ಮಹಾರಾಷ್ಟ್ರ :(ಸೆ.6) ಇತ್ತೀಚೆಗೆ ಮಾನವೀಯತೆಯೇ ಸತ್ತು ಹೋಗಿದೆ ಅನ್ನಿಸುತ್ತದೆ. ಜನ ವಿದ್ಯಾವಂತರಾಗುತ್ತಿದ್ದಂತೆ ಮಾನವೀಯತೆ ಅನ್ನೋದು ಮೌಲ್ಯ ಕಳೆದುಕೊಳ್ಳುತ್ತಿದೆ.

ಇದನ್ನೂ ಓದಿ: 🟣ಪುತ್ತೂರು: ಪುತ್ತೂರಿನಲ್ಲಿ ತಯಾರಾಗುವ ಈ ಮಣ್ಣಿನ ಗಣಪನ ವಿಗ್ರಹಕ್ಕಿದೆ ಭಾರೀ ಬೇಡಿಕೆ
ಸರಿಯಾದ ಚಿಕಿತ್ಸೆ ದೊರೆಯದ ಹಿನ್ನೆಲೆ ಇಬ್ಬರು ಮಕ್ಕಳನ್ನು ತಂದೆ ತಾಯಿ ಕಳೆದುಕೊಂಡಿದ್ದಾರೆ. ಆದರೆ ಮಕ್ಕಳ ಹೆಣ ಸಾಗಿಸಲು ಆಂಬ್ಯುಲೆನ್ಸ್ ಸಿಗದೆ ಬರೋಬ್ಬರಿ 15 ಕಿ.ಮೀ ತಮ್ಮ ಹೆಗಲ ಮೇಲೆ ಹೊತ್ತು ಸಾಗಿಸಿದ್ದಾರೆ.
ಅಲ್ಲದೆ ಕೆಸರು ಮಯ ರಸ್ತೆಯಲ್ಲಿ ಈ ಪೋಷಕರು ಸಾಗಿದ ಈ ಹೃದಯವಿದ್ರಾವಕ ಘಟನೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇಂಥ ಕ್ರೂರ ವ್ಯವಸ್ಥೆ ಬಗ್ಗೆ ನೆಟ್ಟಿಗರು ಹಿಡಿಶಾಪ ಹಾಕುತ್ತಿದ್ದಾರೆ.






ಮಕ್ಕಳನ್ನು ಕಳೆದುಕೊಂಡ ಈ ಪೋಷಕರು ಮಹಾರಾಷ್ಟ್ರದ ಗಡ್ಡಿರೋಲಿಯಲ್ಲಿ ಅಹೇರಿ ತಾಲೂಕಿನ ದಂಪತಿಗಳು. ಇವರು ತಮ್ಮ ಮಕ್ಕಳ ಮೃತ ದೇಹಗಳನ್ನು ಹೊತ್ತೊಯ್ಯುತ್ತಿರುವ ವೀಡಿಯೊವನ್ನು ಕಾಂಗ್ರೆಸ್ ಮುಖಂಡ ವಿಜಯ್ ವಾಡೆಟ್ಟಿವಾರ್ ಹಂಚಿಕೊಂಡಿದ್ದಾರೆ. ಸುಮಾರು 10 ವರ್ಷದೊಳಗಿನ ಇಬ್ಬರು ಗಂಡು ಮಕ್ಕಳು ಜ್ವರದಿಂದ ಬಳಲುತ್ತಿದ್ರು. ಮಕ್ಕಳ ಆನಾರೋಗ್ಯದಿಂದ ಕಂಗೆಟ್ಟ ದಂಪತಿ ಗಡ್ಡಿರೋಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ವೈದ್ಯರು ಸರಿಯಾದ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ಎರಡು ಗಂಡು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.
ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಇದ್ದ ಇಬ್ಬರು ಮಕ್ಕಳನ್ನು ಈ ನತದೃಷ್ಟದಂಪತಿ ಕಳೆದುಕೊಂಡಿದ್ದಾರೆ. ಇದೀಗ ಕಣ್ಣೀರಲ್ಲಿ ಕೈತೊಳೆಯುತ್ತಿದ್ದು, ಅವರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆ ಸಂಬಂಧ ಸಾವರ್ಜನಿಕರು ಸರ್ಕಾರ ಮತ್ತು ಆಡಳಿತವನ್ನು ಟೀಕಿಸುತ್ತಿದ್ದಾರೆ.