ಮೇಷ ರಾಶಿ: ಒಮ್ಮನಸ್ಸಿನಿಂದ ಇಂದು ಕಾರ್ಯ ಅಸಾಧ್ಯ. ಕಿರಿಕಿರಿಯನ್ನು ನಿಭಾಯಿಸುವುದೂ ಕಷ್ಟ ವಾದೀತು. ನಿಮ್ಮ ತೊಂದರೆಯ ಪರಿಹಾರಕ್ಕೆ ಹತ್ತಾರು ಮಾರ್ಗಗಳು ಇವೆ. ಅದನ್ನು ಅನ್ಯರ ಮೂಲಕ ಕೇಳಿ ತಿಳಿದುಕೊಳ್ಳುವ ಪ್ರಯತ್ನ ಮಾಡಿ.
ವೃಷಭ ರಾಶಿ: ನಿಮ್ಮ ಮಾತುಗಳನ್ನು ನಂಬುವವರ ಸಂಖ್ಯೆ ಕಡಿಮೆ ಆದೀತು. ಇಂದು ಅಕಾರ್ಯಕ್ಕೆ ಧನವು ವ್ಯಯವಾಗಬಹುದು. ನಿಮಗೆ ಅನೇಕ ಅವಕಾಶಗಳು ಸಿಗಲಿದ್ದು ಅದನ್ನು ಬಿಡುವಿರಿ. ಕೃಷಿ ಚಟುವಟಿಕೆಗಳನ್ನು ತೊಡಗಿಕೊಳ್ಳುವ ಸಾಧ್ಯತೆ ಇದೆ. ಕುಟುಂಬದ ಸೌಖ್ಯವನ್ನು ಇಚ್ಛಿಸುವಿರಿ.
ಮಿಥುನ ರಾಶಿ: ವಿದ್ಯಾರ್ಥಿಗಳಿಗೆ ಮಾನಸಿಕವಾದ ಭಯವನ್ನು ತೆಗೆದರೆ ಮುನ್ನಡೆಗೆ ಅವಕಾಶವಿದೆ. ಅಪೇಕ್ಷೆ ಇಲ್ಲದೇ ಕೆಲಸವನ್ನು ಮಾಡುವುದು ನಿಮಗೆ ಇಷ್ಟವಾಗುವುದು. ಮಕ್ಕಳ ಭಾವನೆಗೆ ಸ್ಪಂದಿಸಿ ಅವರನ್ನು ಖುಷಿಪಡಿಸುವಿರಿ.
ಕರ್ಕಾಟಕ ರಾಶಿ: ಬರಬೇಕಾದ ಹಣವು ನಿಮಗೆ ಸಿಗುವುದು ಕಷ್ಟವಾಗುವುದು. ಓಡಾಟವೂ ವ್ಯರ್ಥವಾಗಿ, ಬೇಸರ ತರಬಹುದು. ಇಂದು ಹೊಸ ಉತ್ಸಾಹದಿಂದ ವೃತ್ತಿಗೆ ತೆರಳಿದರೂ ನಿಮ್ಮೊಳಗೆ ಆತಂಕವಂತೂ ಇರುವುದು.
ಸಿಂಹ ರಾಶಿ: ಆಕಸ್ಮಿಕ ಅಪಘಾತಗಳಿಂದ ನೋವು ಹೆಚ್ಚಾಗುವುದು. ಆತುರದಲ್ಲಿ ಇಂದು ಅಸಂಬದ್ಧವಾಗುವ ಸಾಧ್ಯತೆ ಇದೆ. ವಿವಾಹದ ಪ್ರಸ್ತಾಪಗಳು ಬಂದು ಮತ್ತೆ ಹೋಗುತ್ತವೆ ಅಷ್ಟೇ. ಪ್ರಯತ್ನಪೂರ್ವಕವಾಗಿ ನಿಮ್ಮ ಕೆಲಸವನ್ನು ಪೂರೈಸುವಿರಿ.
ಕನ್ಯಾ ರಾಶಿ: ನೌಕರರಿಂದ ನಿರೀಕ್ಷಿಸಿದ್ದು ಸುಳ್ಳಾಗಬಹುದು. ಗೃಹನಿರ್ಮಾಣದಲ್ಲಿ ವಿಘ್ನಗಳು ಬರಲಿದೆ. ನಿಮ್ಮ ಆದಾಯದ ಮೂಲವಾದ ವ್ಯಾಪಾರವು ಲಾಭವನ್ನು ಕೊಡಬಹುದು.
