ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಮಘಾ, ಯೋಗ: ಶಿವ, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:42 ಗಂಟೆ, ರಾಹು ಕಾಲ ಬೆಳಿಗ್ಗೆ 07:54 ರಿಂದ 09:27, ಯಮಘಂಡ ಕಾಲ ಬೆಳಿಗ್ಗೆ 10:59 ರಿಂದ ಮಧ್ಯಾಹ್ನ 12:32ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:05 ರಿಂದ 03:37ರ ವರೆಗೆ.
ಮೇಷ ರಾಶಿ : ಮಕ್ಕಳ ವರ್ತನೆಗಳು ನಿಮಗೆ ಕಷ್ಟಕೊಡಬಹುದು. ಸಮಯಕ್ಕೆ ಬೆಲೆ ಕೊಟ್ಟು ಇಂದಿನ ಕೆಲಸವನ್ನು ಮಾಡಿ. ಧಾರ್ಮಿಕವಾಗಿ ನೀವು ಹೆಚ್ಚು ಆಸಕ್ತರಾಗಬೇಕಾಗುತ್ತದೆ. ಆಪತ್ತಿನಲ್ಲಿ ಇರುವ ನಿಮಗೆ ಸ್ನೇಹಿತರ ಸಹಾಯ ಸಿಗಲಿದೆ, ಕೇಳಿ ಪಡೆಯಿರಿ.
ವೃಷಭ ರಾಶಿ : ಸ್ವಯಂಕೃತ ಅಪರಾಧಕ್ಕೆ ಬೇರೆಯವರನ್ನು ಬೊಟ್ಟುಮಾಡಿ ತೋರಿಸುವುದು ಬೇಡ. ಇಂದು ನೀವು ಎಲ್ಲರ ಮೇಲೂ ಸಿಟ್ಟು ಮಾಡಿಕೊಳ್ಳುವಿರಿ. ಮಾತಿಗೆ ಎದುರುತ್ತರ ಕೊಡುವಿರಿ.
ಮಿಥುನ ರಾಶಿ : ದೈಹಿಕ ಆರೋಗ್ಯದಲ್ಲಿ ಏರುಪೇರಾಗಬಹುದು. ನಿಮ್ಮ ಉದ್ಯೋಗದ ಚಿಂತೆಯಿಂದ ಯಾವ ಪ್ರಯೋಜನವೂ ಆಗದು. ನಿಮ್ಮ ವೈಯಕ್ತಿಕ ಕೆಲಸಗಳೇ ಬಹಳ ಇರಲಿದ್ದು ಇನ್ನೊಂದರ ಕುರಿತು ಇಂದು ಯೋಚನೆ ಅಸಾಧ್ಯವಾದೀತು.
ಕರ್ಕಾಟಕ ರಾಶಿ : ಸಂಸಾರದ ಸೂಕ್ಷ್ಮತೆಗಳು ನಿಮಗೆ ಅರ್ಥವಾಗದು. ನಿಮಗೆ ಇಂದು ಪ್ರಭಾವೀ ವ್ಯಕ್ತಿಗಳ ಸಹವಾಸದಿಂದ ಸ್ಥಾನವು ಪ್ರಾಪ್ತಿಯಾಗಲಿದೆ. ಸಂಗಾತಿಯ ಮನೋಭಾವವನ್ನು ಪೂರ್ತಿಯಾಗಿ ತಿಳಿಯಲು ಸಾಧ್ಯವಾಗದು.
ಸಿಂಹ ರಾಶಿ : ಮನೆಯ ತುರ್ತು ಕಾರ್ಯಗಳನ್ನು ಮಾಡಲು ಆಗದು. ಇಂದು ಆರಂಭಿಸಿದ ಕಾರ್ಯವನ್ನು ಮುಗಿಸುವ ಮನೋಭಾವದಲ್ಲಿ ಇರುವಿರಿ. ಉದ್ಯೋಗಕ್ಕೆ ಸಂಬಂಧಿಸಿದಂತೆ ಸ್ವತಂತ್ರ ನಿರ್ಧಾರವನ್ನು ತೆಗೆದುಕೊಳ್ಳದೇ ಉದ್ಯೋಗಿಗಳ ಅಭಿಪ್ರಾಯವನ್ನೂ ಕಲೆಹಾಕಿ ಅಂತಿಮ ನಿರ್ಧಾರಕ್ಕೆ ಬರುವುದು ಉತ್ತಮ.
ಕನ್ಯಾ ರಾಶಿ : ಕೆಲವು ಒಪ್ಪಂದಗಳು ನಿಮ್ಮ ವ್ಯಾಪಾರಕ್ಕೆ ಒಳ್ಳೆಯದು. ಸಮಯ ಮಿತಿಯಲ್ಲಿ ಮಾಡಿಕೊಳ್ಳಬಹುದು. ಇಂದು ನಿಮ್ಮ ಕಾರ್ಯಕ್ಷೇತ್ರವನ್ನು ಉತ್ತಮ ಮಾಡಿಕೊಳ್ಳುವುದು ಹೊಣೆಗಾರಿಕೆ ಆಗುವುದು. ಆರ್ಥಿಕವಾದ ನಷ್ಟವನ್ನು ಸರಿಮಾಡಿಕೊಳ್ಳಲು ನೀವು ಉದ್ಯೋಗವನ್ನು ಬದಲಿಸುವಿರಿ.
