Tue. Jan 13th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Oyuncular hızlıca işlem yapmak için Bahsegel giriş bağlantısını takip ediyor.

Aries to Pisces – ಇಂದು ಈ ರಾಶಿಯವರಿಗೆ ಶತ್ರುಗಳಿಂದ ಅಪಾಯ ಸಾಧ್ಯತೆ!!

Daily Horoscope - ಇಂದು ಈ ರಾಶಿಯವರಿಗೆ ಆತುರವೇ ಅಪಾಯ ತಂದೊಡ್ಡಬಹುದು

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ಪರಿಘ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:43 ಗಂಟೆ, ರಾಹು ಕಾಲ ಸಾಯಂಕಾಲ 05:10 ರಿಂದ 06:43, ಯಮಘಂಡ ಕಾಲ ಮಧ್ಯಾಹ್ನ 12:32 ರಿಂದ 02:05ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:38 ರಿಂದ 05:10ರ ವರೆಗೆ.

ಮೇಷ ರಾಶಿ: ಕಾನೂನಿಗೆ ಯೋಗ್ಯವಾದ ದಾರಿಯಲ್ಲಿ ಸಂಪಾದನೆಯನ್ನು ಆಲೋಚಿಸಿ. ಇಂದು ಸಂಗಾತಿಯು ನಿಮ್ಮ ಇಂಗಿತವನ್ನು ಅರಿತು ಕೆಲಸ ಮಾಡುವರು.

ವೃಷಭ ರಾಶಿ: ನಿಮಗೆ ಆಗದವರಿಂದಲೇ ಸಹಕಾರವನ್ನು ಪಡೆಯಬೇಕಾಗಬಹುದು. ಇಂದು ಸ್ತ್ರೀಯರು ಸ್ವಪ್ರಯತ್ನದಿಂದ ಲಾಭ ಗಳಿಸುವರು. ಖುಷಿಯಿಂದ ನಿಮ್ಮ ಕೆಲಸದಲ್ಲಿ ನೀವು ಮಗ್ನರಾಗುವಿರಿ. ನಿಮಗೆ ಬಲವಂತ ಮಾಡುವುದು ಇಷ್ಟವಾಗದು.

ಮಿಥುನ ರಾಶಿ: ನೀವು ಇಂದು ಆಡಿದ ದುಡುಕಿನ ಮಾತಿನಿಂದ ನಿಮ್ಮ ನೆಮ್ಮದಿ ಕೆಡುವುದು. ಇಂದು ನಿಮ್ಮ ಅಶಕ್ತತೆಯು ಸಿಟ್ಟಾಗಿ ಬದಲಾಗುವುದು. ನಿಮಗೆ ಸಂಬಂಧಿಸಿದ ಕೆಲಸವಷ್ಟನ್ನೇ ಮಾಡಿ. ಇನ್ನೊಬ್ಬರ ಬಗ್ಗೆ ನಿಮ್ಮ‌ ಮಾತುಗಳು ಬೇಡ.

ಕರ್ಕಾಟಕ ರಾಶಿ; ನಿಮ್ಮ ಬದಲಾವಣೆಯನ್ನು ಕುಟುಂಬವು ಸ್ವೀಕರಿಸುವುದು ಕಷ್ಟ. ಇಂದು ನೀವು ದುಶ್ಚಟದಿಂದ ದೂರವಿರಲು ದಾರಿ ಹುಡುಕುವಿರಿ. ನಿಮ್ಮ ಗಾಂಭಿರ್ಯವು ಮನೆಯಲ್ಲಿ ಹೆದರಿಕೆಯನ್ನು ತರಿಸೀತು.

ಸಿಂಹ ರಾಶಿ: ವ್ಯವಹಾರವನ್ನು ತೂಗಿಸಿಕೊಂಡು ಹೋಗುವ ತಂತ್ರಗಳನ್ನು ಅರಿಯುವುದು ಉತ್ತಮ. ನೀವು ಸಾಮಾಜಿಕ ಕಾರ್ಯದಿಂದ ಟೀಕೆಗೆ ಗುರಿಯಾಗುವಿರಿ. ವಿಶ್ವಾಸವನ್ನು ಪಡೆಯಲು ನೀವು ಬಹಳ ಶ್ರಮವನ್ನು ವಹಿಸಬೇಕಾದೀತು.

