ಟಿರುವ ಘಟನೆ ನಡೆದಿದೆ.

ಆ. 21ರಂದು ವಿಪರೀತ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದ ತಿರುಚ್ಚಿಯ ಮುಸಿರಿ ತಾಲೂಕು ಸಮೀಪ ಗ್ರಾಮದ 18 ವರ್ಷದ ಬಾಲಕಿ ಮಾತ್ರೆ ಸೇವಿಸಿದ ಬಳಿಕ ಸಾವನ್ನಪ್ಪಿದ್ದಾಳೆ ಎಂದು ಬಂದಿದೆ.

ಇದನ್ನೂ ಓದಿ: 💥Puttur: ಪುತ್ತಿಲ ವಿರುದ್ಧ ಮಾನಹಾನಿ ತೇಜೋವಧೆ ವರದಿ ಪ್ರಕಟಿಸದಂತೆ ಹೈಕೋರ್ಟ್ ತಡೆಯಾಜ್ಞೆ.!

ತಿರುಚ್ಚಿಯ ಪುಲಿವಲಂ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಟೈಮ್ಸ್​ ಆಫ್ ಇಂಡಿಯಾ ವರದಿ ಪ್ರಕಾರ, ಆ ಯುವತಿಗೆ ಪ್ರತಿ ತಿಂಗಳು ತೀವ್ರವಾದ ಮುಟ್ಟಿನ ಸೆಳೆತ ಉಂಟಾಗುತ್ತಿತ್ತು.

ತೀವ್ರವಾದ ಹೊಟ್ಟೆ ನೋವನ್ನು ನಿವಾರಿಸಲು ಆಕೆ ಅನೇಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಳು. ಈ ಬಾರಿಯೂ ಅದೇ ರೀತಿ ಔಷಧಿಯನ್ನು ಸೇವಿಸಿದ ನಂತರ, ಅವಳು ವಾಂತಿ ಮಾಡಲು ಪ್ರಾರಂಭಿಸಿದಳು.

ತಕ್ಷಣ ಆಕೆಯ ಪೋಷಕರು ಅವಳನ್ನುಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (PHC) ಕರೆದೊಯ್ದರು. ಚಿಕಿತ್ಸೆಯ ನಂತರ, ಅವಳು ಡಿಸ್ಚಾರ್ಜ್ ಆಗಿದ್ದಳು. ಆದರೆ ಮನೆಗೆ ಹಿಂದಿರುಗಿದ ನಂತರ ಪ್ರಜ್ಞೆ ಕಳೆದುಕೊಂಡಳು.

ನಂತರ ಆಕೆಯ ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಮಹಾತ್ಮ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಗೆ (MGMGH) ದಾಖಲಿಸಿದ್ದರು. ಆದರೆ, ಮಿತಿಮೀರಿದ ಔಷಧ ಸೇವನೆಗೆ ಸಂಬಂಧಿಸಿದ ತೊಡಕುಗಳಿಂದ ಅವಳು ಸಾವನ್ನಪ್ಪಿದಳು ಎಂದು ತಿಳಿದು ಬಂದಿದೆ.

ಆ ಯುವತಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಔಷಧಿಗಳ ಅತಿಯಾದ ಡೋಸೇಜ್ ಮಾರಣಾಂತಿಕ ಆರೋಗ್ಯ ತೊಡಕುಗಳಿಗೆ ಕಾರಣವೆಂದು ಉಲ್ಲೇಖಿಸಲಾಗಿದೆ.

Leave a Reply

Your email address will not be published. Required fields are marked *