ಉಜಿರೆ (ಆ.30): ಇಲ್ಲಿನ ಶ್ರೀ ಧ. ಮಂ. ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆ ಉಜಿರೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಣೆ ಕಾರ್ಯಕ್ರಮದಲ್ಲಿ
ಮುಖ್ಯಅತಿಥಿಗಳಾಗಿ ಆಗಮಿಸಿದ ಏಕಲವ್ಯ ಪ್ರಶಸ್ತಿ ಪುರಸ್ಕೃತ ನಿತಿನ್ ಪೂಜಾರಿಯವರು ವಿದ್ಯಾರ್ಥಿಗಳಿಗೆ, ದೇಶದ ರಾಷ್ಟ್ರೀಯ ಕ್ರೀಡೆ ‘ಹಾಕಿ’ಯಲ್ಲಿ ಸಾಧನೆ ಮಾಡಿದ, ‘ಹಾಕಿ ಮಾಂತ್ರಿಕ’ ಖ್ಯಾತಿಯ ಮೇಜರ್ ಧ್ಯಾನ್ ಚಂದ್ ರವರ ಜೀವನ ಚರಿತ್ರೆಯ ದಂತ ಕಥೆಯನ್ನು ಹೇಳುತ್ತಾ, ಕ್ರೀಡೆಯನ್ನು ಮೈಗೂಡಿಸಿಕೊಳ್ಳಬೇಕಾದ ಸೂತ್ರಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯನಿಯಾದ ವಿದ್ಯಾಲಕ್ಷ್ಮಿ ನಾಯಕ್ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕ ಸುಭಾಷ್ ಹಾಗೂ ಶಿಕ್ಷಕಿ ನಿರೀಕ್ಷಾ ಡಿ.ಪಿ ಕಾರ್ಯಕ್ರಮವನ್ನು ಸಂಯೋಜಿಸಿದರು.
ವಿದ್ಯಾರ್ಥಿಗಳಾದ ಕವನ ಅತಿಥಿ ಪರಿಚಯ ನೀಡಿ ದೀಪಿಕ ಸ್ವಾಗತಿಸಿ, ಸುಮಿತ್ರ ವಂದಿಸಿ, ಮಧುಶ್ರೀ ನಿರೂಪಿಸಿದರು.