ಉಜಿರೆ:(ಆ.31) ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿಯ ವತಿಯಿಂದ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಮಡಂತ್ಯಾರು
ಇಲ್ಲಿ ನಡೆದ 2024- 25ನೇ ಸಾಲಿನ ಪ್ರೌಢಶಾಲಾ ಬಾಲಕ ಬಾಲಕಿಯರ ಫುಟ್ಬಾಲ್ ಪಂದ್ಯಾಟದಲ್ಲಿ ಅನುಗ್ರಹ ಶಾಲೆಯ ಬಾಲಕ ಬಾಲಕಿಯರ ತಂಡಗಳು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
ಇದನ್ನೂ ಓದಿ: 🐕🐈ಉಜಿರೆ:(ಸೆ.1) ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತುಕೊಡುವ ಶಿಬಿರ
ಬಾಲಕರ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ತಂಡವನ್ನು ಸೋಲಿಸಿ, ಸೆಮಿಫೈನಲ್ ನಲ್ಲಿ ದಿವ್ಯಜೋತಿ ಆಂಗ್ಲ ಮಾಧ್ಯಮ ಶಾಲೆ ಕಾಯರ್ತಡ್ಕ ತಂಡವನ್ನು ಸೋಲಿಸಿ, ಫೈನಲ್ ನಲ್ಲಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ತಂಡವನ್ನು ಸೋಲಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದಲ್ಲಿ ಬೆಸ್ಟ್ ಗೋಲ್ ಕೀಪರ್ ಆಗಿ ಸೋಹನ್ ಕೆ .ಕೆ ಹಾಗೂ ಬೆಸ್ಟ್ ಸ್ಟ್ರೈಕರ್ ಮಹಮ್ಮದ್ ರಿಹಾನ್ ಇವರು ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಬಾಲಕಿಯರ ವಿಭಾಗದಲ್ಲಿ ಫೈನಲ್ ನಲ್ಲಿ ದಿವ್ಯಜೋತಿ ಆಂಗ್ಲ ಮಾಧ್ಯಮ ಶಾಲೆ ಕಾಯರ್ತಡ್ಕ ಇವರನ್ನು ಸೋಲಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಬೆಸ್ಟ್ ಗೋಲ್ ಕೀಪರ್ ಕಾಶ್ವಿ ಡಿ. ಕೋಟ್ಯಾನ್ ಹಾಗೂ ಬೆಸ್ಟ್ ಸ್ಟ್ರೈಕರ್ ಶ್ರೇಯ ಸಿ.ಎನ್ ಇವರು ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಇವರಿಗೆ ದೈಹಿಕ ಶಿಕ್ಷಕರಾದ ವಸಂತ್ ಹಾಗೂ ನಿಶ್ಚಿತ್ ಇವರು ತರಬೇತಿ ನೀಡಿದ್ದು, ವಿಜೇತ ಕ್ರೀಡಾಳುಗಳನ್ನು ಶಾಲಾ ಸಂಚಾಲಕರು, ಪ್ರಾಂಶುಪಾಲರು, ಶಿಕ್ಷಕರು ಅಭಿನಂದಿಸಿದ್ದಾರೆ.