Wed. Nov 20th, 2024

Poha: ತಿಂಡಿಗೆ ಅವಲಕ್ಕಿ ಮಾಡಿ ಕೊಡದ ಪತಿ- ಕೋಪಗೊಂಡು ಪತ್ನಿ ಮಾಡಿದ್ದೇನು ಗೊತ್ತಾ?

ಉತ್ತರ ಪ್ರದೇಶ:(ಸೆ.2) ಗಂಡ ಹೆಂಡತಿ ಅಂದ ಮೇಲೆ ಜಗಳಗಳು ಸಹಜ. ಗಂಡ – ಹೆಂಡಿರ ಜಗಳ ಉಂಡು ಮಲಗುವ ತನಕ ಅಂತಾ ನಾವು ಕೇಳಿದ್ದುಂಟು. ಸಣ್ಣ ಸಣ್ಣ ವಿಷಯಕ್ಕೂ ಜಗಳ, ಮನಸ್ಥಾಪಗಳು ಬರುವುದುಂಟು. ಆದ್ರೆ ಸ್ವಲ್ಪ ಹೊತ್ತಿನಲ್ಲೇ ಆ ಮುನಿಸು, ಜಗಳಗಳು ಮರೆತುಹೋಗಿ ಸರಿಯಾಗಿದ್ದುಂಟು. ಆದ್ರೆ ಇಲ್ಲೊಂದು ಗಂಡ ಹೆಂಡತಿ ಯ ಜಗಳ ಬೆಳಗ್ಗಿನ ಬ್ರೇಕ್‌ ಫಾಸ್ಟ್‌ ಗಾಗಿ ನಡೆದಿದೆ. ಆದ್ರೆ ನಂತರ ನಡೆದಿದ್ದು ದುರಂತವೇ ಸರಿ!!

ಇದನ್ನೂ ಓದಿ: 🔴ಧರ್ಮಸ್ಥಳದ ಶ್ರೀ ಡಿ. ಹರ್ಷೇಂದ್ರ ಕುಮಾರ್ ರಿಗೆ “ಗೌರವ ಗಾನ ನಮನ”

ಏನಿದು ಘಟನೆ ಅಂತೀರಾ , ನೀವೇ ನೋಡಿ!!

ಮಹಿಳೆ ತನ್ನ ಗಂಡ ಬೆಳಗಿನ ಉಪಹಾರಕ್ಕೆ ತನ್ನಿಷ್ಟದ ಪೋಹ ಮಾಡದೆ ಬರಿ ಡ್ರೈ ಫೂಟ್ಸ್ ತಿನ್ನಲು ಕೊಟ್ಟಿದ್ದಾನೆಂದು ಕೋಪಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದ್ದು, ಗಂಡ ಅವಲಕ್ಕಿ (ಪೋಹಾ) ಮಾಡಿಲ್ಲವೆಂದು ದುಡುಕು ನಿರ್ಧಾರವನ್ನು ತೆಗೆದುಕೊಂಡು ಮಹಿಳೆಯೊನ್ನಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇಲ್ಲಿನ ಮುರಾರ್ ಪ್ರದೇಶದ ಬಾಲ್ಕಿಶನ್ ಜದೌನ್ ಎಂಬವರು ಒಂದು ವರ್ಷದ ಹಿಂದೆ ಕವಿತ ಎನ್ನುವವರನ್ನು ಮದುವೆಯಾಗಿದ್ದರು. ಇಬ್ಬರೂ ಬಹಳ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಆದ್ರೆ ಕ್ಷುಲ್ಲಕ ಕಾರಣಕ್ಕೆ ದುಡುಕು ನಿರ್ಧಾರವನ್ನು ತೆಗೆದುಕೊಂಡು ಕವಿತಾ ಆತ್ಮಹತ್ಯೆಗೆ ಶರಣಾಗಿದ್ದಾರೆ.


ಕವಿತಾ ಬೆಳಗ್ಗಿನ ಉಪಹಾರಕ್ಕೆ ಅವಲಕ್ಕಿಯನ್ನು ಮಾಡಿಕೊಂಡು ಎಂದು ಕೇಳಿಕೊಂಡಿದ್ದರು. ಆದರೆ ಪತಿ ಕೇವಲ ಡ್ರೈ ಫೂಟ್ಸ್ ನೀಡಿದ್ದರು. ಇದರಿಂದ ಸಿಟ್ಟಿಗೆದ್ದ ಕವಿತಾ ಸೀದಾ ಕೋಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಘಟನೆ ವರದಿಯಾದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ತನಿಖೆ ಆರಂಭಿಸಿದ್ದಾರೆ. ಕವಿತಾ ನವ ವಿವಾಹಿತೆ ಆಗಿರುವುದರಿಂದ ವರದಕ್ಷಿಣೆ ಸೇರಿದಂತೆ ಕೌಟುಂಬಿಕ ದೌರ್ಜನ್ಯದಂತಹ ಇತ್ಯಾದಿ ಆಯಾಮಗಳಿಂದಲೂ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಇಲ್ಲಿನ ಹೆಚ್ಚುವರಿ ಎಸ್ಪಿ ನಿರಂಜನ್ ಶರ್ಮಾ ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *