Sat. Apr 19th, 2025

Belthangadi: ಛೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ ಬೆಳ್ತಂಗಡಿ ಅಧ್ಯಕ್ಷರಾಗಿ ರೋನಾಲ್ಡ್ ಲೋಬೊ, ಪ್ರಧಾನ ಕಾರ್ಯದರ್ಶಿಯಾಗಿ ಲ್ಯಾನ್ಸಿ ಎ ಪಿರೇರಾ

ಬೆಳ್ತಂಗಡಿ:(ಸೆ.2) ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‌ ಬೆಳ್ತಂಗಡಿ ಇದರ ವಾರ್ಷಿಕ ಮಹಾಸಭೆಯು ಸೆ. 1ರಂದು ಬೆಳ್ತಂಗಡಿ ಸಿವಿಸಿ ಹಾಲ್ ನಲ್ಲಿ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ ರುವರ ಅಧ್ಯಕ್ಷತೆಯಲ್ಲಿ ಜರುಗಿತು.

ಇದನ್ನೂ ಓದಿ: 🔶ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಕಂಪ್ಯೂಟರ್ ತರಬೇತಿ ಕಾರ್ಯಾಗಾರ

ಸಭೆಯಲ್ಲಿ ಮುಂದಿನ 2 ವರ್ಷದ ಅವಧಿಗೆ ನೂತನ ಪಧಾದಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ರೋನಾಲ್ಡ್ ಲೋಬೊ, ಪ್ರಧಾನ ಕಾರ್ಯದರ್ಶಿಯಾಗಿ ಲ್ಯಾನ್ಸಿ ಎ ಪಿರೇರಾ, ಕೋಶಾಧಿಕಾರಿಯಾಗಿ ಸುನೀಲ್‌ ಶೆಣೈ, ಉಪಾಧ್ಯಕ್ಷರಾಗಿ ಶಶಿಧರ ಪೈ ಆಯ್ಕೆಯಾದರು ಹಾಗೂ 30 ಮಂದಿ ಸದಸ್ಯರನ್ನು ಆಡಳಿತ ಮಂಡಳಿಗೆ ಸದಸ್ಯರಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಜಯಾನಂದ ಗೌಡ ಬೆಳ್ತಂಗಡಿ ನಗರ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರನ್ನು ಸಭೆಯಲ್ಲಿ ಗೌರವಿಸಲಾಯಿತು.

ಸಂಘಟನೆಯ ಚಟುವಟಿಕೆಗಳ ಬಗ್ಗೆ ಹಾಗೂ ಹೆದ್ದಾರಿಯ ಕೆಲಸದ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ವರ್ತಕರಿಗೆ ಆಗುವಂತಹ ತೊಂದರೆಗಳನ್ನು ಸಂಬಂಧ ಪಟ್ಟ ಇಲಾಖೆಯ ಗಮನಕ್ಕೆ ತಂದು ಸರಿಪಡಿಸುವ ಬಗ್ಗೆ ಚರ್ಚಿಸಲಾಯಿತು.

ಪ್ರಧಾನ ಕಾರ್ಯದರ್ಶಿ ರೋನಾಲ್ಡ್‌ ಲೋಬೊ ವರದಿ ಮಂಡಿಸಿದರು. ಕೋಶಾಧಿಕಾರಿ ಸುನೀಲ್ ಶೆಣೈ ಲೆಕ್ಕ ಪತ್ರ ಮಂಡಿಸಿದರು.

ಅಧ್ಯಕ್ಷ ಪುಷ್ಪರಾಜ್‌ ಶೆಟ್ಟಿ ಸ್ವಾಗತಿಸಿ, ಜತೆ ಕಾರ್ಯದರ್ಶಿ ಯಶವಂತ ಪಟವರ್ಧನ್ ಮಹಾಸಭೆಯ ನೋಟಿಸು ಓದಿ ದಾಖಲಿಸಿದರು. ಸುಶೀಲಾ ಹೆಗ್ಡೆ ಪ್ರಾರ್ಥನೆ ಗೈದರು. ಲ್ಯಾನ್ಸಿ ಎ ಪಿರೇರಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *