Wed. Nov 20th, 2024

Belthangadi: ಶಿರ್ಲಾಲು ಗ್ರಾಮಸಭೆಯಲ್ಲಿ ಹೊಡೆದಾಟ – ಎರಡು ಗುಂಪಿನ ವಿರುದ್ದ ಪ್ರಕರಣ ದಾಖಲು

ಬೆಳ್ತಂಗಡಿ:(ಸೆ.4) ಶಿರ್ಲಾಲು ಗ್ರಾಮ ಪಂಚಾಯತ್ ನಲ್ಲಿ ಸೆ.3 ರಂದು ನಡೆದ ಗ್ರಾಮ ಸಭೆಯಲ್ಲಿ ಕುಶಾಲಪ್ಪ ಗೌಡ ಹಾಗೂ ನವೀನ ಸಾಮಾನಿ ಬೆಂಬಲಿಗರ ನಡುವೆ ದೇವಸ್ಥಾನವೊಂದರ ಖರ್ಚು ವೆಚ್ಚಗಳ ಬಗ್ಗೆ ಮಾತಿನ ಚಕಮಕಿ

ಇದನ್ನೂ ಓದಿ: 🟠ಗುರುವಾಯನಕೆರೆ: ಪ್ರೌಢಶಾಲಾ ಚಿತ್ರಕಲಾ ಶಿಕ್ಷಕ ವಿ.ಕೆ.ವಿಟ್ಲರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಹಾಗೂ ಎರಡು ತಂಡಗಳ ನಡುವೆ ನಡೆದ ಹೊಡೆದಾಟದಲ್ಲಿ ಎರಡು ಕಡೆಯವರು ಪರಸ್ಪರ ಆರೋಪ ಹೊರಿಸಿ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎರಡು ಕಡೆಯವರ ಮೇಲೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕರಂಬಾರು ನಿವಾಸಿ ಆನಂದ ಪೂಜಾರಿ, ಎಂಬವರು ನೀಡಿದ ದೂರಿನಲ್ಲಿ ನವೀನ ಸಾಮಾನಿ, ರಾಮ್ ಕುಮಾರ್, ಚಿಂಕು ಯಾನೆ ರವೀಂದ್ರ, ದಿನೇಶ್ ಹಾಗೂ ಪುರುಷೋತ್ತಮ ಎಂಬವರು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿರುತ್ತಾರೆ. ಈ ಸಮಯ ಗಲಾಟೆ
ತಡೆಯಲು ಬಂದ ಮಹಿಳೆಯೋರ್ವರಿಗೂ ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ದೂರಿನ ಮೇರೆಗೆ ವೇಣೂರು ಪೋಲಿಸ್‌ ಠಾಣೆಯಲ್ಲಿ ಅ.ಕ್ರ. 73/2024 ಕಲಂ: 352, 115(2), 74, 351(2) r/w 3(5) BNS-2023ರಂತೆ ಪ್ರಕರಣ ದಾಖಲಾಗಿರುತ್ತದೆ.

ಪ್ರತಿದೂರು:
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಂಬಾರು ನಿವಾಸಿ ರವೀಂದ್ರ ಹಾಗೂ ರಾಮ್ ಕುಮಾರ್ ಅವರು ಪ್ರತಿ ದೂರು ನೀಡಿದ್ದು, ತಮಗೆ ಆರೋಪಿಗಳಾದ ಕುಶಾಲಪ್ಪ ಗೌಡ ಮತ್ತು ಆನಂದ ಪೂಜಾರಿ ಎಂಬವರುಗಳು ಅವ್ಯಾಚವಾಗಿ ಬೈದು ಹಲ್ಲೆ ನಡೆಸಿರುತ್ತಾರೆ ಎಂದು ಆರೋಪಿಸಿದ್ದಾರೆ.

ಪ್ರತಿದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 74/2024 ಕಲಂ :, 118(1), 352 R/W 3(5) BNS-2023 ರಂತೆ ಪ್ರಕರಣ ದಾಖಲಿಸಲಾಗಿದೆ ಎರಡೂ ಪ್ರಕರಣಗಳ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *