ಸವಣಾಲು:(ಸೆ.1) ಸವಣಾಲಿನ ಸುತ್ತಮುತ್ತ ಪ್ರದೇಶಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿತ್ತು. ಚಿರತೆಯ ಹಾವಳಿಯಿಂದಾಗಿ ಜನರು ಆತಂಕಗೊಂಡಿದ್ದರು. ಜನರ ಆತಂಕ ಈಗ ದೂರವಾಗಿದೆ.



ಇದನ್ನೂ ಓದಿ; 🛑ಬಳಂಜ: ಅಟ್ಲಾಜೆ ಅಂಗನವಾಡಿ ಶಿಕ್ಷಕಿ ಜಾನಕಿ ಹೃದಯಾಘಾತದಿಂದ ವಿಧಿವಶ
ಅರಣ್ಯ ಇಲಾಖೆ ಇಟ್ಟ ಬೋನಿಗೆ ತಿಂಗಳುಗಳ ನಂತರ ಚಿರತೆ ಬಂದು ಬಿದ್ದಿದೆ. ಬೋನಿನಲ್ಲಿಟ್ಟ ಕೋಳಿಗಾಗಿ ಚಿರತೆ ಬಂದಿದ್ದು, ಆ ವೇಳೆಯಲ್ಲಿ ಚಿರತೆ ಬೋನಿಗೆ ಬಿದ್ದಿದ್ದು, ಅರಣ್ಯ ಇಲಾಖೆಯವರು ಬೋನಿಗೆ ಬಿದ್ದ ಚಿರತೆಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.



