Mon. Jan 12th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Oyuncular hızlıca işlem yapmak için Bahsegel giriş bağlantısını takip ediyor.

Daily Horoscope - ಇಂದು ಈ ರಾಶಿಯವರಿಗೆ ಆತುರವೇ ಅಪಾಯ ತಂದೊಡ್ಡಬಹುದು

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಸಾಧ್ಯ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:41 ಗಂಟೆ, ರಾಹು ಕಾಲ ಮಧ್ಯಾಹ್ನ 12:31 ರಿಂದ ಸಂಜೆ 02:04, ಯಮಘಂಡ ಕಾಲ ಬೆಳಿಗ್ಗೆ 07:54 ರಿಂದ 09:27ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 10:59 ರಿಂದ 12:31ರ ವರೆಗೆ.

ಮೇಷ ರಾಶಿ : ಬಂಡವಾಳದ ವಿಚಾರದಲ್ಲಿ ಯಾರ ಮಾತೂ ಪಥ್ಯವಾಗದು. ಇಂದು ನಿಮ್ಮ ನಿರೀಕ್ಷೆಯಂತೆ ಬರಬೇಕಾದ ಹಣವು ಬರಬಹುದು. ಪರಿಶ್ರಮವು ಎಂದಿಗಿಂತ ಅಧಿಕವಾಗಿದ್ದು, ಅದಕ್ಕೆ ಯೋಗ್ಯವಾದ ಫಲವು ಸಿಗುವುದು.

ವೃಷಭ ರಾಶಿ : ಇಂದು ನಿಮ್ಮ ಮುಂದೆ ಸಾಲದ ವಿಚಾರ ಬಂದರೆ ಮೌನವಹಿಸುವಿರಿ. ನಿಮ್ಮ‌ ಪ್ರಾಮಾಣಿಕ ಕೆಲಸಕ್ಕೆ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ನ್ಯಾಯಾಲಯದ ಓಡಾಟವು ನಿಮಗೆ ಬೇಸರ ತರಿಸಬಹುದು.

ಮಿಥುನ ರಾಶಿ : ಎಲ್ಲ ಸಮಯದಲ್ಲಿಯೂ ಇನ್ನೊಬ್ಬರಿಗೆ ಪ್ರಶಂಸೆ ಕೊಡಲಾರಿರಿ.‌ ಇಂದು ಹಳೆಯ ಪ್ರಣಯವು ಆರಂಭದ ಸೂಚನೆ ಸಿಗುವುದು. ಸ್ತ್ರೀಯರು ಮನೆಯಲ್ಲಿ ಆದ ಘಟನೆಯಿಂದ ತಾಳ್ಮೆಯನ್ನು ಕಳೆದುಕೊಳ್ಳಬಾರದು.

ಕರ್ಕಾಟಕ ರಾಶಿ : ಮನೆಗೆ ಬೇಕಾದ ವಸ್ತುಗಳನ್ನು ತರಲು ಸಂಗಾತಿಯ ಅನುಮತಿ ಪಡೆಯದೇ ಮಾಡುವಿರಿ. ಇಂದು ನೀವು ವಹಿಸಿಕೊಂಡ ಕಾರ್ಯವನ್ನು ಬಿಡದೇ ಮುನ್ನಡೆಸುವಿರಿ. ಕಛೇರಿಯಲ್ಲಿ ಉದ್ಯೋಗದ ಕಾರಣ ನಿಮ್ಮನ್ನು ದೂರದ ಊರಿಗೆ ಕಳುಹಿಸಬಹುದು.

ಸಿಂಹ ರಾಶಿ : ಮನೆಯಲ್ಲಿ ನಿಮ್ಮ ಆರ್ಥಿಕ ವ್ಯವಹಾರದ ಬಗ್ಗೆ ವಿಚಾರಿಸಬಹುದು. ಇಂದು ನೀವು ವಾಹನವನ್ನು ಚಲಾಯಿಸುವುದು ಬೇಡ. ಹೊಸ ಆದಾಯದ ಮೂಲವನ್ನು ಹುಡುಕುವುದು ಉತ್ತಮ. ನಿಮ್ಮ ಸಾಲವನ್ನು ಮನೆಯವರು ತೀರಿಸಬೇಕಾದೀತು.

ಕನ್ಯಾ ರಾಶಿ : ಬಿಡುವಿನ ವೇಳೆಯನ್ನು ಮಕ್ಕಳು ದುರುಪಯೋಗ ಮಾಡಿಕೊಳ್ಳುವರು. ಏನಾದರೂ ಕೆಲಸವನ್ನು ಕೊಡುತ್ತಲೇ ಅವರನ್ನು ಸರಿಯಾದ ದಾರಿಗೆ ತರಬೇಕಾದೀತು.

