Wed. Nov 20th, 2024

Daily Horoscope – ಈ ರಾಶಿಯವರಿಗೆ ಬಹಳ ಆಪ್ತರಾದವರು ದೂರವಾಗಬಹುದು!!!

Daily Horoscope - ಇಂದು ಈ ರಾಶಿಯವರಿಗೆ ಆತುರವೇ ಅಪಾಯ ತಂದೊಡ್ಡಬಹುದು

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ವರಿಯಾನ್, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:43 ಗಂಟೆ, ರಾಹು ಕಾಲ ಬೆಳಿಗ್ಗೆ 09:27 ರಿಂದ 10:59, ಯಮಘಂಡ ಕಾಲ ಮಧ್ಯಾಹ್ನ 02:06 ರಿಂದ 03:38ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:22 ರಿಂದ 07:54ರ ವರೆಗೆ.

ಮೇಷ ರಾಶಿ: ಇಂದು ನಿಮ್ಮನ್ನು ನೀವು ಪ್ರಶಂಸಿಸಿಕೊಳ್ಳುವುದು ಇತರರಿಗೆ ಇಷ್ಟವಾಗದು. ಉಪಯೋಗಕ್ಕೆ ಬಾರದ ಎಲ್ಲ ಸಂದರ್ಭದಲ್ಲಿ ನಿಮ್ಮ ಪರಿಸ್ಥಿತಿಯು ಒಂದೇ ರೀತಿಯಲ್ಲಿ ಇರದು. ಸಂಗಾತಿಯ ಮಾತುಗಳು ನಿಮ್ಮನ್ನು ಚುಚ್ಚಿದಂತೆ ಆಗುವುದು.

ವೃಷಭ ರಾಶಿ: ಒತ್ತಡದಿಂದ ಮಾತ್ರ ಕಾರ್ಯವು ಸಾಧ್ಯ ಎಂಬ ಭ್ರಮೆಯಲ್ಲಿ ಇರುವಿರಿ. ಇಂದು ಕಳೆದುಕೊಂಡ ಸಂಪತ್ತು ನಿಮಗೆ ಸಿಗದು. ನಿಮ್ಮ‌ ಸಂತೋಷಕ್ಕೆ ಕಾರಣದ ಅವಶ್ಯಕತೆ ಇಲ್ಲ. ಹಣದ ಹೂಡಿಕೆಯನ್ನು ಸರಿಯಾದ ಕಡೆ ಸರಿಯಾ ಮಾಹಿತಿಯನ್ನು ಪಡೆದು ಮಾಡಿ.

ಮಿಥುನ ರಾಶಿ: ರಾಜಕೀಯದಲ್ಲಿ ಹೊಸದಾಗಿ ಪ್ರವೇಶವನ್ನು ಪಡೆಯುವವರಿಗೆ ಮೇಲಧಿಕಾರಿಗಳು ತೋರಿಸುವ ಪಕ್ಷಪಾತದ ಧೋರಣೆಯು ನೀವು ಸಹಿಸಲಾರಿರಿ. ಹಿರಿಯರಿಂದ ನಿಮಗೆ ಪ್ರಶಂಸೆ ಸಿಗಲಿದೆ‌. ನೀವಾಡುವ ಸತ್ಯದ ಮಾತಿನಿಂದ ಸಹೋದ್ಯೋಗಿಯ ಕೆಲಸವು ಹೋಗಬಹುದು.

ಕರ್ಕಾಟಕ ರಾಶಿ: ಉದ್ಯಮದ ಕಾರಣಕ್ಕೆ ಮಾಡಿದ ಪ್ರಯಾಣವು ಸಫಲವಾಗುವುದು. ಎಲ್ಲ ಸಂದರ್ಭವನ್ನೂ ಆರ್ಥಿಕ ದೃಷ್ಟಿಯಿಂದ ಅಳೆಯುವುದು ಕಷ್ಟವೇ ಆದೀತು. ಸ್ವಾವಲಂಬಿಯಾಗಲು ನಿಮಗೆ ಇಷ್ಟವಿದ್ದರೂ ಅದನ್ನು ಮಾಡಲಾಗದು.

ಸಿಂಹ ರಾಶಿ: ಇನ್ನೊಬ್ಬರಿಗಾಗಿ ನೀವು ನಿಮ್ಮ ತುರ್ತಿನ ಕಾರ್ಯವನ್ನು ಬಿಡಬೇಕಾದೀತು. ಇಂದು ಮನೆಯ ನಿರ್ಮಾಣದ ಕಾರ್ಯಕ್ಕೆ ನಿಮ್ಮವರಿಂದ ತೊಂದರೆ ಬರಬಹುದು. ಧಾರ್ಮಿಕ ಕಾರ್ಯಕ್ರಮಗಳನ್ನು ಇಂದು ಅನಿವಾರ್ಯವಾಗಿ ಮಾಡುವಿರಿ.

