Tue. Apr 15th, 2025

Balanja: ಅಟ್ಲಾಜೆ ಅಂಗನವಾಡಿ ಶಿಕ್ಷಕಿ ಜಾನಕಿ ಹೃದಯಾಘಾತದಿಂದ ವಿಧಿವಶ

ಬಳಂಜ:(ಸೆ.1) ಅಟ್ಲಾಜೆ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಜಾನಕಿ(50)ವರ್ಷ ಇಂದು ಸಂಜೆ ಆಗಸ್ಟ್ 31 ರಂದು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಇದನ್ನೂ ಓದಿ: ⚖Aries to Pisces – ಇಂದು ಈ ರಾಶಿಯವರಿಗೆ ಶತ್ರುಗಳಿಂದ ಅಪಾಯ ಸಾಧ್ಯತೆ!!


ಶ್ರೀಮತಿ ಜಾನಕಿಯವರು ಹಲವು ವರ್ಷಗಳಿಂದ ಬಳಂಜ ಗ್ರಾಮದ ಅಟ್ಲಾಜೆ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಪುಟಾಣಿ ಮಕ್ಕಳ ಅಪಾರ ಪ್ರೀತಿಗೆ ಪಾತ್ರರಾಗಿದ್ದರು.

ಊರಿನ ಜನರೊಂದಿಗೂ ಉತ್ತಮ ಸ್ನೇಹ, ಪ್ರೀತಿ ಮತ್ತು ಅನೋನ್ಯತೆಯನ್ನು ಹೊಂದಿದ್ದ ಜಾನಕಿಯವರು ಕೆಲವು ದಿನಗಳಿಂದ ಸುಸ್ತು ಮತ್ತು ಜ್ವರದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದ್ದು , ಬಳಂಜದ ತನ್ನ ಮನೆಯಿಂದ ಬಂಟ್ವಾಳದಲ್ಲಿರುವ ತಾಯಿ ಮನೆಗೆ ತೆರಳಿದ್ದ ಸಂದರ್ಭ ಮತ್ತೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತಿ ಸಂಜೀವ,ಓರ್ವ ಪುತ್ರ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *