ಬೆಳ್ತಂಗಡಿ:(ಸೆ.3) ಲಯನ್ಸ್ ಕ್ಲಬ್ ಬೆಳ್ತಂಗಡಿ ಮತ್ತು ಲಯನ್ಸ್ ಸೇವಾ ಟ್ರಸ್ಟ್ ಬೆಳ್ತಂಗಡಿ ಇದರ ಸಹಯೋಗದಲ್ಲಿ ಸೇವಾ ಕಾರ್ಯಕ್ರಮ ಇಂದು ನಡೆಯಿತು. ಸಾನಿಧ್ಯ ಸ್ಕಿಲ್ ಟ್ರೈನಿಂಗ್ ಸೆಂಟರ್ ಇಲ್ಲಿ ಭೇಟಿ ನೀಡಿ ಸಂಸ್ಥೆಗೆ ರೂ. 25000 ಗಳ ಚೆಕನ್ನು ಹಸ್ತಾಂತರ ಮಾಡಲಾಯಿತು.
ಇದನ್ನೂ ಓದಿ: 🔴ಬೆಳ್ತಂಗಡಿ: ವೇಣೂರಿನಲ್ಲಿ ಪ್ರಥಮ ದರ್ಜೆ ಕಾಲೇಜನ್ನು ಆರಂಭಿಸಲು
ನಂತರ ದಯಾ ವಿಶೇಷ ಶಾಲೆ ಲಾಯಿಲ ಇಲ್ಲಿಗೆ ಭೇಟಿ ನೀಡಿ ಸಂಸ್ಥೆಗೆ 25000 ರೂಪಾಯಿಗಳ ದೇಣಿಗೆ ನೀಡಲಾಯಿತು.
ಹೊಸಬೆಳಕು ಸೇವಾ ಸಂಸ್ಥೆ ಬೈಲೂರ್ ಕಾರ್ಕಳ ಇಲ್ಲಿಗೆ ರೂ.25000, ಬೆಳ್ತಂಗಡಿ ಸಂಜಯನಗರದಲ್ಲಿರುವ ಓಲ್ಡ್ ಏಜ್ ಹೋಂ ಇಲ್ಲಿಗೆ ಭೇಟಿ ಕೊಟ್ಟು ರೂಪಾಯಿ 25000 ಮೌಲ್ಯದ ದಿನಸಿ ಹಾಗೂ ಆಹಾರ ಸಾಮಾಗ್ರಿಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಲಯನ್ ದೇವದಾಸ್ ಶೆಟ್ಟಿ ಹಿಬರೋಡಿ, ಕಾರ್ಯದರ್ಶಿ ಲಯನ್ ಕಿರಣ್ ಕುಮಾರ್ ಶೆಟ್ಟಿ, ಲಯನ್ ಸೇವಾ ಟ್ರಸ್ಟ್ ಇದರ ಕಟ್ಟಡ ಸಮಿತಿ ಇದರ ಅಧ್ಯಕ್ಷರಾದ ಲಯನ್ ರಾಜು ಶೆಟ್ಟಿ ಬೆಂಗತ್ಯಾರ್,
ಲಯನ್ ಸೇವಾ ಟ್ರಸ್ಟ್ ಕಟ್ಟಡ ಸಮಿತಿ ಇದರ ಕೋಶಾಧಿಕಾರಿಗಳಾದ ಲಯನ್ ನಿತ್ಯಾನಂದ್ ನಾವರ, ಪೂರ್ವ ಪ್ರಾಂತಿಯ ಅಧ್ಯಕ್ಷರಾದ ಲಯನ್ ವಸಂತ್ ಶೆಟ್ಟಿ, ಶ್ರದ್ದಾ, ಸದಸ್ಯರಾದ ಲಯನ್ ನಾಣ್ಯಪ್ಪ ನಾಯ್ಕ್, ಲಯನ್ ಶಾಲಿನಿ ವಸಂತ್, ಲಯನ್ ದೀಪ ಕಿರಣ್ ಉಪಸ್ಥಿತರಿದ್ದರು.