Wed. Nov 20th, 2024

Dharmasthala: ಧರ್ಮಸ್ಥಳದ ಶ್ರೀ ಡಿ. ಹರ್ಷೇಂದ್ರ ಕುಮಾರ್ ರಿಗೆ “ಗೌರವ ಗಾನ ನಮನ”

ಧರ್ಮಸ್ಥಳ:(ಸೆ.2) ಕಾಸರಗೋಡು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಆ.31 ರಂದು ಶ್ರೀ ಧರ್ಮಸ್ಥಳ ಶಿಕ್ಷಣ ಕ್ಷೇತ್ರದ ಕಾರ್ಯದರ್ಶಿ, ಧರ್ಮಸ್ಥಳ ಮೇಳದ ಯಜಮಾನರಾದ ಶ್ರೀ ಡಿ. ಹರ್ಷೇಂದ್ರ ಕುಮಾರ್ ಧರ್ಮಸ್ಥಳ ಇವರಿಗೆ ಗೌರವ ಗಾನ ನಮನ ಸಲ್ಲಿಸಲಾಯಿತು.

ಇದನ್ನೂ ಓದಿ: 🛑ಪುತ್ತೂರು : ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಮಹಿಳೆಯಿಂದ ದೂರು

ಸಿರಿಬಾಗಿಲು ಪ್ರತಿಷ್ಠಾನ ಇದೊಂದು ಯಕ್ಷಗಾನ ಕ್ಷೇತ್ರದಲ್ಲಿ ಅದ್ಭುತ ಎಂದು ಹರ್ಷೇಂದ್ರ ಕುಮಾರ್ ಧರ್ಮಸ್ಥಳ ಹೇಳಿದರು. ಯಕ್ಷಗಾನದ ಅಧ್ಯಯನಕ್ಕೆ ಬೇಕಾಗುವ ಸಮಗ್ರ ದಾಖಲೆಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆ ಹಸ್ತಾಂತರಿಸುವ ಪ್ರತಿಷ್ಠಾನದ ಸಂಕಲ್ಪ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಮುಂದೆ ಇದೊಂದು ಟೂರಿಸಂ ಕೇಂದ್ರವಾಗಿ ಮೆರೆಯಲಿ, ದೇವರು ಅನುಗ್ರಹಿಸಲಿ. ಸತತ 35 ವರ್ಷ ಧರ್ಮಸ್ಥಳ ಮೇಳದಲ್ಲಿ ಯಕ್ಷಗಾನ ಭಾಗವತಿಗೆ ಮಾಡುತ್ತಾ ಬಂದಿರುವ ರಾಮಕೃಷ್ಣ ಮಯ್ಯ ಸಿರಿಬಾಗಿಲು ಇವರ ಸಾಧನೆ ಮೆಚ್ಚುವಂತದ್ದು, ತನ್ನ ಕಾರ್ಯಕ್ಷೇತ್ರದ ಬಗ್ಗೆ ಅಪಾರ ಗೌರವ, ಕಾಳಜಿಯಿಂದ ಕಾರ್ಯತತ್ಪರರಾದ ಬೆರಣಿಕೆಯ ಕಲಾವಿದರಲ್ಲಿ ಶ್ರೀ ಮಯ್ಯರು ಒಬ್ಬರು.

ಸಾಧಿಸಿದರೆ ಏನನ್ನು ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ..ಶ್ರೀ ಮಂಜುನಾಥ ಸ್ವಾಮಿ ಮಹಾಗಣಪತಿಯು ಸದಾ ಅನುಗ್ರಹಿಸಲಿ ಎಂದು ಶುಭ ಹಾರೈಸಿದರು.


ಸಭೆಯ ಅಧ್ಯಕ್ಷತೆಯನ್ನು ಆರು ಮೇಳಗಳ ಯಜಮಾನರಾದ ಶ್ರೀ ಕಿಶನ್ ಹೆಗ್ಡೆ ಪಳ್ಳಿ ಇವರು ವಹಿಸಿದರು. ಮ್ಯೂಸಿಯಂ ಬಗ್ಗೆ ಇದು ಕೇವಲ ಅದ್ಬುತವಲ್ಲ ಅತ್ಯದ್ಬುತ ಎಂದು ಬಣ್ಣಿಸಿದರು. ಮಯ್ಯ ಭಾಗವತರ ದುಡಿಮೆಯ ಫಲ ಎದ್ದು ಕಾಣುತ್ತಿದೆ .ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.

ಒಂದು ಕಲಾವಲಯದ ಬೆಳವಣಿಗೆಗಾಗಿ ವೃತ್ತಿ ಕಲಾವಿದರಾಗಿ ಶ್ರಮಿಸಿದ ಮಹಾ ಕಲಾವಿದ ಎಂದು ಬಣ್ಣಿಸಿದರು. ಮಧೂರು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶ್ರೀ ಜಯದೇವ ಖಂಡಿಗೆ, ಶ್ರೀ ಲಕ್ಷ್ಮಿನಾರಾಯಣ ತಂತ್ರಿ ಕಾವು ಮಠ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಶ್ರೀ ಜಗದೀಶ್ ಕೂಡ್ಲು ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಮೇಳದ ಮ್ಯಾನೇಜರ್ ಗಿರೀಶ್ ಹೆಗ್ಡೆ ಯವರನ್ನು ಅಭಿನಂದಿಸಲಾಯಿತು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಸ್ಥರಾದ ಶ್ರೀ ಮುಖೇಶ್ ರವರ ನೇತೃತ್ವದಲ್ಲಿ ಶ್ರೀ ಡಿ. ಹರ್ಷೇಂದ್ರ ಕುಮಾರ್ ಅವರನ್ನು ಗೌರವಿಸಲಾಯಿತು.

Leave a Reply

Your email address will not be published. Required fields are marked *