Sasikant Senthil:(ಸೆ.4) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಂದರ್ಭದಲ್ಲಿ ಶಾಲಾ ಕಾಲೇಜುಗಳಿಗೆ ಒಂದರ ಹಿಂದೆ ಒಂದಂತೆ ರಜೆ ನೀಡಿ ಭಾರೀ ಫೇಮಸ್ ಆಗಿದ್ದ ದಕ್ಷ ಜಿಲ್ಲಾಧಿಕಾರಿಯೆಂದರೆ ಅದು ಸಸಿಕಾಂತ್ ಸೆಂಥಿಲ್. ಆದರೆ ಸಸಿಕಾಂತ್ ಡಿಸಿ ಹುದ್ದೆಗೆ ರಾಜೀನಾಮೆ ನೀಡಿ ಭಾರೀ ಸುದ್ದಿಯಾಗಿದ್ದರು.
ಇದನ್ನೂ ಓದಿ: ⛔Bangalore Prostitution: ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆ
ಇದೀಗ ಸಂಸದರಾಗಿಯೂ ಹೆಸರು ಮಾಡುತ್ತಿದ್ದಾರೆ. ಆದಾಗ್ಯೂ ಅವರು ಇದ್ದಕ್ಕಿದ್ದಂತೆ ದಿಢೀರ್ ಎಂದು ರಾಜೀನಾಮೆ ನೀಡಿದ್ದು ಯಾಕೆಂದು ಯಾರಿಗೂ ತಿಳಿಯಲಿಲ್ಲ. ಇದು ಕುತೂಹಲವಾಗಿಯೇ ಉಳಿದಿತ್ತು. ಆದರೀಗ ಈ ವಿಚಾರವನ್ನು ಸ್ವತಃ ಸೆಂಥಿಲ್ ಅವರೇ ರಿವೀಲ್ ಮಾಡಿದ್ದಾರೆ.
ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಮಂಗಳವಾರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಜಿಲ್ಲಾಧಿಕಾರಿ, ತಮಿಳುನಾಡಿನ ಹಾಲಿ ಸಂಸದ ಸಸಿಕಾಂತ್ ಸೆಂಥಿಲ್ ಅವರು ಡಿಸಿ ಹುದ್ದೆಗೆ ರಾಜೀನಾಮೆ ನೀಡಿದ ರಹಸ್ಯವನ್ನು ಬಯಲು ಮಾಡಿದ್ದಾರೆ.
ಮಂಗಳೂರಿನಲ್ಲಿ ನಾನು ಜಿಲ್ಲಾಧಿಕಾರಿಯಾಗಿದ್ದಾಗ ಹೆಂಡತಿಯೊಟ್ಟಿಗೆ ಕುಳಿತು ಟಿವಿ ನೋಡುವಾಗ, ಆಕೆ ಒಂದು ಮಾತು ಹೇಳಿದಳು. ಆ ಮಾತು ಇಡೀ ರಾತ್ರಿ ನನ್ನನ್ನು ಕಾಡಿತು. ನೋವುಂಟುಮಾಡಿತು. ಹೀಗಾಗಿ ಯೋಚಿಸಿ ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಿದೆ ಎಂದಿದ್ದಾರೆ.
ಸಸಿಕಾಂತ್ ಸೆಂಥಿಲ್ ಗೆ ಹೆಂಡತಿ ಹೇಳಿದ್ದೇನು?
ರಾಜೀನಾಮೆಗೆ ಕಾರಣ ತಿಳಿಸಿದ ಸೆಂಥಿಲ್ ಅವರು ‘ಮೋದಿ ಪ್ರಧಾನಿಯಾದ ಬಳಿಕ ಕಾಶ್ಮೀರದ ಆರ್ಟಿಕಲ್ 370 ತೆಗೆದು ಹಾಕಿದರು. ಅದರ ಜೊತೆಗೆ ಇಡೀ ಕಾಶ್ಮೀರದಲ್ಲಿ ಆರ್ಮಿ ಹಾಕಿ ಗೃಹಬಂಧನ ಮಾಡಿದ್ದರು. ಆಗ ನಾನು ಇವತ್ತು ಕಾಶ್ಮೀರಕ್ಕೆ ಆದ ಪರಿಸ್ಥಿತಿ ನಾಳೆ ಮಂಗಳೂರಿಗೂ ಆಗಬಹುದು ಅಂದುಕೊಂಡೆ.
ಇದೇ ಹೊತ್ತಲ್ಲಿ ನನ್ನ ಪತ್ನಿ ಮಂಗಳೂರಿಗೆ ಬಂದಳು. ನಾವು ಮಂಗಳೂರಲ್ಲಿ ಟಿವಿ ನೋಡುತ್ತಿದ್ದಾಗ, ಕಾಶ್ಮೀರದ ಮಿಲಿಟರಿ ದೃಶ್ಯ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಆಗ ನನ್ನ ಪತ್ನಿ ನನಗೆ ಕಾಲೇಜು ದಿನದ ಸೆಂಥಿಲ್ ಹೇಗಿದ್ದ ಅಂದಳು. ನೀನು ಕಾಲೇಜ್‌ನಲ್ಲಿ ರೆಬಲ್ ಆಗಿದ್ದೆ. ಈಗ ಡಿಸಿಯಾಗಿ ಸರ್ಕಾರಿ ಬಂಗ್ಲೆಯಲ್ಲಿ ಜಾಲಿಯಾಗಿದ್ದೀಯಾ ಅಂದಳು.
ಇದು ನನಗೆ ಇಡೀ ರಾತ್ರಿ ತುಂಬಾ ನೋವು ಕೊಟ್ಟಿತು. ಮರುದಿನ ಬೆಳಿಗ್ಗೆ ಎದ್ದು ಪತ್ನಿ ಬಳಿ ರಾಜೀನಾಮೆ ಕೊಡುತ್ತೇನೆ ಎಂದೆ. ಇದಾದ ಮೂರು ದಿನಗಳಲ್ಲಿ ನನ್ನ ಡಿಸಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದೆ’ ಎಂದು ತಿಳಿಸಿದರು.