ಕನ್ಯಾ ರಾಶಿ: ಯಾರೋ ಮಾಡಿದ ಸಾಲವನ್ನು ನೀವು ತೀರಿಸಬೇಕಾಗಬಹುದು. ಇಂದು ನಿಮಗೆ ಗೊಂದಲಗಳಿಂದ ವೃತ್ತಿಯನ್ನು ನಿರ್ಧರಿಸಲು ಕಷ್ಟವಾದೀತು. ಹೊಸ ಕೆಲಸಗಳನ್ನು ಹುಡುಕಲು ಪ್ರಯತ್ನಿಸಿ‌. ಸಂಗಾತಿಯ ವಿಚಾರವಾಗಿ ನೀವು ಹೆಚ್ಚು ಚಿಂತೆಯಲ್ಲಿ ಇರುವಿರಿ.

ತುಲಾ ರಾಶಿ: ಬಂಧುಗಳು ಹಳೆಯ ದ್ವೇಷವನ್ನು ತೀರಿಸಿಕೊಳ್ಳುವ ಸಾಧ್ಯತೆ ಇದೆ. ಇಂದು ಮಕ್ಕಳ ವಿಚಾರದಲ್ಲಿ ವಾಗ್ವಾದವು ದಾಂಪತ್ಯದಲ್ಲಿ ನಡೆದು ಇಬ್ಬರೂ ವೈಮನಸ್ಸಿನಿಂದ ಇರಬೇಕಾದೀತು. ಆಗಿಹೋದ ವಿಷಯವನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವಿರಿ.

ವೃಶ್ಚಿಕ ರಾಶಿ: ಇಂದು ನೀವು ಯಾರಿಗೂ ನೋವಾಗದಂತೆ ವರ್ತಿಸುವ ಯೋಚನೆ‌ ಮಾಡುವಿರಿ. ನಿಮ್ಮ ಎಲ್ಲ ಆಸೆಗಳೂ ಪೂರ್ಣಗೊಳ್ಳದು. ಜೀವನದಲ್ಲಿ ಉತ್ತಮವಾದ ಗುರಿಯನ್ನು ಇಟ್ಟುಕೊಳ್ಳಲು ಯಾರಾದರೂ ಸಹಾಯ ಮಾಡುವರು.

ಧನು ರಾಶಿ: ಇಂದು ನಿಮಗೆ ಹಣದ ಅಗತ್ಯತೆಗಳು ತುಂಬಾ ಎದುರಾಗಬಹುದು. ತಪ್ಪನ್ನು ನೀವೇ ಒಪ್ಪಿಕೊಂಡರೆ ದಂಡನೆಯಲ್ಲಿಯೂ ವಿನಾಯಿತಿ ಸಿಗಬಹುದು. ನಿಮ್ಮ ಹಣವೂ ಖಾಲಿಯಾಗಿ ಸಂಗಾತಿಯಿಂದ ಹಣವನ್ನು ಪಡೆಯುವಿರಿ.

ಮಕರ ರಾಶಿ: ಇಂದು ನಿಮ್ಮ ದುಡಿಮೆಯನ್ನು ಸರಿಯಾದ ಕಡೆ ವಿನಿಯೋಗಿಸುವಿರಿ. ಏನನ್ನಾದರೂ ಕೇಳಿ ಬಂದವರಿಗೆ ಇಲ್ಲವೆನದೇ ನೀಡಿ. ಅವರ ಸಂತೋಷದಲ್ಲಿ ಭಾಗಿಯಾಗುವಿರಿ. ಉಪಕಾರ ಮಾಡುವುದು ನಿಮಗೆ ಖುಷಿ ಕೊಡುವುದು.

ಕುಂಭ ರಾಶಿ: ಬರುವ ಕಷ್ಟಗಳು ನಿಮ್ಮ ಕರ್ಮದ್ದು ಎನ್ನುವ ವಿಚಾರ ನೆನಪಿರಲಿ. ವ್ಯವಹಾರದ ದೃಷ್ಟಿಯಿಂದ ನಿಮಗೆ ಸೋಲಾಗುವುದು. ಅದನ್ನು ಸಹಿಸುವ ಎದುರಿಸುವ ಶಕ್ತಿಯನ್ನು ಕೊಡು ಎಂದು ಕೇಳಿಕೊಳ್ಳಿ. ನಿಮಗೆ ಯಾವದೋ ಪ್ರೇರಣೆಯಿಂದ ನಿಮ್ಮ ಜೀವನವನ್ನು ಬದಲಿಸಿಕೊಳ್ಳುವಿರಿ.

ಮೀನ ರಾಶಿ: ನಿಮ್ಮನ್ನು ಗುಪ್ತವಾಗಿ ಗಮನಿಸುವಂತೆ ತಿಳಿದೀತು. ಸ್ವಂತಿಕೆಯನ್ನು ಸಂಪಾದಿಸಬೇಕು ಎನ್ನುವ ನಿಮ್ಮ ತೀವ್ರತರವಾದ ಪ್ರಯತ್ನಕ್ಕೆ ಇಂದು ಕೆಲವು ಅಡ್ಡಿಗಳು ಬರಬಹುದು. ನಿಮ್ಮಿಂದ ಆಗಬೇಕಾದ ಕೆಲಸಗಳು ಬಹಳ ಇದ್ದರೂ ಯಾವುದೇ ಚಿಂತೆ ಇಲ್ಲದೇ ಇರುವಿರಿ. ಆಪ್ತರು ನಿಮ್ಮಿಂದ ದೂರವಾಗಬಹುದು.

Leave a Reply

Your email address will not be published. Required fields are marked *