Tue. Apr 8th, 2025

Belal : ಮೈತ್ರಿ ಯುವಕ ಮಂಡಲ (ರಿ.)ಬೆಳಾಲು ಇದರ ಆಶ್ರಯದಲ್ಲಿ 20 ನೇ ವರ್ಷದ ಮೊಸರು ಕುಡಿಕೆ ಉತ್ಸವ

ಬೆಳಾಲು :(ಸೆ.1) ಮೈತ್ರಿ ಯುವಕ ಮಂಡಲ (ರಿ.)ಬೆಳಾಲು ಇದರ ಆಶ್ರಯದಲ್ಲಿ ಸಂಘದ ವಠಾರ ದಲ್ಲಿ ಸೆ 01 ರಂದು 20 ನೇ ವರ್ಷದ ಮೊಸರು ಕುಡಿಕೆ ಉತ್ಸವಕ್ಕೆ ಚಾಲನೆ ನೀಡಲಾಯಿತು.

ನಿವೃತ್ತ ಜಲಾನಯನ ಅಧಿಕಾರಿ ನಾರಾಯಣ ಸುವರ್ಣ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಯುವಕ ಮಂಡಲದ ಸಮಾಜಮುಖಿ ಸಾಮಾಜಿಕ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.

ಬೆಳಾಲು ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಚಿದಾನಂದ ಕೆ ಹಾಗೂ ಬೆಳಾಲು ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನ ಉಪಾಧ್ಯಕ್ಷರಾದ ಮಮತಾ ದಿನೇಶ್ ಪೂಜಾರಿ ಉಪ್ಪಾರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಮೈತ್ರಿ ಯುವಕ ಮಂಡಲ ಗೌರವಾಧ್ಯಕ್ಷರಾದ ರಾಜೇಶ್ ಪಾರಳ, ಅಧ್ಯಕ್ಷರಾದ ನಿತಿನ್ ಮೋನಿಶ್, ಕಾರ್ಯದರ್ಶಿ ವಿಘ್ನೇಶ್ ಹಾಗೂ ಗೌರವ ಸಲಹೆಗಾರರು ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು.

ಮುದ್ದು ಕೃಷ್ಣ ರಾಧೆ ವೇಷ ಎಲ್ಲರ ಮನಸೊರೆಗೊಂಡಿತು. ಗೌರವ ಸಲಹೆಗಾರರು ನೋಟರಿ ವಕೀಲರಾದ ಶ್ರೀನಿವಾಸ್ ಗೌಡ, ಅಧ್ಯಾಪಕರಾದ ಭರತ್ ಕಾರ್ಯಕ್ರಮ ನಿರ್ವಹಿಸಿದರು. ಸ್ವಾತಿ ಪ್ರಾರ್ಥನೆ ಸಲ್ಲಿಸಿ, ನಿತಿನ್ ಮೋನಿಶ್ ಸ್ವಾಗತಿಸಿ, ವಿಘ್ನೇಶ್ ಧನ್ಯವಾದವಿತ್ತರು.

Leave a Reply

Your email address will not be published. Required fields are marked *