ತುಲಾ ರಾಶಿ; ನಿಮ್ಮಿಂದ ಉಪಕಾರ ಪಡೆದವರೇ ನಿಮಗೆ ವಂಚಿಸುವ ಸಾಧ್ಯತೆ ಇದೆ. ನೀವು ಆಯ್ಕೆ ಮಾಡಿಕೊಳ್ಳುವ ಕೆಲಸವೇ ನಿಮ್ಮ ಭವಿಷ್ಯಕ್ಕೆ ಮಾರ್ಗವನ್ನು ತೋರಿಸುವುದು.
ವೃಶ್ಚಿಕ ರಾಶಿ: ಮಕ್ಕಳಿಗಾಗಿ ಪಟ್ಟಶ್ರಮವು ಇಂದು ಸಾರ್ಥಕ ಎನಿಸಬಹುದು. ಮನೆಯ ಸಂತೋಷದ ವಾತಾವರಣವು ಪುಟ್ಟ ಕಾರಣಕ್ಕೆ ಹಾಳಾಗಬಹುದು. ತನಗೆ ಬೇಕಾದುದನ್ನು ಪಡೆಯುವ ಆತುರತೆ ಇರಲಿದೆ. ಸ್ನೇಹಿತರಿಂದ ನಿಮಗೆ ಉಡುಗೊರೆ ಸಿಗಬಹುದು.
ಧನು ರಾಶಿ: ಸಣ್ಣದಾದರೂ ಸ್ವಂತ ಉದ್ಯೋಗವಿರಬೇಕು ಎನ್ನುವ ಧ್ಯೇಯ ನಿಮ್ಮದು. ನೀವು ಅನಿರೀಕ್ಷಿತವಾಗಿ ಎದುರಾದ ಪರಿಸ್ಥಿತಿಯನ್ನು ನಿಭಾಯಿಸುವ ವಿಧಾನವನ್ನು ಕಲಿಯುವುದು ಯೋಗ್ಯ. ಕೋಪವನ್ನು ಬಹಳ ಶ್ರಮದಿಂದ ನಿಯಂತ್ರಣ ಮಾಡಿಕೊಳ್ಳುವಿರಿ.
ಮಕರ ರಾಶಿ: ದುರಸ್ತಿ ಕಾರ್ಯವನ್ನು ಮಾಡುವವರಿಗೆ ಈ ದಿನ ಒತ್ತಡವಿರುವುದು. ಇಂದು ನೀವು ಅತಿಯಾದ ಹಿಂಸೆಯನ್ನು ಅನುಭವಿಸಬೇಕಾದ ಸ್ಥಿತಿಯು ಬರಬಹುದು.
ಕುಂಭ ರಾಶಿ: ಇನ್ನೊಬ್ಬರಿಗೆ ಹೇಳುವಾಗ ನೀವು ಅದನ್ನು ಆಚರಿಸಬೇಕಾಗಬಹುದು. ಇಲ್ಲವಾದರೆ ನಿಮ್ಮ ಮೇಲೆ ಪ್ರಶ್ನೆಗಳು ಬರಬಹುದು. ನಿಮ್ಮ ದುರಭ್ಯಾಸದಿಂದ ಇಂದಿನ ಸಮಯವನ್ನು ನಷ್ಟಮಾಡಿಕೊಳ್ಳುವಿರಿ.
ಮೀನ ರಾಶಿ: ಧಾರ್ಮಿಕ ನಂಬಿಕೆಗಳು ನಿಮಗೆ ಸತ್ಯವೆನಿಸಿ, ಶ್ರದ್ಧೆಯು ಹೆಚ್ಚಾಗುವುದು. ಇಂದು ನಿಮ್ಮ ಸಲ್ಲದ ಯೋಚನೆಗಳಿಂದ ಮನಸ್ಸು ಹಾಳಾಗುವುದು. ಇತರರು ನಿಮ್ಮ ಕುರಿತು ಬೇಡದ ಮಾತುಗಳನ್ನು ಆಡುವ ಸಾಧ್ಯತೆಯೂ ಹೆಚ್ಚು. ಹಣವು ಬಂದ ಹಾಗೇ ಹೋಗುವುದು.