ತುಲಾ ರಾಶಿ : ನಿಮಗೆ ಒಳ್ಳೆಯ ಭೂಮಿಯ ಲಾಭವಾಗುವುದು. ಆದರೆ ಅದನ್ನು ಖರೀದಿಸುವ ಶಕ್ತಿ ನಿಮಗೆ ಸಿಗದೇ ಕೈಬಿಡಬೇಕಾದೀತು. ಇಂದು ನಿಮ್ಮ ಹಣವು ಬಲವಂತದಿಂದ ಬರಲಿದೆ. ವೈದ್ಯಕೀಯ ವೃತ್ತಿಯಲ್ಲಿ ಚುರುಕುತನ ಬೇಕಾಗಬಹುದು.

ವೃಶ್ಚಿಕ ರಾಶಿ : ಇಂದು ಸ್ನೇಹಿತರ ಜೊತೆ ಹೆಚ್ಚು ಕಾಲವನ್ನು ವ್ಯಯಿಸುವಿರಿ. ವಿದ್ಯುತ್ ಉಪಕರಣಗಳ ಮಾರಾಟವನ್ನು ನೀವು ಮಾಡುತ್ತಿದ್ದರೆ ಲಾಭವನ್ನು ಪಡೆಯಬಹುದಾಗಿದೆ. ನಿಮ್ಮ ಬಳಿ ಬಂದ ಕಾರ್ಯವನ್ನು ನೀವು ಬಿಟ್ಟುಕೊಡಲಾರಿರಿ.

ಧನು ರಾಶಿ : ಮಾನಸಿಕವಾಗಿ ನಿಮಗೆ ಇಂದು ಏರಿಳಿತಗಳು ಹೆಚ್ಚಾಗುವುದು. ಎಲ್ಲವನ್ನೂ ನಕಾರಾತ್ಮಕವಾಗಿ ಭಾವಿಸುವಿರಿ. ಇಂದು ನಿಮ್ಮ ನಿರ್ಲಕ್ಷ್ಯದಿಂದ ವ್ಯಾಪಾರದಲ್ಲಿ ವಂಚನೆ ಸಾಧ್ಯವಾದೀತು.

ಮಕರ ರಾಶಿ : ಆಸ್ತಿ ಹಂಚಿಕೆಯ ಬಗ್ಗೆ ನಿಮಗೆ ಸಮಾಧಾನ ಸಿಗದು. ಯಾವ ಸೋಲಿಗೂ ಹತಾಶರಾಗುವುದು ಬೇಡ. ಮರೆಯಲು ಬೇಕಾದ ಚಟುವಟಿಕೆಗಳನ್ನು ಮಾಡಿ. ಚಂಚಲಸ್ವಭಾವವನ್ನು ನಿಯಂತ್ರಿಸಲು ಕಷ್ಟವಾದೀತು.‌

ಕುಂಭ ರಾಶಿ : ನಿಮ್ಮ ಹಿಡಿತದಿಂದ ಜವಾಬ್ದಾರಿ ತಪ್ಪಿಹೋಗಬಹುದು. ಸುಮ್ಮನೇ ಇಂದು ಯಾರದೋ ಮೇಲೆ ದ್ವೇಷವನ್ನು ಸಾಧಿಸುತ್ತ ಇರುವುದು ಬೇಡ. ಕಾರ್ಯದಲ್ಲಿ ವಿಳಂಬ ಗತಿಯಾಗಲಿದೆ.

ಮೀನ ರಾಶಿ : ದೊಡ್ಡ ಉದ್ಯೋಗವನ್ನು ಪಡೆಯುವ ಆಸೆ ಇರುವುದು.‌ ನೀವು ಬೇಕಾಗಿರುವುದನ್ನು ಮಾಡುವುದಕ್ಕಿಂತ ಬೇರೆಯದನ್ನೇ ಮಾಡುವಿರಿ.ಬಂಧುಗಳ ಭೇಟಿಯು ಖುಷಿ ಕೊಡಬಹುದು. ನಿಮ್ಮನ್ನು ಬಹು ದಿನಗಳಿಂದ ಬಾಧಿಸುತ್ತಿದ್ದ ಅನಾರೋಗ್ಯದಿಂದ ಮುಕ್ತಿ ಪಡೆಯುವಿರಿ.

Leave a Reply

Your email address will not be published. Required fields are marked *