ತುಲಾ ರಾಶಿ : ಇಂದು ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಅತಿಯಾದ ಭಯವು ಕಾಡಬಹುದು. ನಿಮ್ಮಿಂದ ಆಗದ ಕೆಲಸವನ್ನು ಮತ್ತೆ ಮತ್ತೆ ಮಾಇನ್ನೊಬ್ಬರಅಪಮಾನಕ್ಕೆ ಒಳಗಾಗಬೇಡಿ. ಆರ್ಥಿಕ ವಿಭಾಗದಲ್ಲಿ ಕಾರ್ಯ ಮಾಡುವವರಿಗೆ ತೊಂದರೆಗಳು ಬರಬಹುದು.
ವೃಶ್ಚಿಕ ರಾಶಿ : ದೂರದ ಬಂಧುಗಳು ನಿಮ್ಮನ್ನು ಭೇಟಿಯಾಗಬಹುದು. ನಿಮ್ಮ ಕೆಲಸಕ್ಕೆ ಸಮಜಾಯಿಷಿ ಕೊಡಲು ಹೋಗುವಿರಿ. ನಿಮ್ಮ ವಿದೇಶಕ್ಕೆ ಹೋಗುವ ಕನಸು ನನಸಾಗುವ ಸಾಧ್ಯತೆ ಇದೆ. ನಿಮ್ಮ ಯಶಸ್ಸು ಕುಂಟಿತವಾಗಲಿದೆ.
ಧನು ರಾಶಿ : ಹೆಚ್ಚು ಶ್ರಮ ಹಾಗೂ ಕಡಿಮೆ ಆದಾಯದಿಂದ ನೀವು ತೃಪ್ತರಾಗಬೇಕಾಗುವುದು. ಇಂದು ಯಾವ ಕಾರ್ಯವನ್ನು ಮಾಡುವಾಗಲೂ ಉದ್ವೇಗಪಡುವ ಅಗತ್ಯ ಇರದು. ನಿಮ್ಮ ಸ್ನೇಹಿತರ ಬಳಗ ದೊಡ್ಡದಿದ್ದು ಎಲ್ಲರಿಗೂ ಸಂತೋಷವನ್ನು ಕೊಡುವಿರಿ.
ಮಕರ ರಾಶಿ : ನಿಮ್ಮ ಅಧಿಕಾರವನ್ನು ಹಿಡಿತಕ್ಕೆ ತಂದುಕೊಳ್ಳುವುದೇ ಸಾಹಸವಾಗಬಹುದು. ಇಂದು ನಿಮ್ಮ ಸಂಗಾತಿಯು ನಿಮಗೆ ಪ್ರಿಯವಾದುದನ್ನೇ ಮಾಡುವರು. ಸರ್ಕಾರಿ ಕೆಲಸಗಳು ನಿಧಾನವಾಗಿ ಮುಂದುವರಿಯುವುದು. ಕೆಲವು ನಿಮಗೆ ಬಂಧನ ಎನಿಸಬಹುದು.
ಕುಂಭ ರಾಶಿ : ನಿಮ್ಮ ನೋವುಗಳನ್ನು ಹೇಳಿಕೊಂಡು ಕಡಿಮೆ ಮಾಡಿಕೊಳ್ಳಬಹುದು. ಇಂದಿನ ನಿಮ್ಮ ಹೂಡಿಕೆ ನಿಮಗೆ ಬಹು ಉಪಕಾರಿ.ನಿಮ್ಮ ಗಂಭೀರವಾದ ನಡೆಯು ಕೆಲವರಿಗೆ ಕಷ್ಟವಾಗಬಹುದು. ಮಕ್ಕಳ ಮೇಲೆ ನಿಮ್ಮ ಗಮನವಿರಲಿ.
ಮೀನ ರಾಶಿ : ನಿಮ್ಮ ಆತುರದ ಕಾರಣ ನಿಮ್ಮ ಜೊತೆ ಇತರರು ವ್ಯವಹರಿಸುವುದು ಕಷ್ಟವಾಗಲಿದೆ. ಇಂದಿನ ನಿಮ್ಮ ಪ್ರಯಾಣದಿಂದ ನಷ್ಟವಾಗುವ ಸಾಧ್ಯತೆ ಇದೆ. ಅನಿರೀಕ್ಷಿತವಾಗಿ ಆರ್ಥಿಕ ನಷ್ಟವಾಗಬಹುದು. ಕಲಾವಿದರಿಗೆ ಹೆಚ್ಚು ಅನುಕೂಲವಾಗಲಿದೆ. ಪಾಲುದಾರಿಕೆಯಲ್ಲಿ ಸರಿಯಾದ ನಿಯಮಗಳನ್ನು ರೂಪಿಸಿಕೊಳ್ಳಿ.