Father – Daughter Relationship: (ಸೆ.4) ಡೆಲಿವರಿ ಏಜೆಂಟ್ ಗಳ ಕೆಲಸ ಹೇಗಿರುತ್ತೆ, ಎಷ್ಟು ಒತ್ತಡ ಇರುತ್ತೆ ಅನ್ನೋದು ಈಗಾಗಲೇ ತಿಳಿದಿದೆ. ಆದ್ರೆ ಇಲ್ಲೊಂದು ದೃಶ್ಯ ಕಂಡಾಗ ಮರುಗದೇ ಇರಲು ಸಾಧ್ಯವಿಲ್ಲ.
ಇದನ್ನೂ ಓದಿ: 🌈ಉಜಿರೆ : ಅನುಗ್ರಹ ಶಾಲೆಯಲ್ಲಿ “ಕಲರ್ಸ್ ಡೇ” -2024-25
ಯಾಕೆಂದರೆ ತಂದೆಯೊಬ್ಬ ತನ್ನ ಪುಟ್ಟ ಕಂದಮ್ಮನನ್ನು ಕಂಕುಳಲ್ಲಿ ಎತ್ತಿಕೊಂಡೇ ಎಲ್ಲೆಡೆ ಡೆಲಿವರಿ ಮಾಡುತ್ತಿದ್ದಾನೆ. ಕಾರಣ ಆ ಪುಟ್ಟ ಕಂದನ ಆರೈಕೆ, ಪಾಲನೆ, ಪೋಷಣೆಯ ಎಲ್ಲವೂ ಆ ತಂದೆಯ ಮೇಲಿದೆ. ಎಲ್ಲದಕ್ಕೂ ಮಿಗಿಲಾಗಿ ಮಗುವಿನ ಮೇಲೆ ಮಮಕಾರವಿದೆ.
ತಾಯಿ ಮಡಿಲಲ್ಲಿ , ಪಾಲನೆಯಲ್ಲಿ ಸ್ವಚ್ಚಂದವಾಗಿ ಆಟವಾಡಬೇಕಿದ್ದ ಈ ಮಗು ಅಪ್ಪನ ಜೊತೆ ಡೆಲಿವರಿ ಕೆಲಸಕ್ಕಾಗಿ ಅಪ್ಪನ ತೋಳಿನಲ್ಲಿ ನೇತಾಡುತ್ತಿದೆ. ಇದು ದೆಹಲಿಯ ಝೋಮೆಟೋ ಡೆಲಿವರಿ ಬಾಯ್ ಸೋನು ಬದುಕಿನ ಪಯಣ ಎಂತವರ ಮನ ಕಲುಕಿಸುತ್ತದೆ. ವಿಶೇಷ ಅಂದ್ರೆ ತಂದೆ ಸೋನುವಿಗೆ ಈ ಪುಟ್ಟ ಕಂದನ ನಗು ಎಲ್ಲವನ್ನೂ ಮರೆಸುತ್ತಿದೆ, ಬದುಕಿನ ಬಂಡಿ ಸಾಗಿಸುತ್ತಿದೆ ಎನ್ನುತ್ತಾರೆ.
ಡೆಲಿವರಿ ಏಜೆಂಟ್ ಸೋನು, ದೆಹಲಿಯ ಖಾನ್ ಮಾರ್ಕೆಟ್ ಬಳಿ ಇರುವ ಸ್ಟಾರ್ ಬಕ್ಸ್ ಶಾಪ್‌ಗೆ ಆರ್ಡರ್ ಪಡೆದುಕೊಳ್ಳಲು ಬಂದಾಗ ಝೋಮೆಟೋ ಶಾಪ್ ಮ್ಯಾನೇಜರ್ ದೇವೇಂದ್ರ ಮೆಹ್ರಾ ಅವರ ಗಮನಸೆಳೆಯಲು ಕಾರಣ ಸೋನು ಜೊತೆಗೆ 2 ವರ್ಷದ ಪುಟ್ಟ ಕಂದನೂ ಆಗಮಿಸಿತ್ತು.
ಕುತೂಹಲಕ್ಕಾಗಿ ಸೋನು ಬಳಿ ಈ ಕುರಿತು ವಿಚಾರಿಸಿದಾಗ ಸಂಕಷ್ಟದ ಬದುಕಿನ ಕಥೆಯೇ ಬಯಲಾಗಿದೆ. ತಕ್ಷಣವೇ ಮ್ಯಾನೇಜರ್ ಸ್ಟಾರ್ ಬಕ್ಸ್‌ನ ಐಸ್‌ಕ್ರೀಮ್ ತಿನಿಸನ್ನು ಮಗುವಿಗೆ ಉಚಿತವಾಗಿ ನೀಡಿದ್ದಾರೆ.
ಸೋನು ಕುರಿತು ಸೋಶಿಯಲ್ ಮೀಡಿಯಾದಲ್ಲಿ ದೇವೇಂದ್ರ ಮೆಹ್ರಾ ಅವರು, ಸಿಂಗಲ್ ಪೇರೆಂಟ್ ಆಗಿರುವ ಸೋನು, ಬದುಕಿನಲ್ಲಿ ಹಲವು ಸವಾಲು ಎದುರಿಸುತ್ತಿದ್ದಾನೆ. ಜೀವನ ಸಾಗಿಸಲು ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ.
ಈ ಸಂಪಾದನೆಯಲ್ಲಿ ತನ್ನ ಮಗಳನ್ನು ಸಾಕಿ ಸಲಹುತ್ತಿದ್ದಾನೆ. ಕಷ್ಟ, ಸವಾಲುಗಳ ನಡುವೆ ಮಗಳ ಮೇಲಿನ ಪ್ರೀತಿ ಸೋನುವನ್ನು ಮತ್ತಷ್ಟು ಉತ್ಸಾಹ ಹಾಗೂ ಚೈತನ್ಯ ನೀಡುತ್ತಿದೆ. ಕಷ್ಟದಲ್ಲೂ ಮಗಳ ಮುಖದಲ್ಲಿ ನಗು ಕಡಿಮೆ ಮಾಡಿಲ್ಲ, ಆಕೆಯ ಮುಖದಲ್ಲಿನ ನಗು ನಮಗೂ ಚೈತನ್ಯ ನೀಡಿದೆ. ಈ ಸಂದರ್ಭದಲ್ಲಿ ಸೋನು ಹಾಗೂ ಆತನ ಮಗಳಿಗೆ ಶುಭ ಹಾರೈಸುತ್ತೇವೆ ಎಂದು ದೇವೇಂದ್ರ ಮೆಹ್ರಾ ಹೇಳಿಕೊಂಡಿದ್ದಾರೆ.