ಕುಂದಾಪುರ:(ಸೆ.3) ಕರಾವಳಿ ಕ್ರೈಸ್ತ ಸಮುದಾಯ ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರಿಗೆ ನೀಡಿದ ಮನವಿ ಪರಿಗಣಿಸಿ ಕೊಂಕಣ ರೈಲ್ವೆ ನಿಗಮಕ್ಕೆ ಕೋಟ ನೀಡಿದ ಸೂಚನೆಯಂತೆ ಇದೀಗ ವೇಲಾಂಕಣಿ ಮಡಗಾಂವ್ ಮಧ್ಯೆ ವಿಶೇಷ ರೈಲು ಘೋಷಣೆಯಾಗಿದೆ.
ಇದನ್ನೂ ಓದಿ: 🚌KSRTC bus: ಗಣೇಶ ಹಬ್ಬಕ್ಕೆ 1500 ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್
ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ವೇಲಾಂಕಣಿ ಫೆಸ್ಟಿವಲ್ ಗಾಗಿ ಕುಂದಾಪುರ ರೈಲು ಸಮಿತಿಗೆ ಸಲ್ಲಿಸಿದ್ದ ಮನವಿಯಲ್ಲಿ ಕುಂದಾಪುರ ಕ್ರೈಸ್ತ ಸಮುದಾಯ ವೇಲಾಂಕಣಿ ವಿಶೇಷ ರೈಲಿನ ಆರಂಭಕ್ಕೆ ಮನವಿ ಮಾಡಿದ್ದರು.
ಈ ಮನವಿಯನ್ನು ಸಂಸದರ ಮುಂದಿಟ್ಟಿದ್ದ ಕುಂದಾಪುರ ರೈಲು ಸಮಿತಿಯ ಅಧ್ಯಕ್ಷ ಶ್ರೀಗಣೇಶ್ ಪುತ್ರನ್ ಮನವಿ ಪರಿಗಣಿಸಲು ಸಂಸದರನ್ನು ಕೋರಿದ್ದರು.
ಈ ಬೇಡಿಕೆಯಂತೆ ಕಳೆದ ವಾರ ಕೊಂಕಣ ರೈಲ್ವೆ ನಿಗಮದ ಆಡಳಿತ ನಿರ್ದೇಶಕರ ಜತೆ ನಡೆದ ಸಭೆಯಲ್ಲಿ ಸಂಸದರು ವೇಲಾಂಕಣಿ ವಿಶೇಷ ರೈಲಿಗೆ ಸ್ಪಷ್ಟ ಸೂಚನೆ ನೀಡಿದ್ದರು.
ಈ ಸೂಚನೆಯಂತೆ ಇಂದು ಕೊಂಕಣ ರೈಲ್ವೆ ವಿಶೇಷ ರೈಲಿನ ಪ್ರಕಟಣೆ ನೀಡಿದ್ದು, ಮಧ್ಯಾಹ್ನ 12 ಕ್ಕೆ ಸೆಪ್ಟೆಂಬರ್ 6 ರಂದು ಮಡಗಾಂವ್ ಬಿಡುವ ರೈಲು ಸಂಜೆ 4.20 ಕ್ಕೆ ಕುಂದಾಪುರ ತಲುಪಿ ಮರುದಿನ ಮದ್ಯಾಹ್ನ 12 ಕ್ಕೆ ವೇಲಾಂಕಣಿ ತಲುಪಲಿದೆ.
ಅದೇ ದಿನ ರಾತ್ರಿ 11.50 ಕ್ಕೆ ಹೊರಟು ಮರುದಿನ ಸಂಜೆ 6.40 ಕ್ಕೆ ಕುಂದಾಪುರ ಮೂಲಕ ರಾತ್ರಿ 11 ಕ್ಕೆ ಮಡಗಾಂವ್ ತಲುಪಲಿದೆ.