ಕನ್ಯಾ ರಾಶಿ: ವಿಶ್ವಾಸವನ್ನು ಗಳಿಸದೇ ನೀವು ವ್ಯವಹಾರದಲ್ಲಿ ಯಶಸ್ಸು ಸಾಧ್ಯವಾಗದು. ನಿಮ್ಮದಲ್ಲದ‌ ವಸ್ತುವನ್ನು ಜೋಪಾನ‌ಮಾಡುವುದು ಅತ್ಯವಶ್ಯಕ. ಉದ್ಯೋಗದಲ್ಲಿ ಬದಲಾವಣೆಯನ್ನು ಕಾಣಬಹುದಾಗಿದೆ.

ತುಲಾ ರಾಶಿ: ಇಂದು ನಿಮ್ಮ ಮನಸ್ಸನ್ನು ಒಂದೇ ಕಾರ್ಯದಲ್ಲಿ ನಿಲ್ಲಿಸಲಾಗದು. ನಿಮಗೆ ಶತ್ರುಗಳ ಕಡೆಯಿಂದ ಭೀತಿ ಇರುವುದು. ನೀವೇ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಯಶಸ್ಸನ್ನು ಕೊಡಲಿದೆ. ನಿಮ್ಮ ನಡೆಯು ಕೆಲವರಿಗೆ ಅಸಮಾಧಾನವನ್ನು ಉಂಟುಮಾಡಲಿದೆ.

ವೃಶ್ಚಿಕ ರಾಶಿ: ಭೂ ವ್ಯವಹಾರದಲ್ಲಿ ಒಬ್ಬರಿಗೂ ಹೊಂದಾಣಿಕೆ ಆಗದೇ ತಪ್ಪು ಹೋಗಬಹುದು. ನಿಮ್ಮ ಬಳಿ ಇರುವ ಸಂಪತ್ತಿನಲ್ಲಿ ಅಲ್ಪವನ್ನಾದರೂ ಸಹಾಯಕ್ಕಾಗಿ ನೀಡಿ. ಮುಂದೆ ಅದೇ ಮರಳಿ ಬರಬಹುದು.

ಧನು ರಾಶಿ: ಈಗ ಮಾಡುತ್ತಿರುವ ಉದ್ಯೋಗದಲ್ಲಿ ನಿಮಗೆ ಪೂರ್ಣ ತೃಪ್ತಿ ಇರದು. ಉನ್ನತ ಅಧಿಕಾರಕ್ಕಾಗಿ ಅಪೇಕ್ಷೆ ಪಟ್ಟಿದ್ದರೆ ಇಂದು ಸಿಗಬಹುದು. ನೂತನ ಸಂಸ್ಥೆಯೊಂದರ ಮುಖ್ಯಸ್ಥರೂ ಆಗಬಹುದು.

ಮಕರ ರಾಶಿ: ಪ್ರಯತ್ನಿಸಿದ ಕಾರ್ಯದಲ್ಲಿ ನಿಮಗೆ ಸಮಾಧಾನ ಇರುವುದು. ಮನೆಯನ್ನು ಬಿಟ್ಟು ಬರಲು‌ ನಿಮಗೆ ಬಹಳ ನೋವಾದೀತು. ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವವರಿಗೆ ಸರಿಯಾದ ಉತ್ತರವನ್ನು ಕೊಡುವಿರಿ.‌

ಕುಂಭ ರಾಶಿ: ಉದ್ಯೋಗಕ್ಕಾಗಿ ದೂರ ತೆರಳುವುದು ನಿಮ್ಮವರಿಗೆ ಇಷ್ಟವಾಗದು. ಅದಕ್ಕಾಗಿ ನಿಮ್ಮ ನಿರ್ಧಾರವನ್ನು ಬದಲಿಸುವ ಪ್ರಯತ್ನ ಮಾಡುವರು. ನಿಮ್ಮ ಯಶಸ್ಸು ಕಂಡು ನಿಮ್ಮವರೇ ಸಂಕಟ ಪಡುತ್ತಾರೆ.

ಮೀನ ರಾಶಿ: ಇಂದು ನಿಮ್ಮನ್ನು ಭೇಟಿಯಾಗಲು ಬಂದವರನ್ನು ಅಗೌರವದಿಂದ ಕಾಣುವುದು ಬೇಡ. ನಿಮ್ಮ ಸ್ಥಿರಾಸ್ತಿಯು ನಿಮ್ಮ ಕಠಿಣ ಸಮಯದಲ್ಲಿ ನೆರವಾಗಲಿದೆ. ಆರಾಮಾಗಿ ಇರಬೇಕೆಂದುಕೊಂಡರೂ ಅನೇಕ ಕೆಲಸಗಳನ್ನು ಅನಿವಾರ್ಯವಾಗಿ ಮಾಡಬೇಕಾಗಬಹುದು.

Leave a Reply

Your email address will not be published. Required fields are marked *