Wed. Feb 5th, 2025

Video viral: ಅಷ್ಟಮಿ ಮೆರವಣಿಗೆ ವೇಳೆ ಯುವತಿಯೊಂದಿಗೆ ಅಶ್ಲೀಲ ನೃತ್ಯ

ಮಂಗಳೂರು :(ಆ.31) ಕೃಷ್ಣ ಜನ್ಮಾಷ್ಟಮಿಯ ಮೆರವಣಿಗೆ ವೇಳೆ ಯುವಕರ ಗುಂಪೊಂದು ಯುವತಿಯೊಂದಿಗೆ ಅಶ್ಲೀಲವಾಗಿ ನೃತ್ಯ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: 🛑ಪ್ರಿಯಕರನ ಜೊತೆ ಹೆಂಡತಿ ರೂಂನಲ್ಲಿದ್ದಾಗ ಮನೆಗೆ ಬಂದ ಗಂಡ

ಧಾರ್ಮಿಕ ಆಚರಣೆ ವೇಳೆ ಕೇಸರಿ ಶಾಲು ಹಾಕಿದ್ದ ಯುವಕರು ಯುವತಿಯೊಂದಿಗೆ ಅಶ್ಲೀಲವಾಗಿ ವರ್ತಿಸಿರುವ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡದಲ್ಲಿ ಘಟನೆ ನಡೆದಿದೆ ಎನ್ನಲಾಗುತ್ತಿದೆ.


ಧಾರ್ಮಿಕ ಮೆರವಣಿಗೆಯಲ್ಲಿ ಯುವಕರು ಯುವತಿಯೊಂದಿಗೆ ಅಶ್ಲೀಲವಾಗಿ ವರ್ತಿಸಿ ಹುಚ್ಚಾಟ ಮೆರೆದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.


ವೈರಲ್ ವೀಡಿಯೋದಲ್ಲಿ ಯುವಕರ ಗುಂಪಿನ ನಡುವೆ ಒಂಟಿ ಯುವತಿಯೊಬ್ಬಳು ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ಕೇಸರಿ ಶಾಲನ್ನು ತಲೆಗೆ ಸುತ್ತಿಕೊಂಡಿದ್ದ ಯುವಕನೊಬ್ಬ ಆಕೆಯನ್ನು ತಬ್ಬಿಕೊಂಡು ಅಶ್ಲೀಲವಾಗಿ ವರ್ತಿಸಿದ್ದಾನೆ. ಈ ವೇಳೆ ಯುವತಿ ಆತನನ್ನು ದೂರ ತಳ್ಳಿ ಅಲ್ಲಿಂದ ಬೇರೆಡೆ ಹೋಗಲು ಪ್ರಯತ್ನಿಸಿರುವುದು ಕಂಡುಬಂದಿದೆ.


ಈ ವಿಡಿಯೋವನ್ನು ಹಂಚಿಕೊಂಡ ವ್ಯಕ್ತಿ, ದಕ್ಷಿಣ ಕನ್ನಡದಲ್ಲಿ ಇದೆಂಥಾ ಸಂಸ್ಕೃತಿ? ಇದು ಯಾವ ರೀತಿಯ ಅಷ್ಟಮಿ ಆಚರಣೆ? ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *